ನಿಜಕ್ಕೂ ಇದೊಂದು ಹೊಸ ಪ್ರಯೋಗ. ಹೀಗೂ ಧಮ್ಮ ಕಟ್ಟಬಹುದೇ ಎಂದು ಆಶ್ಚರ್ಯ ಪಡುವಷ್ಟರಮಟ್ಟಿಗೆ ಪ್ರಯೋಗ ನಡೆದಿದೆ ಮತ್ತು ನಡೆಯುತ್ತಿದೆ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಬುದ್ಧ ಧಮ್ಮದ ಅರಿವನ್ನು ಗ್ರಾಮೀಣ ಪ್ರದೇಶಗಳಲ್ಲಿ ‘ಮನೆ ಮನೆಗೆ ಬುದ್ಧ-ಮನೆ ಮನಗಳಿಗೆ ಅಂಬೇಡ್ಕರ್’ ಎನ್ನುವ ಘೋಷವಾಕ್ಯ ದೊಡನೆ ಸಂಜೆಯ ನಸುಗತ್ತಲಲ್ಲಿ ದೀಪಗಳನ್ನು ಹಿಡಿದು ಎಲ್ಲರ ಮನೆಯ ಮುಂದೆ ಸಾಗುತ್ತಾ ಮನೆಯಲ್ಲಿರುವ ಗಂಡಸರು, ಹೆಂಗಸರು, ಮಕ್ಕಳನ್ನು ಒಗ್ಗೂಡಿಸಿಕೊಂಡು ಮೆರವಣಿಗೆ ಹೊರಟು ಆಯಾಯ ಊರಿನ ಬೋಧಿವೃಕ್ಷ (ಅರಳಿಮರ)ದ ಕೆಳಗೆ ತ್ರಿಸರಣ, ಪಂಚಶೀಲ ಬೋಧನೆ ಜೊತೆಗೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಒಂದು ‘ಸ್ವಯಂ ಪ್ರೇರಿತ ತಂಡ’ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಕ್ಟೋಬರ್ ೦೩, ೨೦೨೪ರಲ್ಲಿ ಆರಂಭಿಸಿತು.
ಹೀಗೆ ಪ್ರಥಮ ಬಾರಿಗೆ ಮೈಸೂರು ತಾಲ್ಲೂಕು ಸಿಂಧುವಳ್ಳಿ ಗ್ರಾಮದಲ್ಲಿ ಆರಂಭಗೊಂಡ ಈ ಧಮ್ಮ ಪಯಣ ಅಕ್ಟೋಬರ್ ೧೪, ೨೦೨೫ರ ಅಂತ್ಯಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಆಯ್ದ ೧೯೨ ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಈ ಪ್ರಯೋಗವನ್ನು (೨೦೦ ಗ್ರಾಮಗಳ ಗುರಿ ಹೊಂದುವ ಉದ್ದೇಶ ಹೊಂದಲಾಗಿತ್ತು) ಯಶಸ್ವಿಗೊಳಿಸಿದೆ. ಒಟ್ಟು ೧೩,೧೨೯ ಕಿ.ಮೀ. ಕ್ರಮಿಸಿ, ಮೂರು ಲಕ್ಷ ಜನರೊಡನೆ ನೇರವಾಗಿ ಸಂವಾದಿಸು ವುದರೊಂದಿಗೆ ೩೬,೨೨೦ ಕುಟುಂಬಗಳಲ್ಲಿ ಬುದ್ಧಬೆಳಕನ್ನು ಹಚ್ಚಲಾಗಿದೆ. ಈ ಪಯಣದಲ್ಲಿ ನಾಡಿನ ಹೆಸರಾಂತ ಹೋರಾಟ ಹಿರಿಯ ಚೇತನಗಳು ಮತ್ತು ಜನಪರ ಹೋರಾಟಗಾರರ ಜನ್ಮಸ್ಥಳಗಳನ್ನು ತಲುಪಿರುವುದು ಮತ್ತು ಅವರ ನೆನಪಲ್ಲಿ ಧಮ್ಮ ದೀಪ ಹಚ್ಚಿರುವುದು ವಿಶೇಷ.
