ಅಂಕಣಗಳು

ಮೇ ತಿಂಗಳಲ್ಲಿ ಹಣದುಬ್ಬರ ಶೇ.೨.೮ಕ್ಕೆ ಇಳಿಕೆ

ಪ್ರೊ.ಆರ್.ಎಂ.ಚಿಂತಾಮಣಿ

ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಇದೇ ಏಪ್ರಿಲ್ ತಿಂಗಳಲ್ಲಿ ಶೇ.೩.೧೬ ಇದ್ದದ್ದು ಮೇ ತಿಂಗಳಲ್ಲಿ ಶೇ. ೨.೮ಕ್ಕೆ ಇಳಿದಿದೆ. ಈ ಇಳಿಕೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ತೀವ್ರವಾಗಿದ್ದು, ಗ್ರಾಮೀಣ ಬೆಲೆ ಏರಿಕೆ ಶೇ.೨.೫೯ ಇದ್ದು, ನಗರ ಪ್ರದೇಶಗಳಲ್ಲಿ ಶೇ ೩.೦೭ ಇದೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ.

ಈ ಕುಸಿತಗಳಿಗೆ ಹಣ್ಣು, ತರಕಾರಿಗಳ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಇಳಿಕೆ ಮತ್ತು ಬೇಳೆಕಾಳುಗಳ ಬೇಳೆ ಕಾಳುಗಳು, ಮಾಂಸದ ಬೆಲೆಗಳಲ್ಲಿಯ ಇಳಿಮುಖ ಬೆಳವಣಿಗೆ ಕಾರಣವೆಂದು ಹೇಳಲಾಗಿದೆ. ಆಹಾರ ಪದಾರ್ಥಗಳಲ್ಲಿಯ ಈ ಗುಂಪಿಗೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಶೇ.೭.೫ ರಷ್ಟು ಮಹತ್ವ ಇರುತ್ತದೆ. ಉಳಿದಂತೆ ಅಡುಗೆ ಎಣ್ಣೆಮತ್ತು ಎಣ್ಣೆ ಕಾಳುಗಳು ಸೇರಿ ಕೆಲವು ಪದಾರ್ಥಗಳ ಬೆಲೆಗಳಲ್ಲಿ ಏರಿಕೆ ಕಂಡಿದ್ದರೂ ಇಳಿಕೆಯ ಪ್ರಮಾಣ ಹೆಚ್ಚಾಗಿದ್ದುದರಿಂದ ಒಟ್ಟಾರೆ ಹಣದುಬ್ಬರದಲ್ಲಿ ಇಳಿಕೆ ಕಂಡುಬರುತ್ತಿದೆ. ಇಷ್ಟೊಂದು ತಳಮಟ್ಟದ ಹಣದುಬ್ಬರ ಇಳಿದದ್ದು ೭೫ ತಿಂಗಳ ನಂತರ. -ಬ್ರವರಿ ೨೦೧೯ರಲ್ಲಿ ಹಣದುಬ್ಬರ ಶೇ. ೨.೫೭ರ ಮಟ್ಟಕ್ಕೆ ಇಳಿದಿತ್ತು.

ಈ ವರ್ಷ ವಾಡಿಕೆಗಿಂತ ಹೆಚ್ಚು ಅನ್ನುವಷ್ಟು ಮಳೆ ಬೀಳಲಿದೆ ಎಂದ ಅಂದಾಜುಗಳು ಮತ್ತು ಮುಂಗಾರು ಎಂಟು ದಿವಸ ಮೊದಲೇ ಪ್ರವೇಶ ಮಾಡಿರುವುದನ್ನು ಗಮನಿಸಿದರೆ ಕೃಷಿ ಉತ್ಪನ್ನ ಹೆಚ್ಚಾಗಬಹುದು ಮತ್ತು ಬೆಲೆಗಳು ಇದೇ ಮಟ್ಟದಲ್ಲಿ ಮುಂದುವರಿಯುತ್ತವೆಂದು ನಿರೀಕ್ಷಿಸಬಹುದಾದರೂ ಬರುವ ದಿನಗಳಲ್ಲಿ ಮಳೆಯ ಅನಿಶ್ಚಿತತೆ ಮತ್ತು ನೈಸರ್ಗಿಕವೈಪರೀತ್ಯಗಳ ಆತಂಕವೂ ಅಷ್ಟೇ ಕಾಡುತ್ತದೆ. ಮತ್ತು ಜಾಗತಿಕ, ಭೌಗೋಳಿಕ, ರಾಜಕೀಯ ಬೆಳವಣಿಗೆಗಳೂ, ಅನಿಶ್ಚಿತತೆಗಳೂ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುವುದಕ್ಕೆ ಕಾರಣಗಳಾಗಬಹುದು. ಇದು ಆಂತರಿಕ ಪೂರೈಕೆ ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಅಂತಾರಾಷ್ಟ್ರೀಯ ಉತ್ಪಾದನೆ ಮತ್ತು ಪೂರೈಕೆ ಸರಪಳಿಯೂ ಇಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇವುಗಳಲ್ಲಿ ಸ್ವಲ್ಪ ಏರುಪೇರಾದರೂ ಎಲ್ಲ ದೇಶಗಳಂತೆ ನಮ್ಮ ದೇಶದಲ್ಲಿಯೂ ಆಂತರಿಕ ಬೆಲೆಗಳ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ.

