ಅಂಕಣಗಳು

ಸಿನಿಮಾಗಳು ಪ್ರೇಕ್ಷಕನಿಂದ ದೂರವಾಗುತ್ತಿವೆಯೆ ಇಲ್ಲ, ಪ್ರೇಕ್ಷಕ ಸಿನಿಮಾಗಳಿಂದ?

-ಬಾ.ನಾ.ಸುಬ್ರಮಣ್ಯ. baanaasu@gmail.com

ಬಹುದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ರವಿಚಂದ್ರನ್ ಅವರು ಚಲನಚಿತ್ರಗಳ ಗೆಲುವಿನ ಕುರಿತಂತೆ ಸಾರ್ವಕಾಲಿಕ ಸತ್ಯವೊಂದನ್ನು ಪುನರುಚ್ಚರಿಸಿದರು. ಯಾವುದೇ ಚಿತ್ರೋದ್ಯಮವಿರಲಿ, ಅಲ್ಲಿ ಗೆಲ್ಲುವ ಚಿತ್ರಗಳು ಪ್ರತಿಶತ 5; ಇನ್ನೆ ದು ಪ್ರತಿಶತ ಹಾಕಿದ ಬಂಡವಾಳವನ್ನುತಂದುಕೊಡುತ್ತವೆ;. ಉಳಿದವೆಲ್ಲ ನಷ್ಟದ ಬಾಬತ್ತು ಎನ್ನುವುದು ಉದ್ಯಮಕ್ಕೆ ತಿಳಿಯದ ವಿಷಯವೇನಲ್ಲ. ಇದನ್ನೇ ರವಿ ಅವರು ಹೇಳಿದರು.

ಚಲನಚಿತ್ರಗಳು ಸೆಲ್ಯುಲಾಯಿಡ್‌ನಿಂದ ಡಿಜಿಟಲ್‌ಗೆ ಹೊರಳಿದ ನಂತರ ಸಾಕಷ್ಟು ಬದಲಾವಣೆ ಆಗಿದೆ. ಅದು ಚಿತ್ರ ನಿರ್ಮಾಣ ಮೊದಲ್ಗೊಂಡು, ಅದರ ಪ್ರಚಾರ, ಬಿಡುಗಡೆ ಎಲ್ಲ ಕಡೆ. ಮುದ್ರಣ, ದೃಶ್ಯ ಮಾಧ್ಯಮಗಳ ಜೊತೆಗೆ ನವಮಾಧ್ಯಮಗಳ ಆಗಮನ, ವಿಜೃಂಭಣೆ ಬಹಳಷ್ಟು ಸಂದರ್ಭಗಳಲ್ಲಿ ಚಿತ್ರರಂಗಕ್ಕೆ ಪೂರಕವೋ ಮಾರಕವೋ ಎನ್ನುವ ಚರ್ಚೆ ಮುಂದುವರಿದಿದೆ.

ಮುಂದಿನ ವಾರ, ಮಾರ್ಚ್ 3ಕ್ಕೆ ಕನ್ನಡದ ಮೊದಲ ಮಾತಿನ ಚಿತ್ರ ‘ಸತಿ ಸುಲೋಚನಾ’ ತೆರೆಕಂಡು 31 ವರ್ಷ. ಸಿನಿಮಾ ಭಾರತಕ್ಕೆ ಕಾಲಿಟ್ಟು, ವಾಕ್ಚಿತ್ರದತ್ತ ಹೊರಳಿದ ಆರಂಭದ ದಿನಗಳು. ರಂಗಭೂಮಿಯ ಖ್ಯಾತನಾಮರು ಮನರಂಜನೆಯ ಈ ಹೊಸ ಕವಲಿನತ್ತಲೂ ಹೆಜ್ಜೆ ಇಟ್ಟರು. ರಂಗಭೂಮಿಯ ತಾಂತ್ರಿಕ ವಿಸ್ತರಣೆಯಂತೆ ಆರಂಭದ ದಿನಗಳಿದ್ದದ್ದೂ
ಹೌದು. ಅದು ಚಿತ್ರದ ವಸ್ತು ಇರಲಿ, ಅಭಿನಯ, ಸಂಗೀತ ಇರಲಿ, ಪ್ರಚಾರ ಇರಲಿ ಎಲ್ಲೆಡೆ.