ಅಂದರೆ ಪ್ರೊ.ಬಿ.ಕೃಷ್ಣಪ್ಪ, ಬಿ.ಬಸವಲಿಂಗಪ್ಪ, ಸಿದ್ದಲಿಂಗಯ್ಯ, ದೇವಯ್ಯ ಹರವೆ, ಮುಳ್ಳೂರು ನಾಗ ರಾಜ್, ಕೆ.ಶಿವರಾಂ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ವಿ.ಶ್ರೀನಿವಾಸ ಪ್ರಸಾದ್ ಹಾಗೂ ದೇವನೂರ ಮಹಾದೇವರವರುಗಳ ಊರುಗಳಲ್ಲಿ ಈ ಧಮ್ಮ ಪಯಣ ಸಾಗಿದೆ. ಬೌದ್ಧ ಸಂಘಟನೆಗಳನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿರುವ, ಬೌದ್ಧ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ, ಕಿರಿಯ ಲೇಖಕರು, ಧಮ್ಮದ ಪ್ರಸರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಯೋಮಾನದ ಉಪಾಸಕ, ಉಪಾಸಕಿಯರನ್ನು ಒಟ್ಟು ನಾಲ್ಕು ಸಂಪದ ಸಮ್ಮೇಳನಗಳನ್ನು ಆಯೋಜಿಸಿ ಗೌರವಿಸಲಾಗಿರುವುದು ಈ ಒಂದು ವರ್ಷದ ಪಯಣದ ವಿಶೇಷತೆಗಳಲ್ಲಿ ಒಂದು.
ಇದನ್ನು ಓದಿ: ನಾಳಿನ ತಲೆಮಾರಿಗೆ ಕೃತಕ ಬುದ್ಧಿಮತ್ತೆ ಅನಿವಾರ್ಯ
ಅಪರಾಧ ಜಗತ್ತಿನ ರಾಷ್ಟ್ರ ವಾಗುತ್ತಿರುವ ಭಾರತಕ್ಕೆ ಬುದ್ಧ ಮಾರ್ಗ ಇಂದು ಬಹಳ ಪ್ರಸ್ತುತ. ಧಮ್ಮದ ತಿರುಳಾದ ಮೈತ್ರಿ, ಕರುಣೆ, ಭ್ರಾತೃತ್ವದ ಅಂಶಗಳನ್ನು ಬೋಧಿಸುವ ಬುದ್ಧ ಧಮ್ಮ ಎಲ್ಲಾ ಜಾತಿ, ಧರ್ಮೀಯರನ್ನು ತಲುಪಿಸಲು ಒಂದು ಸುಧಿರ್ಘ ಹೆಜ್ಜೆಯನ್ನು ಇರಿಸಿದೆ. ಬಹಳಷ್ಟು ಚರಿತ್ರಕಾರರು ಗೌತಮ ಬುದ್ಧರನ್ನು ಸಂತ, ದಾರ್ಶನಿಕ, ಮಾರ್ಗದಾತರೆಂದು ಬಿಂಬಿಸಿರುವುದೇನೋ ಸರಿ. ಆದರೆ ಬಹಳಷ್ಟು ಜನರಿಗೆ ಗೊತ್ತಿರದ ಸತ್ಯವೆಂದರೆ ಬುದ್ಧ ಒಬ್ಬ ಶ್ರೇಷ್ಠ ಮನೋವಿಜ್ಞಾನಿ. ಮನುಷ್ಯನ ಮನಸ್ಸನ್ನು ಪೂರ್ತಿಯಾಗಿ ಅಧ್ಯಯನ ಮಾಡಿ ಕೊನೆಯಲ್ಲಿ ಅಪರಿಮಿತವಾದ ಎರಡು ಸಂದೇಶಗಳನ್ನು ನೀಡಿದ್ದಾರೆ. ಅದುವೇ ‘ನಿನಗೆ ನೀನೇ ಬೆಳಕು’ (be a lamp unto yourself) ಮತ್ತು ‘ಮೊದಲು ನಿನ್ನನ್ನು ನೀನು ಗೆಲ್ಲು (first conquer yourself) ಈ ಎರಡೂ ಸಂದೇಶಗಳನ್ನು ಇದುವರೆಗೂ ಯಾರು ನಿರಾಕರಿಸಿಲ್ಲ ಮತ್ತು ವೈಜ್ಞಾನಿಕವಾಗಿಯೂ ಕೂಡ ಇದು ಪ್ರಮಾಣಿಕರಿಸಲ್ಪಟ್ಟಿದೆ. ಜೊತೆಗೆ ಜಗತ್ತಿರುವವರೆಗೂ ಈ ಸಂದೇಶ ಇದ್ದೇ ಇರುತ್ತದೆ.