ಊಟದ ಎಣ್ಣೆ ಮತ್ತು ಎಣ್ಣೆ ಕಾಳುಗಳದ್ದೇ ಸಮಸ್ಯೆ: ಇತ್ತೀಚಿನ ವರ್ಷಗಳಲ್ಲಿ ನಾವು ಬೇಳೆ ಕಾಳುಗಳ ವಿಷಯದಲ್ಲಿ ತಕ್ಕಮಟ್ಟಿಗೆ ಸ್ವಾವಲಂಬನೆ ಸಾಧಿಸಿದ್ದರೂ ಎಣ್ಣೆ ಕಾಳುಗಳಿಗೆ ಸಂಬಂಧಿಸಿದಂತೆ ಇದು ಇಂದಿಗೂ ಸಾಧ್ಯವಾಗಿಲ್ಲ. ಎಷ್ಟೇ ಉತ್ತೇಜನಗಳನ್ನು ಒದಗಿಸಿದರೂ ಎಣ್ಣೆ ಕಾಳುಗಳ ಬಿತ್ತನೆ ಮತ್ತು ಬೆಳೆಯುವ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿಲ್ಲ. ಆದ್ದರಿಂದ ಅಡುಗೆ ಎಣ್ಣೆ ಮತ್ತು ಎಣ್ಣೆ ಕಾಳುಗಳ ವಿಷಯದಲ್ಲಿ ಆಮದುಗಳ ಮೇಲಿನ ಅವಲಂಬನೆ ಮುಂದುವರಿಯುತ್ತಿದೆ. ಅಷ್ಟರ ಮಟ್ಟಿಗೆ ವಿದೇಶಿ ವಿನಿಮಯ ನಿಧಿಯ ಮೇಲಿನ ಒತ್ತಡ ಹೆಚ್ಚುತ್ತಿದೆ. ವಿದೇಶಿ ವ್ಯಾಪಾರ ಕೊರತೆಯೂ ಹೆಚ್ಚುತ್ತದೆ.

ಅಂತಾರಾಷ್ಟ್ರೀಯ ಪೇಟೆಗಳಲ್ಲಿ ಎಣ್ಣೆ ಮತ್ತು ಎಣ್ಣೆ ಕಾಳುಗಳ ಬೆಲೆಗಳು ವಿಪರೀತ ಹೆಚ್ಚಾಗಿರುವುದರಿಂದ ನಮ್ಮ ಆಮದು ವೆಚ್ಚ ಹೆಚ್ಚುವುದಲ್ಲದೆ ಆಂತರಿಕ ಪೇಟೆಯಲ್ಲಿ ಬೆಲೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಲು ಕಾರಣವಾಗಿದೆ. ಅಡುಗೆ ಎಣ್ಣೆಯ ಮೇಲಿನ ಶೇ. ೫.೦ರ ಮೂಲ ಆಮದು ಸುಂಕವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರವೂ ಬೆಲೆಗಳು ಕಡಿಮೆಯಾಗುತ್ತಿಲ್ಲ. ಪರಾವಲಂಬನೆಯೇ ಇದಕ್ಕೆ ಕಾರಣವೆನ್ನಬಹುದು. ಇದಕ್ಕೆಲ್ಲ ಪರಿಹಾರವೆಂದರೆ ಸ್ವಾವಲಂಬನೆಯತ್ತ ದಿಟ್ಟ ಗಟ್ಟಿ ಹೆಜ್ಜೆ ಇಡುವುದು. ಎಣ್ಣೆ ಕಾಳುಗಳ ಬಿತ್ತನೆ ಭೂಮಿಯ ಪ್ರಮಾಣವನ್ನು ಹೆಚ್ಚಿಸಬೇಕು. ಅಲ್ಲದೆ ಎಣ್ಣೆ ಗಿರಣಿಗಳು ಮತ್ತು ರಿಫೈನರಿಗಳ ಸಂಖ್ಯೆ ಹೆಚ್ಚಬೇಕು. ಸರ್ಕಾರಗಳು ರೈತರಿಗೆ ಇನ್ನಷ್ಟು ಉತ್ತೇಜನಗಳನ್ನು ಒದಗಿಸಿ ಎಣ್ಣೆ ಕಾಳುಗಳನ್ನು ಬೆಳೆಯುವ ಭೂಮಿಯ ಪ್ರಮಾಣ ಹೆಚ್ಚುವಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅದೇ ರೀತಿ ಎಣ್ಣೆ ಗಿರಣಿ ಮತ್ತು ರಿಫೈನರಿಗಳಿಗೆ ಉತ್ತೇಜಕ ನೀತಿಗಳನ್ನು ರೂಪಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜಾಗೃತಿ ಮೂಡಿಸಬೇಕು.

