ಇದು ೨೦೦೮ರ ನವೆಂಬರ್ ತಿಂಗಳಲ್ಲಿ ನಡೆದ ಒಂದು ಘಟನೆ. ಅಮೆರಿಕಾದ ಫ್ಲೋರಿಡಾದ ೧೯ ವರ್ಷ ಪ್ರಾಯದ ಅಬ್ರಹಾಂ ಬಿಗ್ಸ್ ಎಂಬ ಯುವಕ ‘ಬಾಡಿ ಬಿಲ್ಡಿಂಗ್’ನ ಒಂದು ಆನ್‌ಲೈನ್ ಫೋರಮ್‌ನಲ್ಲಿ ಒಂದು ಸೂಸೈಡ್ ನೋಟನ್ನು ಹಾಕಿ, ತನ್ನ ವೆಬ್ ಕ್ಯಾಮೆರಾವನ್ನು ಚಾಲೂ ಮಾಡಿದನು. ನೂರಾರು ಜನ ನೋಡುತ್ತಿದ್ದಂತೆಯೇ ಅವನು ಒಂದಷ್ಟು ನಿದ್ರೆ ಮಾತ್ರೆಗಳನ್ನು ನುಂಗಿ, ವೆಬ್ ಕ್ಯಾಮೆರಾಕ್ಕೆ ಬೆನ್ನು ಹಾಕಿ ಮಲಗಿಕೊಂಡನು. ಅದನ್ನು ನೋಡುತ್ತಿದ್ದವರಲ್ಲಿ, ಹೆಚ್ಚಿನವರು ಅಮೆರಿಕನ್ನರು, ಒಬ್ಬರೂ ಅವನ ಸಹಾಯಕ್ಕೆ ಮುಂದಾಗಲೂ ಇಲ್ಲ, ಅವನು ಸತ್ತನೋ ಜೀವಂತವಿದ್ದನೋ ಎಂದು ತಿಳಿದುಕೊಳ್ಳಲು ಪ್ರಯತ್ನಪಡಲೂ ಇಲ್ಲ.
ಆದರೆ, ೮,೫೦೦ ಕಿ. ಮೀ. ಗೂ ಹೆಚ್ಚು ದೂರದ ಬೇರೊಂದು ಭೂಖಂಡದಲ್ಲಿರುವ ಗುಜರಾತಿನ ಅಹ್ಮದಾಬಾದ್‌ನ ದುಶ್ಯಂತ ದುಬೇ ಎಂಬ ೧೭ ವರ್ಷ ಪ್ರಾಯದ ಒಬ್ಬ ಯುವಕ ಕೆಲವು ಗಂಟೆಗಳ ನಂತರ ಆ ವಿಡಿಯೋ ಪೋಸ್ಟನ್ನು ನೋಡಿ ಆಘಾತಗೊಂಡನು. ಇತರರಂತೆ ಸುಮ್ಮನಿರಲು ಮನಸ್ಸು ಬಾರದೆ ಇಂಟರ್‌ನೆಟ್ಟಲ್ಲಿ ಬಹಳಷ್ಟು ಹುಡುಕಾಡಿ ಆ ಯುವಕನ ನಿಜ ಹೆಸರು, ಅವನಿರುವ ಜಾಗ ಮತ್ತು ಅವನ ಫೋನ್ ನಂಬರನ್ನು ಪತ್ತೆ ಮಾಡಿ, ಆ ಬಾಡಿ ಬಿಲ್ಡಿಂಗ್ ಫೋರಮ್‌ನಲ್ಲಿ ಹಂಚಿಕೊಂಡು, ಯಾರಾದರೂ ಸಹಾಯ ಮಾಡಿ ಎಂದು ಕೇಳಿಕೊಂಡನು.