ಪ್ರತಿಯೊಂದು ಜೀವಿಯೂ ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಳ್ಳುವುದು ಮುಖ್ಯ ಎಲ್ಲಾ ಒಳಿತು-ಕೆಡಕುಗಳಿಗೆ ಮಾನವನ ಆಲೋಚನೆಗಳೇ ಕಾರಣವಾದ್ದರಿಂದ ಮನುಷ್ಯ ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಮಮತೆಯಿಂದ ಬದುಕಬೇಕು ಬೇಡುವ ವರಗಳನ್ನು ನೀಡುವ ಯಾವುದೇ ಅಗೋಚರ ಶಕ್ತಿ ಈ ಜಗತ್ತಿನಲ್ಲಿ ಇಲ್ಲ ಈ ಲೋಕವನ್ನು ಆವರಿಸಿರುವ ಶ್ರೀಮಂತಿಕೆ, ಬಡತನ, ಮೇಲು- ಕೀಳು, ಪಾಪ ಪುಣ್ಯ, ಸ್ವರ್ಗ ನರಕ, ಅನಾರೋಗ್ಯ, ಸಾಮಾಜಿಕ ತಾರತಮ್ಯಕ್ಕೆ ಮನುಷ್ಯನ ಮನಸ್ಸೇ ಮೂಲ ಕಾರಣ ಈ ಸಮಾಜದ ರೋಗ ರುಜಿನಗಳಿಗೆ ಅತಿಯಾದ ಆಸೆಯೇ ಕಾರಣ ಮತ್ತು ನೆಮ್ಮದಿಯ ಬದುಕಿಗೆ ಸರಳ ಜೀವನ, ದ್ವೇಷ ಅಸೂಯೆಗಳಿಲ್ಲದ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು
ಇದನ್ನು ಓದಿ: ಅ.14, 15ಕ್ಕೆ ಮೈಸೂರಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ
ತಾನು ತೋರಿದ ಮಾರ್ಗವು ಸತ್ಯವಾಗಿದ್ದರೆ ಅನುಸರಿಸಬಹುದು, ಇಲ್ಲದಿದ್ದರೆ ತಿರಸ್ಕರಿಸಬಹುದು ಎಂದು ಹೇಳುವುದರ ಜೊತೆಗೆ, ತಾನು ಮಾರ್ಗದಾತನೇ ಹೊರತು ಮೋಕ್ಷದಾತನಲ್ಲ ಭಾರತರತ್ನ ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿ ೭೦ ವರ್ಷಗಳಾದ ಹಿನ್ನೆಲೆಯಲ್ಲಿ ‘ಮಾನವ ಮೈತ್ರಿ’ ಆಶ್ರಯದಲ್ಲಿ ಅಕ್ಟೋಬರ್ ೧೪ ಮತ್ತು ೧೫ನೇ ತಾರೀಖಿನಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳಿಂದ, ಭಾರತದ ವಿವಿಧ ರಾಜ್ಯಗಳಿಂದ ಬೌದ್ಧ ಭಿಕ್ಕುಗಳು ಸಮಾವೇಶಗೊಳ್ಳುತ್ತಿದ್ದು, ಒಟ್ಟು ೮ ಪ್ರತ್ಯೇಕ ವೇದಿಕೆಗಳಲ್ಲಿ ೨೪ ವಿಚಾರಗೋಷ್ಠಿಗಳು, ೬೪ ಇವೆಂಟ್ಸ್ ಮೂಲಕ ಬೌದ್ಧ ಸಾಹಿತ್ಯ, ಇತಿಹಾಸ, ಪರಂಪರೆ,ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಮೌಢ್ಯ ಮತ್ತು ಸಂಪ್ರದಾಯಗಳಿಂದ ಬಿಡುಗಡೆ ಹೊಂದುವುದರ ಜೊತೆಗೆ ಧಮ್ಮದ ವೈಜ್ಞಾನಿಕ ಮನೋಭಾವನೆ ಹಾಗೂ ಅದರೊಟ್ಟಿಗಿರುವ ಗೊಂದಲಗಳನ್ನು ಬಿಡಿಸುವ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗು ತ್ತಿದೆ. ಆ ಮೂಲಕ ‘ಯುದ್ಧ ಬೇಡ- ಬುದ್ಧ ಬೇಕು’ ಎಂಬ ಘನ ಸಂದೇಶದೊಂದಿಗೆ ಭಾರತವನ್ನು ಪ್ರಬುದ್ಧ ಭಾರತವನ್ನಾಗಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಎರಡು ದಿನಗಳ ಮಾನವ ಪರ ಮೈತ್ರಿ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಹಾರೈಸಿ, ಯಶಸ್ವಿಗೊಳಿಸಿ
” ಅಕ್ಟೋಬರ್ ೧೪ ಮತ್ತು ೧೫ನೇ ತಾರೀಖಿನಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನಲ್ಲಿ ನಡೆಯುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ನಿಮಿತ್ತ ಲೇಖನ”
–ಸಿ. ಹರಕುಮಾರ್ , ಹವ್ಯಾಸಿ ಲೇಖಕರು
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…