ಬೆಳವಣಿಗೆಗೆ ಪೂರಕ ಕ್ರಮಗಳು ಬೇಕು: ಇಂದಿನ ಸ್ಥಿತಿಗೆ ಬಂದರೆ ಬೆಲೆಗಳು ತೀರ ಕೆಳಮಟ್ಟದಲ್ಲಿ ಇರುವಾಗ ಖರೀದಿಸುವವರಿಗೆ (ಉಪಬೋಗರಿಗೆ) ಅನುಕೂಲವಾಗುತ್ತದೆ. ಅವರು ಹೆಚ್ಚು ಖರೀದಿಸಿ ಬೇಡಿಕೆಯನ್ನು ಹೆಚ್ಚಿಸಬಹುದು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಹಾಗೆಯೇ ಆಗಿರಬಹುದು. ಅಂದರೆ ಹಳ್ಳಿಗಳಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂದು ಅರ್ಥೈಸಬಹುದಲ್ಲವೆ? ಕೂಲಿ ಮತ್ತು ಆದಾಯಗಳು ಹೆಚ್ಚುತ್ತಿವೆ ಎಂಬುದನ್ನು ಇದು ಸಮರ್ಥಿಸುತ್ತದೆ. ಆದರೆ ಇದೇ ಚಿಂತನೆಯನ್ನು ಉತ್ಪಾದಕರು ಮತ್ತು ಮಾರಾಟಗಾರರ ಕಡೆಗೆ ತಿರುಗಿಸಿದರೆ ಅವರ ಲಾಭ (ಆದಾಯ) ಕಡಿಮೆಯಾಗಬಹುದು ಅಥವಾ ಬೆಲೆಗಳು ಮಿತಿ ಮೀರಿ ಕೆಳಗಿದ್ದರೆ ನಷ್ಟವೂ ಆಗಬಹುದು. ಆಗ ಉತ್ಪಾದಕ ಚಟುವಟಿಕೆಗಳಿಗೆ ಹೊಡೆತ ಬೀಳಬಹುದಲ್ಲವೆ? ಅದರ ಪರಿಣಾಮವಾಗಿ ಉದ್ಯೋಗಾವಕಾಶಗಳು ಕಡಿಮೆಯಾಗಬಹುದು. ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಹಣದುಬ್ಬರ ಎರಡೂ ಕಡೆಗೆ ಮಿತಿ ಮೀರಿದರೆ ಕಷ್ಟ.

ದೇಶದ ಎಲ್ಲ ಭಾಗಗಳಲ್ಲೂ ಹಣದುಬ್ಬರ ಒಂದೇ ಮಟ್ಟದಲ್ಲಿ ಇಲ್ಲ. ದೊಡ್ಡ ೨೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ೧೦ ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ( ಶೇ.೨.೮) ಹೆಚ್ಚಾಗಿದ್ದರೆ ಉಳಿದ ೧೨ ರಲ್ಲಿ ಸರಾಸರಿಗಿಂತ ಕಡಿಮೆ ಮಟ್ಟದಲ್ಲಿದೆ. ಉದಾಹರಣೆಗಳನ್ನು ಕೊಡುವುದಾದರೆ ಕೇರಳದಲ್ಲಿ ಅತಿ ಹೆಚ್ಚು ಶೇ. ೬.೪೬ ಇದ್ದರೆ, ಎರಡನೇ ಸ್ಥಾನದಲ್ಲಿರುವ ಪಂಜಾಬ್‌ನಲ್ಲಿ ಶೇ. ೫.೨೧ ಇತ್ತು. ಇನ್ನು ಕೆಳಗಿನ ಕೊನೆ ಸ್ಥಾನದಲ್ಲಿರುವ ತೆಲಂಗಾಣದಲ್ಲಿ ಶೇ.೦.೫೫ ಇದ್ದರೆ ಅದರ ಮೇಲಿನ ಸ್ಥಾನದಲ್ಲಿ ಬಿಹಾರ ಶೇ.೧.೫೨ ರೊಂದಿಗೆ ನಿಲ್ಲುತ್ತದೆ. ಕೆಳಗಿನಿಂದ ಮೂರನೇ ಸ್ಥಾನದಲ್ಲಿ ಶೇ.೧.೬೯ ರೊಂದಿಗೆ ಆಂಧ್ರಪ್ರದೇಶವಿದೆ. ಆಯಾ ರಾಜ್ಯಗಳ ಸ್ಥಿತಿಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿ ಒಟ್ಟಾರೆ ದೇಶದ ದೃಷ್ಟಿಕೋನದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು.

