• ಪೂರ್ಣಿಮಾ ಭಟ್ ಸಣ್ಣಕೇರಿ
ಹತ್ತಾರು ವರ್ಷ ಬ್ರಿಟನ್ನಿನ ಕ್ರಿಸ್‌ಮಸ್ ಸೊಬಗನ್ನು ಖುದ್ದು ಅನುಭವಿಸಿ, ಈಗ ಬೆಂಗಳೂರಿನ ಅಂತರಿಕ್ಷವೇ ಅನ್ನಿಸುವಂಥ ಒಂದು ಅಪಾರ್ಟ್‌ಮೆಂಟ್ ಕಿಟಕಿಗೆ ಮುಖ ಮಾಡಿ ಕೂತ ನಾನು, ಕ್ರಿಸ್‌ಮಸ್ ಬಗ್ಗೆ ಬರೆಯತೊಡಗಿದಾಗ ಒಂದಷ್ಟು ಘಳಿಗೆ ಇಂಗ್ಲೆಂಡಿನಲ್ಲೇ ಸುತ್ತಾಡಿ ಬಂದೆ, ಏರೋಪ್ಲೇನಿನ ಟಿಕೆಟ್ ಖರ್ಚಿಲ್ಲದೇ.
ಕೆಲ ವರುಷಗಳ ಹಿಂದಿನ ಒಂದು ಕ್ರಿಸ್ ಮಸ್ಸಿನ ಮಧ್ಯಾಹ್ನ. ಇಂಗ್ಲೆಂಡಿನ ದಕ್ಷಿಣ ಭಾಗದ ಸಣ್ಣ ಶಹರವಾದ ಷೆಪರ್‌ಟನ್ನಿನ ನುಣ್ಣನೆಯ ಫುಟ್ಟಾತಿನ ಮೇಲೆ ನಡೆಯುತ್ತಿದ್ದೆ. ಶಾಖದೊಂದಿಗೆ ದೋಸ್ತಿ ಬಿಟ್ಟಂತಿದ್ದ ಆಕಾಶದ ಸೂರ್ಯ, ಕಷ್ಟಪಟ್ಟು ಅಲ್ಪಸ್ವಲ್ಪ ಬೆಳಕನ್ನು ಮಾತ್ರ ಕೊಡುತ್ತಿದ್ದ. ಖಾಲಿ ರಸ್ತೆ. ಫುತ್ಪಾತಿನ ಆಚೆಬದಿಯ ಮನೆಗಳು ಮಾತ್ರ ಜನರಿಂದ ಗಿಜಿಗುಡುತ್ತಿವೆ. ಬೇರೆ ದಿನಗಳಲ್ಲಿ ಇಬ್ಬರಿದ್ದರೆ ಸಾಕು, ಮೂವರಿದ್ದರೆ ಹೆಚ್ಚು, ನಾಲ್ವರಿದ್ದರಂತೂ ಕೋಲಾಹಲ ಎಂಬಂತಿರುವ ಮನೆಗಳ ರೂಪವೇ ಬೇರೆ ಇವತ್ತು!
ಒಂದು ಗುಂಪು ಲಿವಿಂಗ್ ರೂಮಿನಲ್ಲಿದ್ದರೆ ಇನ್ನೊಂದು ಗುಂಪು ಡೈನಿಂಗ್ ಟೇಬಲ್ ಸುತ್ತುವರಿದಿತ್ತು. ಅದೋ ಮುಂದಿನ ಮನೆಯೆದುರಿನ ಗಾರ್ಡನ್ನಿನಲ್ಲಿ ಮೂವರು ಮಕ್ಕಳು, ಮೈ ಕೊರೆಯುವ ಚಳಿಯೂ ಲೆಕ್ಕಕ್ಕಿಲ್ಲ ಈ ಚಿಲ್ವಾರಿಗಳಿಗೆ. ಹದಿನೈದು ದಿನಗಳ ಹಿಂದೆಯೇ ಕಿಟಕಿಯಿಂದ ಕಾಣುತ್ತಿದ್ದ ‘ಕ್ರಿಸ್ ಮಸ್ ಟೀ’ಗಳು ಇವತ್ತು ತುಸು ಜಾಸ್ತಿ ಮಿಣಮಿಣಸುತ್ತಿವೆ. ಎಲ್ಲೋ ಒಂದೆರಡು ನಿಶ್ಯಬ್ದ ಮನೆಗಳನ್ನು ಬಿಟ್ಟರೆ ಬೀದಿಯುದ್ದಕ್ಕೂ ಕಂಡಿದ್ದು ಇದೇ ದೃಶ್ಯ, ಮನೆಯೊಂದರ ಕರ್ಟನ್ನಿನ ಹಿಂದೆ ಕಣ್ಣು ನೆಡುತ್ತಿದ್ದಾಗ ಕಿಟಕಿಯ ಆ ಬದಿ ಗ್ಲಾಸ್ ಹಿಡಿದು ನಿಂತ ತಾತನೊಬ್ಬ ಪಟ್ಟನೆ ಕರ್ಟನ್ ಎಳೆದು ಕಣ್ಣಲ್ಲೇ “ಅಧಿಕ ಪ್ರಸಂಗಿ’ ಅಂದಂತಾಯಿತು.
