ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನ
ಜಿ.ಎಂ.ಪ್ರಸಾದ್ ಮೈಸೂರು
ಡಾ.ಬಿ.ಆರ್.ಅಂಬೇಡ್ಕರ್ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಮಾನವತಾವಾದಿ, ಶಿಕ್ಷಣ ಮತ್ತು ಸಂವಿಧಾನ ತಜ್ಞರಾಗಿ, ಅರ್ಥಶಾಸ್ತ್ರ , ಸಮಾಜಶಾಸ್ತ್ರ, ತತ್ವಜ್ಞಾನ, ರಾಜನೀತಿಶಾಸ್ತ್ರಜ್ಞರಾಗಿ ಅವರು ಶತಮಾನಗಳಿಂದ ಶೋಷಣೆ, ತಾರತಮ್ಯಕ್ಕೊಳಗಾದವರಿಗೆ ಮುಕ್ತಿ ನೀಡಿದ ಆಶಾಕಿರಣರಾಗಿದ್ದಾರೆ. ಇಂದು ಅವರು ಮಹಾಪರಿನಿರ್ವಾಣ ಹೊಂದಿದ ದಿನ.
ಅಂಬೇಡ್ಕರ್ ಅವರು ಬದುಕಿದ್ದು ೬೫ ವರ್ಷಗಳಾದರೂ ಅವರು ಗಳಿಸಿದ ಜ್ಞಾನ ಮಾಡಿದ ಸಾಧನೆ, ಎಂದೆಂದಿಗೂ ಮರೆಯುವಂತಿಲ್ಲ. ಜಾತಿ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಅನುಷ್ಠಾನಗೊಳ್ಳುವುದಿಲ್ಲ ಎಂದು ನಂಬಿದ್ದ ಅವರು, ದೇಶದ ನಾಗರಿಕರಿಗೆ ಶಿಕ್ಷಣ ಮತ್ತು ಸಮಾನತೆ ಸಿಗಬೇಕು ಎಂದು ಪ್ರತಿಪಾದಿಸಿದರು. ಅದನ್ನೇ ಸಂವಿಧಾನದಲ್ಲೂ ಅಳವಡಿಸಿದರು. ‘ನನ್ನ ಮೊದಲ ಪ್ರೀತಿ ಪುಸ್ತಕವೇ’ ಎಂದು ಥಾಮಸ್ ಜಫರ್‌ಸನ್ ಹೇಳಿದ ಹಾಗೇ ಬಾಬಾಸಾಹೇಬರಿಗೆ ಪುಸ್ತಕ ಓದು, ಪುಸ್ತಕಗಳ ಸಂಗ್ರಹಣೆ ಎಂದರೆ ಅಚ್ಚುಮೆಚ್ಚು. ಪುಸ್ತಕಗಳು ಅವರ ಆತ್ಮಬಂಧುವೂ ಆಗಿದ್ದವು. ತಮ್ಮ ತಿಂಗಳ ಸಂಪಾದನೆಯ ಅರ್ಧದಷ್ಟು ಹಣವನ್ನು ಪುಸ್ತಕಗಳ ಖರೀದಿಗೆ ವ್ಯಯಿಸುತ್ತಿದ್ದರು.
ಅವರಿಗೆ ಪುಸ್ತಕಗಳೆಂದರೆ ಎಷ್ಟು ಅಚ್ಚುಮೆಚ್ಚು ಅನ್ನುವುದಕ್ಕೆ ಮುಂಬೈನ ದಾದರ್‌ನಲ್ಲಿರುವ ಅವರ ರಾಜಗೃಹ ನಿವಾಸದಲ್ಲಿ ಅವರು ಸಂಗ್ರಹಿಸಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳೇ ಸಾಕ್ಷಿ. ಕೇವಲ ಪುಸ್ತಕಗಳಿಗಾಗಿಯೇ ಅವರು ರಾಜಗೃಹ ನಿವಾಸವನ್ನು ಕಟ್ಟಿಸಿದ್ದರು ಎಂದರೆ ಅವರ ಪುಸ್ತಕ ಪ್ರೀತಿ ನಮ್ಮ ಅರಿವಿಗೆ ಬರಬೇಕು. ಆ ಸಮಯಕ್ಕೆ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದು ಅವರೊಬ್ಬರೇ ಇರಬಹುದು. ಇದನ್ನು ಗ್ರಂಥಪಾಲಕರಾಗಿದ್ದ ದೇವಿ ದಯಾಳ್ ರವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಶತಮಾನದ ಹಿಂದೆಯೇ ಬಾಬಾಸಾಹೇಬರು ತಮ್ಮ ಬಳಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದು ಅಚ್ಚರಿಯ ಸಂಗತಿಯೂ ಹೌದು.