ರಂಗಭೂಮಿಯ ಅನುಭವ ಚಿತ್ರರಂಗಕ್ಕೆ ಬರುವವರಿಗೆ ಅನಿವಾರ್ಯ ಎನ್ನುತ್ತಿದ್ದ ದಿನಗಳಂತೆ, ಈಗ ಕಿರುತೆರೆಯ ಅನುಭವ ಇದ್ದರೆ ಅನುಕೂಲ ಎನ್ನುವ ಪರಿಸ್ಥಿತಿ. ಕೆಲವು ಸಂದರ್ಭಗಳಲ್ಲಿ ಅದು ನಿಜವೂ ಆಗಿದೆ. ಈ ಡಿಜಿಟಲ್ ದಿನಮಾನದಲ್ಲಿ ಮಾಹಿತಿ ತಂತ್ರಜ್ಞಾನದ ಮಂದಿಯೂ ಈ ಕ್ಷೇತ್ರದ ತಾಂತ್ರಿಕ ವಿಭಾಗಕ್ಕೆ ಬಂದಿದ್ದಾರೆ.

ರಂಗಭೂಮಿ, ಯಕ್ಷಗಾನ, ಚಲನಚಿತ್ರ, ಕಿರುತೆರೆಗಳಾಚೆ ಮನರಂಜನೋದ್ಯಮ ವಿಸ್ತರಿಸಿಕೊಳ್ಳುತ್ತಿದೆ. ತಮ್ಮ ಮನೆಗಳಲ್ಲೇ ಇವುಗಳನ್ನು ಕಿರುತೆರೆಯಲ್ಲಿ ನೋಡಲು ಬಯಸುವ ಸಾಕಷ್ಟು ಮಂದಿ ಇದ್ದಾರೆ. ಇದು ಚಿತ್ರಮಂದಿರಗಳಿಂದ ಒಂದಷ್ಟು ಮಂದಿ ಪ್ರೇಕ್ಷಕರನ್ನು ದೂರಮಾಡಿದ್ದಂತೂ ಹೌದು. ಹೊಸದಾಗಿ ಬಂದ ರೀಲ್‌ಗಳು, ಟ್ರೋಲ್‌ಗಳು, ಸಾಕಷ್ಟು ಮಂದಿಗೆ ಮನರಂಜನೆಯಂತೂ ಹೌದು. ಇವುಗಳ ನಡುವೆ, ಚಿತ್ರಮಂದಿರಗಳತ್ತ ಬರುವವರ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ.

ಕನ್ನಡ ಚಿತ್ರರಂಗದ ಕುರಿತಂತೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರಚಾರವಿಲ್ಲದೆ ಚಿತ್ರಗಳು ಬಿಡುಗಡೆಯಾಗುವುದೇ ಹೆಚ್ಚು. ಕಳೆದ ವಾರ ಹನ್ನೊಂದು ಕನ್ನಡ ಚಿತ್ರಗಳು ತೆರಕಂಡವು. ಸತಿ ಸುಲೋಚನಾ 1934ರಲ್ಲಿ ತೆರೆಕಂಡರೆ, ಹನ್ನೊಂದನೇ ಚಿತ್ರ ಭಕ್ತ ಪ್ರಹ್ಲಾದ 1942 ರಲ್ಲಿ ತೆರೆಕಂಡಿತ್ತು. ಕಳೆದ ವರ್ಷ 235 ಚಿತ್ರಗಳು ತೆರೆಗೆ ಬಂದಿದ್ದವು. ಆರಂಭದ ೩೪ ವರ್ಷಗಳಲ್ಲಿ ತೆರೆಗೆ ಬಂದ ಚಿತ್ರಗಳ ಸಂಖ್ಯೆ ಇದು. ಡಿಜಿಟಲ್‌ಗೆ ಮಾಧ್ಯಮ ಹೊರಳಿದ ನಂತರ, ತಯಾರಾಗುತ್ತಿರುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಏರಿದೆ.