ಬ್ರಿಟನ್ನಿನ ನೆಲದಲ್ಲಿ ಕ್ರಿಸ್‌ಮಸ್ ಎಂದರೆ, ಖುಷಿ ಸಡಗರ ಸಂಯಮ ಸಹನೆ ಸಹಾನುಭೂತಿ ಸ್ನೇಹಕ್ಕೆ ಒಂದು ಬಲವಾದ ನೆಪ, ಈ ಬಾರಿ ಯಾರಿಗೆ ಏನು ಕ್ರಿಸ್‌ಮಸ್ ಉಡುಗೊರೆ ಕೊಳ್ಳಬಹುದು ಎಂಬ ಪಟ್ಟಿ ಮೊದಲು ಶುರುವಾಗುವುದೇ ಫೋನುಗಳಲ್ಲಿ, ಕಂಪ್ಯೂಟರ್‌ಗಳಲ್ಲಿ, ಡ್ರಾಫ್ಟ್ ಮೆಸೇಜುಗಳಲ್ಲಿ. ಕುಟುಂಬದವರೊಂದಿಗೆ, ಹತ್ತಿರದ ಬಳಗದವರೊಂದಿಗೆ ಉಡುಗೊರೆಗಳ ವಿನಿಮಯ, ಮುಂದಿನ ವರ್ಷವಿಡೀ ಮನದಲ್ಲಿ ಉಳಿಯಬೇಕಾದಷ್ಟು ಲವಲವಿಕೆಯ ತಮಾಷೆಗಳು, ಅಳುಕನ್ನೆಲ್ಲ ಪಕ್ಕಕ್ಕಿಟ್ಟು ಬಗೆಹರಿಯದ ಮಾತುಗಳನ್ನು ದಡಗಾಣಿಸುವುದು, ನಗು, ಮಸ್ತಿ, ಹರಟೆ, ಗುಸು ಪಿಸು ಮಾತು ಇವೆಲ್ಲದರ ಮೊತ್ತ ಕ್ರಿಸ್ ಮಸ್. ಹೊಸವರ್ಷಕ್ಕೆ ಹೆಜ್ಜೆಯಿಡಲು ಈ ಹಬ್ಬವೊಂದು ಚಿತ್ತಾರ ಬರೆದ ಹೊಸ್ತಿಲು.
ಡಿಸೆಂಬರ್ ತಿಂಗಳು ಆರಂಭವಾದಾಗಲೇ ಕಚೇರಿಗಳಲ್ಲಿ ಕ್ರಿಸ್‌ಮಸ್ ಪಾರ್ಟಿಗಳು ಶುರು, ಶಾಲೆ, ಯುನಿವರ್ಸಿಟಿಗಳಲ್ಲಿ ವಾರಗಟ್ಟಲೇ ನಡೆಯುವ ನೇಟಿವಿಟಿ ಥೀಮ್, ಸ್ಯಾಂಟಾಕ್ಲಾಸ್ ಭೇಟಿ, ಹಾಡು ನಾಟಕಗಳು. ಲಂಡನ್ನಿನ ‘ಎಂಟ ವಂಡರ್‌ಲ್ಯಾಂಡ್ ಎನ್ನುವ ಜಾತ್ರೆಗೆ ಹೋಗದವರು ವಿರಳ. ಗಲ್ಲಿಗಲ್ಲಿಗಳಲ್ಲಿ, ಸಮುದಾಯ ಭವನಗಳಲ್ಲಿ ಪುಟಾಣಿಗಳನ್ನು ಎದುರುಗೊಳ್ಳುವ ಕ್ರಿಸ್ ಮಸ್ ತಾತ, ಅವನ ಸುತ್ತಲೂ ಥೇಟು ಉತ್ತರ ಧ್ರುವದಿಂದಲೇ ಬಂದಂತಿರುವ ಜಿಂಕೆಗಳ ಹಿಂಡು. ಕಣ್ಣು ಹಾಯಿಸಿದಷ್ಟೂ ಮುಗಿಯದ ಮಾಯಾಲೋಕ.