ಕಲಿಕೆ ಮತ್ತು ಓದು ಬಾಬಾಸಾಹೇಬರಿಗೆ ಮುಖ್ಯವಾದವುಗಳು. ಪ್ರತಿದಿನವೂ ತಪ್ಪದೇ ದಿನಪತ್ರಿಕೆಗಳನ್ನು ಓದುತ್ತಿದ್ದ ಅವರು, ಮುಖ್ಯವಾದವುಗಳನ್ನು ಗುರುತು ಹಾಕಿಕೊಳ್ಳಲು ಕೆಂಪುಶಾಯಿಯ ಪೆನ್ನನ್ನು ಬಳಸುತ್ತಿದ್ದರು. ಮುಖ್ಯವಾದ ಲೇಖನಗಳನ್ನು ಸಂಗ್ರಹಿಸಿ ಕಡತದಲ್ಲಿಡುತ್ತಿದ್ದರು.
ತಾವು ಮಲಗುವ ಕೋಣೆ ತುಂಬಾ ಪುಸ್ತಕಗಳನ್ನು ಇಟ್ಟುಕೊಂಡಿದ್ದ ಬಾಬಾಸಾಹೇಬರು, ಮಲಗುವ ಸ್ಥಳದ ಪಕ್ಕದಲ್ಲೇ ಓದುವ ಪುಸ್ತಕ, ಟಿಪ್ಪಣಿ ಮಾಡಿಕೊಳ್ಳಲು ಕಾಗದ, ಪೆನ್ನು-ಪೆನ್ಸಿಲನ್ನು ಸದಾ ಹೊಂದಿರುತ್ತಿದ್ದರು. ಓದಿ ರಾತ್ರಿ ಎಷ್ಟು ಗಂಟೆಗೆ ಬಾಬಾಸಾಹೇಬರು ಮಲಗಿದರು ಎಂಬುದು ಅವರ ಆಪ್ತರಿಗೂ ತಿಳಿಯುತ್ತಿರಲಿಲ್ಲ. ಓದಿನಲ್ಲಿ ಅವರು ಅಷ್ಟು ಮಗ್ನರಾಗುತ್ತಿದ್ದರು.
ಬಾಬಾಸಾಹೇಬರು ಕೆಲವೊಮ್ಮೆ ಸತತ ಹತ್ತು ಗಂಟೆಗಳ ಕಾಲ ಅಧ್ಯಯನದಲ್ಲಿ ಮಗ್ನರಾಗುತ್ತಿದ್ದ ಉದಾಹರಣೆಗಳೂ ಇದ್ದವು ಎಂದು ಅವರ ಆಪ್ತ ದೇವಿದಯಾಳರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ‘ಉಳ್ಳವರು ವಾಸಕ್ಕಾಗಿ ದೊಡ್ಡ ಬಂಗಲೆಗಳನ್ನು ನಿರ್ಮಿಸುತ್ತಾರೆ. ಆದರೆ, ಪುಸ್ತಕಗಳಿಗಾಗಿಯೇ ಮನೆಯನ್ನು ಕಟ್ಟಿಸಿದ ಮಹಾಪುರುಷ ಬಾಬಾಸಾಹೇಬ್’ ಎಂದು ಪ್ರೊ.ಧನಂಜಯ ಕೀರ್ ಅಂಬೇಡ್ಕರ್‌ರವರ ಪುಸ್ತಕಗಳ ಮೇಲಿನ ಪ್ರೀತಿಯನ್ನು ವರ್ಣಿಸಿದ್ದಾರೆ.