ತಲೆಮಾರುಗಳು ಬದಲಾಗಿವೆ. ಚಿತ್ರ ನಿರ್ಮಾಣ ವಿಧಾನ, ಪ್ರಚಾರ, ಎಲ್ಲವೂ. ಪತ್ರಿಕೆಗಳಲ್ಲಿ ಜಾಹೀರಾತು, ಭಿತ್ತಿಪತ್ರಗಳು, ಚಿತ್ರಮಂದಿರಗಳಲ್ಲಿ ಸ್ಲೈಡ್‌ಗಳು. ಕಟೌಟ್‌ಗಳು ಸೇರಿದಂತೆ ಸಾಂಪ್ರದಾಯಿಕ ಪ್ರಚಾರ ವಿಧಾನಗಳು ಕಡಿಮೆಯಾಗತೊಡಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚುಹೆಚ್ಚು ಜನರನ್ನು ತಲುಪಲು ಸಾಧ್ಯ ಎನ್ನುವ ನಂಬಿಕೆ ನಿರ್ಮಾಪಕರದು. ವ್ಯವಸ್ಥಿತ
ರೀತಿಯಲ್ಲಿ ಜನರನ್ನು ತಲುಪುವ ಪ್ರಚಾರ ಈ ದಿನಗಳಲ್ಲಿ ಕಡಿಮೆ. ಚಿತ್ರಕ್ಕೆ ಹೂಡುವುದಕ್ಕಿಂತ ಹೆಚ್ಚು ಬಂಡವಾಳವನ್ನು ಪ್ರಚಾರಕ್ಕೆ ಹೂಡಬೇಕು ಎನ್ನುವ ಚಿಂತೆ ಕಡಿಮೆ ವೆಚ್ಚದ ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರದು.

ಬಹುತೇಕ ಚಿತ್ರಗಳ ಪ್ರಚಾರ ವೈಖರಿ ಈ ದಿನಗಳಲ್ಲಿ ತೀರಾ ಬೇರೆಯೇ. ಅದ್ಧೂರಿ ಬಂಡವಾಳ ಹೂಡುವ ಚಿತ್ರಗಳ ಹೆಸರು ಲೋಕಾರ್ಪಣೆಯದೇ ಒಂದು ಕಾರ್ಯಕ್ರಮ, ಆ ಮೂಲಕ ಪ್ರಚಾರ; ಸಾಮಾನ್ಯವಾಗಿ ಚಿತ್ರತಂಡದ ಮಂದಿಯ ಸಾಮಾಜಿಕ ತಾಣಗಳ ಮೂಲಕ, ದೃಶ್ಯಮಾಧ್ಯಮಗಳ ಮೂಲಕವೇ ಹೆಚ್ಚು. ತಮ್ಮ ಚಿತ್ರಗಳ ಹಾಡುಗಳು, ಟೀಸರ್, ಟ್ರೈಲರ್‌ಗಳನ್ನು
ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡಿಸುವ ಮೂಲಕ ಪ್ರಚಾರ ಪಡೆಯುವುದು ಇನ್ನೊಂದು ರೀತಿ. ಕೆಲವೊಮ್ಮೆ ಅವರುಗಳ ಮನೆಯಲ್ಲೇ ಈ ಲೋಕಾರ್ಪಣೆ ಕಾರ್ಯಕ್ರಮ ನಡೆಯುವುದೂ ಇದೆ. ಇದರಿಂದ ನಿರ್ಮಾಪಕರಿಗೆ ಕಾರ್ಯಕ್ರಮದ ವೆಚ್ಚವೂ ಉಳಿಕೆಯಾಗುತ್ತದೆ. ಸೆಲೆಬ್ರಿಟಿಗಳು ಮಾಧ್ಯಮ ಮಿತ್ರರಾಗಿದ್ದರೆ ಅದರ ಸುದ್ದಿ ಕೆಲವು ಕಡೆ ಬರಬಹುದು. ಜನಪ್ರಿಯ ನಟರ ಮನೆಯಲ್ಲಿ ಸಾಮಾನ್ಯವಾಗಿ ಇಂತಹ ಕಾರ್ಯಕ್ರಮ ನಡೆಯುವುದು ವಾಡಿಕೆ. ಈಗ ಅದು ರಾಜಕಾರಣಿಗಳ ಮನೆಯತ್ತಲೂ ತಿರುಗಿದೆ. ಇಂತಹ ಪ್ರಚಾರಗಳು ಚಿತ್ರದಗಳಿಕೆಯ ಮೇಲೆ ಎಷ್ಟು ಪ್ರಭಾವ ಬೀರಬಲ್ಲದು ಎನ್ನುವುದು ಯಾರಿಗೂ ಗೊತ್ತಿಲ್ಲ. ತೆರೆಗೆ ಬರುವ ಚಿತ್ರದ ಆಡಿಯೊ ಹಕ್ಕನ್ನು ಪಡೆದ ಸಂಸ್ಥೆ ಅದನ್ನು ತನ್ನಜಾಲತಾಣದಲ್ಲಿ ಹಾಕಿ ಪ್ರಚಾರ ಮಾಡುತ್ತದೆ. ಮಿಲಿಯನ್ ಗಟ್ಟಲೆ ಚಂದಾದಾರರಿರುವ ಆಡಿಯೋ ಜಾಲತಾಣಗಳಿವೆ. ಅದನ್ನು ಹೆಚ್ಚುಹೆಚ್ಚು ವೀಕ್ಷಿಸಿದಷ್ಟು ಚಿತ್ರ ನೋಡಲು ಬರುವವರ ಸಂಖ್ಯೆ ಹೆಚ್ಚುತ್ತದೆ ಎನ್ನುವುದು ನಿರ್ಮಾಪಕರ ಎಣಿಕೆ. ಆದರೆ ಅದು ನಿಜವಾದ ಉದಾಹರಣೆ ಇದ್ದಂತಿಲ್ಲ. ಅದರಿಂದ ವಿಡಿಯೋ ಕಂಪೆನಿಗಳಿಗಂತೂ ಲಾಭ ಇದೆ. ಸಾಮಾಜಿಕ ತಾಣಗಳಲ್ಲಿ, ಯುಟ್ಯೂಬ್ ವಾಹಿನಿಗಳಲ್ಲಿ ಸಿನಿಮಾ ಕುರಿತಂತೆ ಬರುವಸುದ್ದಿಗಳೋ, ಹೆಚ್ಚಿನವುಗಳಿಗೆ ಸೆಲೆಬ್ರಿಟಿಗಳ ಖಾಸಗಿ ಬದುಕಿನ ಕುರಿತ ಆಸಕ್ತಿಯೇ ಹೊರತು, ಸಿನಿಮಾ, ಸಿನಿಮಾರಂಗಗಳ ಕುರಿತ ಆಸಕ್ತಿ ಕಡಿಮೆ. ಅಲ್ಲಿ ರೋಚಕತೆಗೆ ಆದ್ಯತೆ. ಸಿನಿಮಾಕ್ಕಲ್ಲ. ಇದು ಕನ್ನಡ ಮಾತ್ರವಲ್ಲ, ಇತರ ಭಾರತೀಯ ಭಾಷಾ ಚಿತ್ರರಂಗಗಳಗೂ ಅನ್ವಯ. ಯುಟ್ಯೂಬ್ ವಾಹಿನಿಗಳಆದಾಯಕ್ಕೆ ಇದೇ ದಾರಿ ಕೂಡ.