ಆದರೆ, ಆಗಲೂ ಯಾರೂ ಮುಂದೆ ಬರಲಿಲ್ಲ. ಅದು ರಾತ್ರಿಯ ಸಮಯ. ಆಗ ದುಶ್ಯಂತ ದುಬೇ ಮಲಗಿದ್ದ ತನ್ನ ತಂದೆ ತಾಯಿಯನ್ನು ಎಬ್ಬಿಸಿದನು. ಅದು ಈಗಿನಂತೆ ಸೋಷಿಯಲ್ ಮೀಡಿಯಾ, ಸ್ಮಾರ್ಟ್‌ಫೋನ್ ಮತ್ತು ಅನ್‌ಲಿಮಿಟೆಡ್ ಕರೆಗಳ ಕಾಲವಾಗಿರಲಿಲ್ಲ. ಅವನು ತನ್ನ ತಾಯಿಯ ಮೊಬೈಲ್ ಫೋನಲ್ಲಿ ಇಂಟರ್‌ನೇಶನಲ್ ಕರೆ ಮಾಡುವ ಸವಲತ್ತನ್ನು ಸಕ್ರಿಯಗೊಳಿಸಿ, ಮಿಯಾಮಿ ಪೊಲೀಸ್ ಇಲಾಖೆಯ ಎಮರ್ಜೆನ್ಸಿ ಲೈನಿಗೆ ಕರೆ ಮಾಡಿ, ವಿಷಯ ತಿಳಿಸಿದನು. ಅಲ್ಲಿಯ ಪೊಲೀಸರು ಫ್ಲೋರಿಡಾದ ಬ್ರೊವಾರ್ಡ್ ಕೌಂಟಿ ಪ್ರದೇಶದ ಶರೀಫರಿಗೆ ಫೋನ್ ಮಾಡಲು ತಿಳಿಸಿದರು. ಅಷ್ಟರಲ್ಲಿ, ಅವನ ತಾಯಿಯ ಫೋನ್ ಕರೆನ್ಸಿ ಮುಗಿದು ಹೋಗಿದ್ದುದರಿಂದ ಅವನು ಬ್ರೊವಾರ್ಡ್ ಕೌಂಟಿ ಪ್ರದೇಶದ ಶರೀಫರ ಫೋನ್ ನಂಬರನ್ನು ಫೋರಮ್‌ನಲ್ಲಿ ಹಾಕಿ, ಯಾರಾದರೂ ಅವರಿಗೆ ಫೋನ್ ಮಾಡುವಂತೆ ಕೋರಿದನು. ಯಾರೋ ಫೋನ್ ಮಾಡಿದರೆಂದು ಕಾಣುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅಬ್ರಹಾಂ ಬಿಗ್ಸ್ ಮಲಗಿದ್ದಲ್ಲಿ ಪೊಲೀಸರು ಬಂದು, ವೆಬ್ ಕ್ಯಾಮೆರಾವನ್ನು ಮುಚ್ಚಿದುದು ಕಾಣಿಸಿತು.
ಕೆಲವು ಗಂಟೆಗಳ ನಂತರ ಅಬ್ರಹಾಂನ ಸಹೋದರಿ ಅವನು ತೀರಿಕೊಂಡನೆಂಬ ಮಾಹಿತಿಯನ್ನು ಫೋರಮ್‌ನಲ್ಲಿ ಹಾಕಿದಳು. ಆ ಘಟನೆ ಒಂದು ರಿಸರ್ಚ್ ಪೇಪರಿಗೆ ವಸ್ತುವಾಗಿ, ದುಶ್ಯಂತನಿಗೆ ಜಗತ್ತಿನ ವಿವಿಧೆಡೆಗಳಿಂದ ಮೆಚ್ಚುಗೆಯ ಸಂದೇಶಗಳು ಬಂದವು. ಆದರೆ, ದುಶ್ಯಂತ್ ದುಬೇ ‘ಇದು ನನಗೆ ಅರ್ಥವಾಗುವುದಿಲ್ಲ. ನಾನು ಏನು ಮಾಡಿದ್ದೆನೋ ಅದಕ್ಕೆ ಇಷ್ಟೆಲ್ಲ ಮೆಚ್ಚುಗೆ, ಹೊಗಳಿಕೆ ಏಕೆ ಎಂಬುದು ತಿಳಿಯುತ್ತಿಲ್ಲ. ಯಾರೇ ಒಬ್ಬ ಮನುಷ್ಯ ಮಾಡಬೇಕಾದುದನ್ನು ನಾನು ಮಾಡಿದೆ, ಅಷ್ಟೆ. ಇದರಲ್ಲಿ ವಿಶೇಷವಾದುದೇನೂ ಇಲ್ಲ. ವಾಸ್ತವದಲ್ಲಿ, ಮೊತ್ತ ಮೊದಲಿಗೆ ಅಬ್ರಹಾಂ ಬಿಗ್ಸ್‌ನ ಪೋಸ್ಟ್ ನೋಡಿದ ವ್ಯಕ್ತಿ ಈ ಕೆಲಸವನ್ನು ಮಾಡಬೇಕಿತ್ತು’ ಎಂದು ತನ್ನ ಆ ಕೆಲಸ ಒಂದು ಸಾಮಾನ್ಯ ಮಾನವೀಯ ಕೆಲಸವಷ್ಟೇವಾಗಿತ್ತು ಎಂದು ಹೇಳುತ್ತಾರೆ. ಆದರೆ, ೨೦೦೮ರ ಆ ಘಟನೆ ಯುವ ದುಶ್ಯಂತ ದುಬೇಯ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿತು.