ಪುಸ್ತಕಗಳ ಮೇಲೆ ಬಾಬಾಸಾಹೇಬರಿಗೆ ಎಷ್ಟರ ಮಟ್ಟಿಗೆ ಒಲವಿತ್ತು ಎನ್ನುವುದಕ್ಕೆ ಮತ್ತೊಂದು ನಿದರ್ಶನ ಅವರು ತಮಗೆ ಪುಸ್ತಕಗಳಿಂದ ಬರುತ್ತಿದ್ದ ಗೌರವಧನವನ್ನು ನಗದಾಗಿ ಪಡೆಯುವ ಬದಲಿಗೆ ಅಗತ್ಯವಿರುವ ಪುಸ್ತಕಗಳನ್ನಾಗಿ ಪಡೆಯುತ್ತಿದ್ದುದು. ಹಲವು ಬಾರಿ ಗೌರವಧನಕ್ಕಿಂತ ಪುಸ್ತಕಗಳನ್ನು ಪಡೆದ ಬೆಲೆಯೇ ಹೆಚ್ಚಾಗಿರುತ್ತಿತ್ತು. ಎಷ್ಟೇ ಆರ್ಥಿಕ ಮುಗ್ಗಟ್ಟುಗಳಿದ್ದರೂ ಡಾ.ಬಿ.ಆರ್.ಅಂಬೇಡ್ಕರ್‌ರವರು ಪುಸ್ತಕ ಕೊಳ್ಳುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರೀದಿಸಿದ್ದರು ಎಂಬುದು ಅಂದಿನ ಕಾಲಕ್ಕೆ ದೊಡ್ಡ ಸುದ್ದಿಯೇ ಸರಿ.
ಭಾರತದಲ್ಲಿಯೇ ಬಾಬಾಸಾಹೇಬರ ಪುಸ್ತಕ ಸಂಗ್ರಹಣೆ ಅತ್ಯಂತ ದೊಡ್ಡದು ಎನ್ನಬಹುದು. ನಾನು ಮಲಗುವ ಕೋಣೆಯೇ ನನ್ನ ಸಮಾಽ ಎಂದು ಹೇಳಿದ್ದ ಬಾಬಾಸಾಹೇಬರು, ನನ್ನ ಬಳಿ ಸಂಪತ್ತು ಎಂದು ಏನಾದರೂ ಇದ್ದರೆ ಅದು ಪುಸ್ತಕಗಳು ಮಾತ್ರ ಎಂದು ಹೇಳುತ್ತಿದ್ದರು. ಪುಸ್ತಕಗಳ ಬಗ್ಗೆ ಬಾಬಾಸಾಹೇಬರು, ಜ್ಞಾನದಾಹವನ್ನು ಪುಸ್ತಕವೆಂಬ ನೀರು ಯಾವತ್ತೂ ತೀರಿಸುವುದಿಲ್ಲ. ಅದು ಮತ್ತಷ್ಟು ತೀವ್ರವಾಗುತ್ತಾ ಹೋಗುತ್ತದೆ ಎಂದು ಹೇಳಿದ್ದಾರೆ. ಅವರ ಗ್ರಂಥಾಲಯದಲ್ಲಿ ಯಾವ ಪುಸ್ತಕ ಎಲ್ಲಿ ಇದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಅಷ್ಟರ ಮಟ್ಟಿಗಿನ ಪುಸ್ತಕ ಪ್ರೀತಿ ಅವರದಾಗಿತ್ತು.