ಚಲನಚಿತ್ರ ಮಾಧ್ಯಮದ ಕುರಿತಂತೆ ಅಧ್ಯಯನ ಮಾಡಿ ಈ ಕ್ಷೇತ್ರಕ್ಕೆ ಬರುವವರು ಬಹಳ ಕಡಿಮೆ ಮಂದಿ. 2006 ರಲ್ಲಿ ತೆರೆಕಂಡ ‘ಮುಂಗಾರು ಮಳೆ’ಯ ಅದ್ಭುತ ಯಶಸ್ಸು, ಸಾಕಷ್ಟು ಮಂದಿ ನಿವೇಶನೋದ್ಯಮಿಗಳನ್ನು ಈ ಕ್ಷೇತ್ರದತ್ತ ಆಕರ್ಷಿಸಿತು. ಡಿಜಿಟಲ್ ತಂತ್ರಜ್ಞಾನ, ಮಲ್ಟಿಪ್ಲೆಕ್ಸ್‌ಗಳು, ಚಿತ್ರೋದ್ಯಮದ ವ್ಯವಹಾರ ರೀತಿಯನ್ನೇ ಬದಲಾಯಿಸತೊಡಗಿತು. ಕನ್ನಡ ಸಿನಿಮಾ ವ್ಯಾಪಾರದ ಕೇಂದ್ರವಾಗಿದ್ದ ಗಾಂಧಿನಗರದಲ್ಲಿ ಈಗ ಚಟುವಟಿಕೆಗಳು ಕಡಿಮೆಯಾಗತೊಡಗಿವೆ. ಹಿಂದಿನ ವಿತರಕರಲ್ಲಿ ಹೆಚ್ಚಿನವರ ಮುಂದಿನ ತಲೆಮಾರು ವ್ಯವಹಾರದಿಂದ ಹಿಂದುಳಿದಿದೆ. ಮಲ್ಟಿಪ್ಲೆಕ್ಸ್‌ಗಳು ಬಂದ ನಂತರ ಅವುಗಳ ಆದ್ಯತೆ ಕನ್ನಡ ಆಗಿರಲಿಲ್ಲ.