ಅಂದಿನಿಂದ ಇತರರ ಸಹಾಯಕ್ಕೆ ಬರುವುದೇ ಅವನ ಬದುಕಿನ ಆದ್ಯತೆಯಾಯಿತು. ಅಹ್ಮದಾಬಾದಿನಲ್ಲಿ ಹುಟ್ಟಿ ಬೆಳೆದ ದುಶ್ಯಂತ ದುಬೇಗೆ ಇತರರ ಸಹಾಯಕ್ಕೆ ಒದಗಿ ಬರುವ ಗುಣ ಅವರ ತಂದೆಯಿಂದ ಬಂದುದು. ಚಿಕ್ಕಂದಿನಿಂದಲೂ ದಾರಿಯಲ್ಲಿ ಯಾವುದಾದರೂ ವಾಹನ ಪಂಕ್ಚರ್ ಆಗಿ ನಿಂತಿದ್ದು ಕಂಡು ಬಂದರೆ ಅದರ ಚಾಲಕನಿಗೆ ಸಹಾಯ ಮಾಡಲು ಮುಂದಾಗುತ್ತಿದ್ದರು. ಶಾಲಾ ಕಾಲೇಜು ಕಲಿಯುತ್ತಿದ್ದ ಸಮಯದಲ್ಲೂ ದುಶ್ಯಂತ ಹಲವು ಸರ್ಕಾರೇತರ ಸಂಸ್ಥೆಗಳಲ್ಲಿ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದ ನಂತರ ಇಲ್ಲಿಯೂ ತನ್ನ ಸಾಮಾಜಿಕ ಕೆಲಸಗಳನ್ನು ಮುಂದುವರಿಸಿದರು. ದುಶ್ಯಂತ ದುಬೇ ಕಳೆದ ೧೫ ವರ್ಷಗಳಲ್ಲಿ ಕನಿಷ್ಠವೆಂದರೂ ಐದು ಸಾವಿರ ಜನರ ಬದುಕಿನಲ್ಲಿ ಆಪದ್ಬಾಂಧವನಾಗಿ ಒದಗಿ ಬಂದಿದ್ದಾರೆ.
ಹೀಗೆ ಇತರರಿಗೆ ಸಹಾಯ ಮಾಡುವ ಭರದಲ್ಲಿ ದುಶ್ಯಂತ ದುಬೇ ಜೀವ ಬೆದರಿಕೆ ಎದುರಿಸಿದ್ದಾರೆ, ಪೊಲೀಸರಿಂದ ಹೊಡೆತ ತಿಂದಿದ್ದಾರೆ, ಕೋರ್ಟು ಕೇಸುಗಳನ್ನು ಎದುರಿಸಿದ್ದಾರೆ. ಹೈದರಾಬಾದ್ ಮತ್ತು ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿದ್ದ ಇಬ್ಬರು ಹುಡುಗಿಯರನ್ನು ಪಾರು ಮಾಡಿ ಬೆಂಗಳೂರಿಗೆ ಕರೆ ತಂದು ಅವರಿಗೆ ಆಶ್ರಯ ಒದಗಿಸಿದಾಗ ಆ ಹೆಣ್ಣು ಮಕ್ಕಳ ಮನೆಯವರು ಪೊಲೀಸರು ಮತ್ತು ರೌಡಿಗಳನ್ನು ಕಳಿಸಿ ಇವರಿಗೆ ಹೊಡೆಸಿದ್ದು, ಥಳಿಸಿದ್ದೂ ಇದೆ. ದುಶ್ಯಂತ ದುಬೇಯ ಈ ಕೆಲಸಕ್ಕಾಗಿ ಜನ ಅವರನ್ನು ‘ಸೈಂಟ್ ಬ್ರೋಸೆಫ್’ ಹಾಗೂ ‘ಬ್ಯಾಟ್ ಮ್ಯಾನ್ ಆಫ್ ಬೆಂಗಳೂರು’ ಎಂದು ಕರೆಯುತ್ತಾರೆ. ೨೦೨೩ರಲ್ಲಿ ದುಶ್ಯಂತ್ ತನ್ನ ಉದ್ಯೋಗ ಬಿಟ್ಟು ಸಾಮಾಜಿಕ ಕಾರ್ಯಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸಲುವಾಗಿ ‘ಸೈಂಟ್ ಬ್ರೋಸೆಫ್ ಫೌಂಡೇಶನ್’ ಎಂಬ ತನ್ನದೇ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪ್ರಾರಂಭದಲ್ಲಿ ದುಶ್ಯಂತ್ ತಾನೊಬ್ಬರೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದರು.