ಸ್ಥೂಲವಾಗಿ (ಒಟ್ಟಾರೆ) ಮತ್ತು ಸೂಕ್ಷ್ಮವಾಗಿ (ಪ್ರತಿರಾಜ್ಯ) ಪರಿಸ್ಥಿತಿಯನ್ನು ಗಮನಿಸಿದರೆ , ಬೇಡಿಕೆಯನ್ನು ಹೆಚ್ಚಿಸುವ ಮತ್ತು ಕೈಗೆ ಕೊಳ್ಳುವ ಶಕ್ತಿಯನ್ನು ತುಂಬಲು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ.

” ರಿಜರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯಲ್ಲಿ ಹಣದುಬ್ಬರದ ಸುರಕ್ಷಿತ ಮಿತಿಗಳನ್ನು ಸದ್ಯಕ್ಕೆ ಶೇ. ೨-೬ ಎಂದು ನಿಗದಿ ಮಾಡಿದ್ದು, ಮಧ್ಯಮ ಸ್ಥಿತಿಯನ್ನು ಶೇ. ೪.೦ ಎಂದು ನಿರ್ಧರಿಸಿದೆ. ಮೇ ತಿಂಗಳ ಹಣದುಬ್ಬರ ಸುರಕ್ಷಿತ ಮಿತಿಯನ್ನು ಮೀರದಿದ್ದರೂ ಕೆಳಗಿನ ಮಿತಿಗೆ ಸಮೀಪದಲ್ಲಿದೆ. ಇನ್ನೂ ಕೆಳಗೆ ಹೋದರೆ ಅಪಾಯ. ಹಾಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ.”

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ: ಬೊಮ್ಮಲಾಪುರದಲ್ಲಿ ವಾಸದ ಮನೆಗೆ ನುಗ್ಗಿದ ಕಡವೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…

13 mins ago

ಶಿಕ್ಷಣದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ: ಡಾ.ಕುಮಾರ

ಮಂಡ್ಯ: ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ…

30 mins ago

ಮಂಡ್ಯ| ಬೂದನೂರು ಉತ್ಸವಕ್ಕೆ ಭರದ ಸಿದ್ಧತೆ: ಈ ಬಾರಿ ಹೆಲಿ ಟೂರಿಸಂ ಆಕರ್ಷಣೆ

ಮಂಡ್ಯ: ತಾಲ್ಲೂಕಿನ ಹೊಸ ಬೂದನೂರಿನಲ್ಲಿ ನೆಲೆಯಾಗಿರುವ ಕಾಶಿ ವಿಶ್ವನಾಥ ಹಾಗೂ ಅನಂತಪದ್ಮನಾಭಸ್ವಾಮಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಉತ್ಸವಕ್ಕೆ…

45 mins ago

ಈ ವರ್ಷ ಬಿಸಿಲ ಝಳವೂ ಹೆಚ್ಚಳ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ಈ ವರ್ಷ ಚಳಿ ಪ್ರಮಾಣ ಹೆಚ್ಚಾಗಿದ್ದರಿಂದ ಬಿಸಿಲ ಝಳವೂ ಹೆಚ್ಚಾಗಿರಲಿದ್ದು, ಮುಂದಿನ ಬೇಸಿಗೆಯಲ್ಲಿ ವಿಪರೀತ ಬಿಸಿಲು ಹವಾಮಾನ ಇರಲಿದೆ…

1 hour ago

ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ…

1 hour ago

ಬಡವರಿಗೆ ಮನರೇಗಾ ಅಡಿ ಕೂಲಿ ಕೆಲಸ ಕೊಟ್ಟಿದ್ದು ಮನಮೋಹನ್‌ ಸಿಂಗ್:‌ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ…

1 hour ago