ಭಾರತದ ಬಹುತೇಕ ಭಾಷೆಗಳ ಚಿತ್ರಗಳ ಪರಿಚಯ ಬೆಂಗಳೂರಿಗೆ ಆದದ್ದು ಮಲ್ಟಿಪ್ಲೆಕ್ಸ್‌ಗಳ ಮೂಲಕ. ಮೊದಮೊದಲು ಹಿಂದಿ ಮತ್ತು ದಕ್ಷಿಣದ ಇತರ ಭಾಷಾ ಚಿತ್ರಗಳ ಪೈಪೋಟಿ ಎದುರಿಸುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಉಳಿದ ಭಾಷಾ ಚಿತ್ರಗಳ ಸ್ಪರ್ಧೆಯನ್ನೂ ಎದುರಿಸುವ ಸ್ಥಿತಿ ಬಂತು. ಕಾರ್ಪೊರೇಟ್ ರೀತ್ಯಾ ವ್ಯವಹಾರ ಹಿಂದಿನ ಲೇವಾದೇವಿದಾರರು ಮತ್ತು ಉದ್ಯಮಿಗಳ ಪಾಲಿಗೆ ಬಿಸಿತುಪ್ಪ ಆಗಿದೆ ಎನ್ನುವವರೂ ಇದ್ದಾರೆ.

ಈ ನಡುವೆ, ಕನ್ನಡದಲ್ಲಿ ಕಡಿಮೆ ವೆಚ್ಚದಲ್ಲಿ, ಕಡಿಮೆ ದಿನಗಳಲ್ಲಿ ಚಿತ್ರ ನಿರ್ಮಿಸುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಮಾಧ್ಯಮ ಎಲ್ಲರ ಕೈಗೆ ಎಟುಕುವಂತಾಗಿರುವುದು, ಸರ್ಕಾರ ನೀಡುವ ಸಹಾಯಧನ, ಅಂತಾ ರಾಷ್ಟ್ರೀಯ ಚಿತ್ರೋತ್ಸವಗಳ ಹೆಸರಿನ ವ್ಯಾಪಾರಗಳು (ಹತ್ತು ಸಾವಿರಕ್ಕೂ ಹೆಚ್ಚು ನಾಮಾಕವಾಸ್ತೆ ಚಿತ್ರೋತ್ಸವಗಳು ಈಗ ಜಗತ್ತಿನಾದ್ಯಂಥ ಹೆಸರಿಗೆ ನಡೆಯುತ್ತವೆ) ಅವು
ಕೂಡ ಈ ಹೊಸಬರ ಉತ್ಸಾಹಕ್ಕೆ ಕಾರಣ. ಅಲ್ಲಿ ಚಿತ್ರದ ಗುಣಮಟ್ಟದ ಬಗ್ಗೆಗಮನಕ್ಕಿಂತ, ಪ್ರತಿ ವಿಭಾಗಕ್ಕೆ ಸಲ್ಲುವ ಶುಲ್ಕದ ಕಡೆಗೆ ಗಮನವಿರುತ್ತದೆ.

ಇತ್ತೀಚೆಗೆ ಪಾನ್ ಇಂಡಿಯಾ ಚಿತ್ರಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಾರ, ಅವು ಕನ್ನಡ ಚಿತ್ರೋದ್ಯಮಕ್ಕೆ ಹಾಕುತ್ತಿರುವ ತೊಡರುಗಾಲನ್ನುಉದ್ಯಮ ಗಮನಿಸಿದಂತಿಲ್ಲ. ಪರಭಾಷಾ ಚಿತ್ರಗಳ ವಿಜೃಂಭಣೆ, ಅವುಗಳ ಕನ್ನಡ ಅವತರಣಿಕೆಗಳನ್ನು ಕನ್ನಡದ ಮಂದಿಯೇ ಎದೆಗೊತ್ತಿಕೊಂಡಿರುವುದು ಎಲ್ಲರಿಗೂ ಗೊತ್ತು. ಇಂತಹ ಚಿತ್ರಗಳ ಮುಂದೆ ಕಡಿಮೆ ವೆಚ್ಚದ ಚಿತ್ರಗಳು
ಮಂಡಿಯೂರುತ್ತಿರುತ್ತವೆ. ಅದ್ಧೂರಿ ಚಿತ್ರಗಳ ಬಿಡುಗಡೆಗೆ ಮೊದಲು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಧಾವಂತದಲ್ಲಿ ವಾರಕ್ಕೆ ಎಂಟು ಹತ್ತು ಚಿತ್ರಗಳು ತೆರೆಗೆ ತರುವ ಭರಾಟೆ. ಜನ ನೋಡುವ ಬಗ್ಗೆ, ಪ್ರಚಾರದ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಅಂತಹ ಚಿತ್ರಗಳ ಗುಣಮಟ್ಟದ ಬಗೆಗೂ ಹೆಚ್ಚೇನೂ ಹೇಳುವಂತಿಲ್ಲ.