ಆದರೆ, ಅವರನ್ನು ಸಂಪರ್ಕಿಸುವ ಜನರ ಸಂಖ್ಯೆ ಹೆಚ್ಚಿದಂತೆ ಬೇರೆ ಸ್ವಯಂ ಸೇವಕರನ್ನೂ ಸೇರಿಸಿಕೊಳ್ಳಬೇಕಾಯಿತು. ಇಂದು ಬೆಂಗಳೂರು, ಹೈದರಾಬಾದ್, ಚೆನ್ನೆ ಮತ್ತು ಪುಣೆ ನಗರಗಳಲ್ಲಿ ಸೈಂಟ್ ಬ್ರೋಸೆಫ್ ಫೌಂಡೇಶನ್‌ನ ೮,೦೦೦ ಸ್ವಯಂ ಸೇವಕರಿದ್ದಾರೆ, ೪೦೦ ಕೋ-ಆರ್ಡಿನೇಟರ್‌ಗಳಿದ್ದಾರೆ, ೧೫ ಚಾಪ್ಟರ್‌ಗಳಿವೆ. ಬೆಂಗಳೂರಿನ ಸುಮಾರು ೫೦,೦೦೦ ಜನ ಇವರ ಟೆಲಿಫೋನ್ ನಂಬರನ್ನು ಹೊಂದಿದ್ದಾರೆ. ಹೆಚ್ಚಿನವರು ಸೈಬರ್ ಅಪರಾಧ, ಸ್ಟಾಕಿಂಗ್, ಆನ್‌ಲೈನ್ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮತ್ತು ಮನೆ ಮಾಲೀಕರಿಂದ ತೊಂದರೆ ಮೊದಲಾದ ಸಮಸ್ಯೆಗಳ ಪರಿಹಾರಕ್ಕಾಗಿ ಇವರನ್ನು ಸಂಪರ್ಕಿಸುತ್ತಾರೆ. ತೊಂದರೆಗೆ ಸಿಕ್ಕಿದ ವ್ಯಕ್ತಿ ಫೋನ್ ಮಾಡಿ ವಿಷಯ ತಿಳಿಸಿದಾಗ ಸಮಸ್ಯೆಯ ಸ್ವರೂಪ ಮತ್ತು ಗಂಭೀರತೆಗನುಸಾರವಾಗಿ ಕ್ರಮಕೈಗೊಳ್ಳುತ್ತಾರೆ. ಉದಾಹರಣೆಗೆ, ಕೌಟುಂಬಿಕ ಕಲಹದಲ್ಲಿ ಉಂಟಾದ ದೈಹಿಕ ಗಾಯ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗೆ ಒಯ್ದು, ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸಿ ಅಗತ್ಯ ಪ್ರಮಾಣ ಪತ್ರ ಪಡೆಯುತ್ತಾರೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪೊಲೀಸ್ ದೂರು ದಾಖಲಿಸಲು ಸಂತ್ರಸ್ತರಿಗೆ ಸಹಾಯ ಮಾಡುತ್ತಾರೆ. ಮುಂದೆ, ಕೋರ್ಟು ವಿಚಾರಣೆ ನಡೆಯುವಾಗ ಆ ಸಂತ್ರಸ್ತರೊಂದಿಗಿದ್ದು ನೆರವು ನೀಡುತ್ತಾರೆ. ಸಿವಿಕ್ ಪ್ರಕರಣಗಳಾದರೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ದೂರು ದಾಖಲಿಸಲು, ಸೂಕ್ತ ಅಽಕಾರಿಗಳನ್ನು ಕಾಣಲು ಸಂತ್ರಸ್ತರಿಗೆ ನೆರವಾಗುತ್ತಾg
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…