ಬಾಬಾಸಾಹೇಬರು ಓದುತ್ತಿದ್ದ ವೇಳೆ ಪುಸ್ತಕದಲ್ಲಿ ಲೀನವಾಗಿ ತಾವೇ ಪುಸ್ತಕವಾಗಿ ಬಿಡುತ್ತಿದ್ದರು ಎಂದು ಅವರು ಆಪ್ತರು ಹೇಳುತ್ತಾರೆ. ಇಂಗ್ಲೆಂಡ್ ನಿಂದ ಮರಳಿ ಬರುವಾಗ ವೆನಿಸ್‌ನಿಂದ ಮುಂಬಯಿಗೆ ಬರುವಷ್ಟರಲ್ಲಿ ೮,೦೦೦ ಪುಟಗಳನ್ನು ಓದಿ ಮುಗಿಸಿದ್ದೆ ಎಂದು ಬಾಬಾಸಾಹೇಬರು ದಾಖಲಿಸಿದ್ದಾರೆ. ಗ್ರಂಥಾಲಯಗಳ ಬಗ್ಗೆ ಅಂಬೇಡ್ಕರ್‌ರವರು ‘ಸಾರ್ವಜನಿಕ ಗ್ರಂಥಾಲಯಗಳು ಜನರಿಂದ ಜನರಿಗಾಗಿ ಇರುವ ಅತ್ಯುತ್ತಮ ವ್ಯವಸ್ಥೆ.
ಮೂಲಭೂತವಾಗಿ ಗ್ರಂಥಾಲಯಗಳು ಏನನ್ನೂ ಅಪೇಕ್ಷಿಸುವುದಿಲ್ಲ, ಯಾವುದೇ ಪ್ರವೇಶ ಶುಲ್ಕ ಕೇಳುವುದಿಲ್ಲ. ಇಂದು ನಮ್ಮ ನಡುವೆ ತಾರತಮ್ಯವಿಲ್ಲದ, ವಾಣಿಜ್ಯೇತರ ಸ್ಥಳಗಳಲ್ಲಿ ಗ್ರಂಥಾಲಯವೂ ಒಂದು’ ಎಂದು ಗ್ರಂಥಾಲಯಗಳ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‌ರವರ ಹೆಸರು ಹೇಳುವ, ಅವರ ಹೆಸರನ್ನು ಬಳಸಿ ರಾಜಕೀಯ ಮಾಡುವ ಮಂದಿ ಬಹಳ ಇದ್ದಾರೆ. ಅಂತಹವರು ನಿಜವಾಗಿಯೂ ಸ್ಥಳೀಯವಾಗಿ ಪುಸ್ತಕ ಪ್ರೀತಿಯನ್ನು ಉತ್ತೇಜಿಸಬೇಕು. ಇಂದು ಬದಲಾದ ಜೀವನಶೈಲಿ, ಸಾಮಾಜಿಕ ಜಾಲತಾಣಗಳಿಂದ ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ, ಅದೇ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ.
ಕಲಿಕೆ ಮತ್ತು ಓದು ಬಾಬಾಸಾಹೇಬರಿಗೆ ಮುಖ್ಯವಾದವುಗಳು. ಪ್ರತಿದಿನವೂ ತಪ್ಪದೇ ದಿನಪತ್ರಿಕೆಗಳನ್ನು ಓದುತ್ತಿದ್ದ ಅವರು, ಮುಖ್ಯವಾದವುಗಳನ್ನು ಗುರುತು ಹಾಕಿಕೊಳ್ಳಲು ಕೆಂಪುಶಾಯಿಯ ಪೆನ್ನನ್ನು ಬಳಸುತ್ತಿದ್ದರು. ಮುಖ್ಯವಾದ ಲೇಖನಗಳನ್ನು ಸಂಗ್ರಹಿಸಿ ಕಡತದಲ್ಲಿಡುತ್ತಿದ್ದರು. ತಾವು ಮಲಗುವ ಕೋಣೆ ತುಂಬಾ ಪುಸ್ತಕಗಳನ್ನು ಇಟ್ಟುಕೊಂಡಿದ್ದ ಬಾಬಾಸಾಹೇಬರು, ಮಲಗುವ ಸ್ಥಳದ ಪಕ್ಕದಲ್ಲೇ ಓದುವ ಪುಸ್ತಕ, ಟಿಪ್ಪಣಿ ಮಾಡಿಕೊಳ್ಳಲು ಕಾಗದ, ಪೆನ್ನು-ಪೆನ್ಸಿಲನ್ನು ಸದಾ ಹೊಂದಿರುತ್ತಿದ್ದರು
ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…
ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…
ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…