ವಿಶೇಷವೆಂದರೆ, ಈ ಹಬ್ಬ ಕುಟುಂಬಕ್ಕೆ ಮನೆಯವರಿಗೆ ಮಾತ್ರ ಸೀಮಿತವಲ್ಲ. ಕ್ರಿಸ್ ಮಸ್‌ನ ಸಮಯದಲ್ಲಿ ಢಾಳಾಗಿ ಕಾಣುವುದು ಎಲ್ಲರ ಒಳಗೊಳ್ಳುವಿಕೆ.
ಮನೆಯ ಸುತ್ತಲಿನ ಸಮುದಾಯ, ಶಾಲೆ ಕಾಲೇಜಿನಲ್ಲಿ ಧಾರಾಳ ಕಾಣಸಿಗುವ ‘ಕಮ್ಯುನಿಟಿ ಫೀಲಿಂಗ್’, ‘ಇನ್‌ಕ್ಯೂಸಿವ್ ನೆಸ್ಟ್ ನಿಂದಾಗಿ ಕ್ರಿಸ್‌ಮಸ್ಸೆಂಬುದು ಮೋಜು ಮಾತ್ರವಲ್ಲ, ಗಂಭೀರ ಸಾಮಾಜಿಕ ಸಂಗತಿಯೂ ಎಂಬುದು ಸಾಬೀತಾಗುತ್ತದೆ. ಬಾಕೀ ಸಮಯವನ್ನು ಎಲ್ಲರೊಂದಿಗೆ ಕಳೆದ ಬ್ರಿಟನ್ನಿಗರು ಡಿಸೆಂಬರ್ 25ರ ದಿನವನ್ನು ಅಂದರೆ ಕ್ರಿಸ್‌ಮಸ್ ದಿನವನ್ನು ಕಳೆಯುವುದು ಮಾತ್ರ ತಮ್ಮ ಕುಟುಂಬದೊಂದಿಗೆ.
ಮುತ್ತಾತ, ಅಜ್ಜಿ ಅಜ್ಜ, ಅಪ್ಪ ಅಮ್ಮ, ಅಣ್ಣ ತಂಗಿ, ಮಕ್ಕಳೆಲ್ಲ ಒಂದೆಡೆ ಸೇರಿ ಮೇಜಿನ ಸುತ್ತ ಕುಳಿತು ಮಧ್ಯಾಹ್ನ ರೋಸ್ಟೆಡ್ ಟರ್ಕಿ ಊಟವನ್ನು ಸವಿದು, ಒಂದಷ್ಟು ಬೋರ್ಡು ಗೇಮುಗಳನ್ನು ಆಡಿ, ಕ್ರಿಸ್‌ಮಸ್ ಮರದ ಬುಡದಲ್ಲಿ ಪೇರಿಸಿಟ್ಟಿದ್ದ ಉಡುಗೊರೆಗಳನ್ನು ತೆಗೆದು ಸಂಭ್ರಮಿಸಿದರೆ ಅಲ್ಲಿಗೆ ಹಬ್ಬ ಸಂಪನ್ನ.
poornimaubhat@gmail.com
ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…
ಮಂಡ್ಯ : ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿನೂತನವಾಗಿ “ಮಿಷನ್ 40 ಫಾರ್ 90 ಡೇಸ್” ಅಭಿಯಾನವನ್ನು…
ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ…
ಮುಂಬೈ : ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ವುಡ್‌ಗಳಲ್ಲಿಯೂ ಧುರಂಧರ್‌ದೆ ಹಾವಳಿ. ಈ ವರ್ಷದ ಅತಿ ಹೆಚ್ಚು ಕೆಲಕ್ಷನ್…
ಬೆಂಗಳೂರು : ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೈಡ್ರಾಮ ಆಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು…
ರಾಯಚೂರು: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.…