ಕನ್ನಡ ಮಾತ್ರವಲ್ಲ, ಎಲ್ಲ ಕಡೆ ಇಂತಹ ಬೆಳವಣಿಗೆ ಇದೆ. ಅಲ್ಲೊಂದು, ಇಲ್ಲೊಂದು ಅದ್ಧೂರಿ ಚಿತ್ರಗಳು ಸುದ್ದಿ ಮಾಡುವುದು, ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವುದು ಹೊರತುಪಡಿಸಿದರೆ ಉಳಿದಂತೆ ಎಲ್ಲ ಭಾಷಾ ಚಿತ್ರರಂಗಗಳಲ್ಲೂ ಇದೇ ಸುದ್ದಿ. ಸಿನಿಮಾದಿಂದ ಪೇಕ್ಷಕ ದೂರವಾಗಲು, ಉಳಿದ ಮನರಂಜನೆಗಳು ಒಂದು ಕಾರಣವಾದರೆ, ಅವನನ್ನು ದೂರ ಮಾಡಲು ಬೇಕಾದ ಚಿತ್ರಗಳನ್ನು
ಉದ್ಯಮ ನೀಡುತ್ತಿರುವುದು ಇನ್ನೊಂದು ಕಾರಣ ಎನಿಸುತ್ತಿದೆ. ಅದಕ್ಕಾಗಿಯೇ ಈಗ ಒಟಿಟಿಯತ್ತ ನೋಡುತ್ತಿವೆ ಎಲ್ಲ ಚಿತ್ರರಂಗಗಳು.

ಬಹುತೇಕ ಚಿತ್ರಗಳ ಪ್ರಚಾರ ವೈಖರಿ ಈ ದಿನಗಳಲ್ಲಿತೀರಾ ಬೇರೆಯೇ. ಅದ್ಧೂರಿ ಬಂಡವಾಳ ಹೂಡುವ
ಚಿತ್ರಗಳ ಹೆಸರು ಲೋಕಾರ್ಪಣೆಯದೇ ಒಂದು ಕಾರ್ಯಕ್ರಮ, ಆ ಮೂಲಕ ಪ್ರಚಾರ; ಸಾಮಾನ್ಯವಾಗಿ ಚಿತ್ರತಂಡದ ಮಂದಿಯ
ಸಾಮಾಜಿಕ ತಾಣಗಳ ಮೂಲಕ, ದೃಶ್ಯಮಾಧ್ಯಮಗಳ ಮೂಲಕವೇ ಹೆಚ್ಚು. ತಮ್ಮ ಚಿತ್ರಗಳ ಹಾಡುಗಳು, ಟೀಸರ್, ಟ್ರೈಲರ್‌ಗಳನ್ನು ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡಿಸುವ ಮೂಲಕ ಪ್ರಚಾರ ಪಡೆಯುವುದು ಇನ್ನೊಂದು ರೀತಿ.
ಕೆಲವೊಮ್ಮೆ ಅವರುಗಳ ಮನೆಯಲ್ಲೇ ಈ ಲೋಕಾರ್ಪಣೆ ಕಾರ್ಯಕ್ರಮ ನಡೆಯುವುದೂ ಇದೆ. ಇದರಿಂದ ನಿರ್ಮಾಪಕರಿಗೆ ಕಾರ್ಯಕ್ರಮದ ವೆಚ್ಚವೂ ಉಳಿಕೆಯಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

4 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

4 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

4 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

5 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

5 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

6 hours ago