• ಕೀರ್ತಿ ಬೈಂದೂರು
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರೆಲ್ಲ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ Railway Pensioners Welfare Association’ Rogows ತೊಡಗಿಸಿಕೊಂಡು, ಪಿಂಚಣಿ ಪಡೆಯಲು ಪರದಾಡುವ ಜನರಿಗೆ ತಮ್ಮಿಂದಾದಷ್ಟು ಸಹಾಯ ಮಾಡಬೇಕೆಂದು ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಸೂರಿನ ಬಂಬೂ ಬಜಾರ್ ಪಕ್ಕದಲ್ಲಿ ಸಂಸ್ಥೆಯ ಕಚೇರಿಯಿದೆ. ಸರ್ಕಾರಿ ವೃತ್ತಿಗಳೇ ಹಾಗೆ, ಅವು ವೃತ್ತಿ ಭರವಸೆ ನೀಡುತ್ತವೆ. ಆದರೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವವರು ನಿವೃತ್ತಿಯ ಮುನ್ನ ತೀರಿಹೋದರೆ, ಅವರ ಹೆಂಡತಿ, ಆನಂತರ ಮದುವೆಯಾಗದ ಮಕ್ಕಳು, ದಿವ್ಯಾಂಗ ಮಕ್ಕಳು ಪಿಂಚಣಿಗೆ ಹಕ್ಕುದಾರರಾಗುತ್ತಾರೆ. ಪಿಂಚಣಿ ಪಡೆಯುವುದೇನು ಸಾಮಾನ್ಯ ಸಂಗತಿಯಲ್ಲ, ದಾಖಲಾತಿ ನೀಡಿದರಾಯಿತು, ವಿನಂತಿ ಪತ್ರ ಲಗತ್ತಿಸಿದರಾಯಿತು ಎನ್ನುವಷ್ಟು ಸುಲಭವಿಲ್ಲ. ರೈಲ್ವೆ ನಿಯಮಗಳ ಬಗ್ಗೆ ಅರಿವು ಹೊಂದಿರುವವರಿಗೆ ಪೆನ್ಗನ್ ಪಡೆಯುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ತಾವೂ ಪೆನ್ನನ್ ಪಡೆಯಬಹುದು ಎಂದು ಅನೇಕರಿಗೆ ತಿಳಿದೇ ಇರುವುದಿಲ್ಲ ಅಥವಾ ತಿಳಿಸಿರುವುದಿಲ್ಲ.
ಪಿಂಚಣಿ ಸಿಗುತ್ತದೆ ಎಂದು ಎಷ್ಟೋ ವರ್ಷ ಬಿಟ್ಟು, ಸಂಸ್ಥೆಗೆ ಸಹಾಯ ಕೇಳಿ ಬಂದಿರುವ ಫಲಾನುಭವಿಗಳು ಅನೇಕರಿದ್ದಾರೆ. ‘ವೃತ್ತಿಯಲ್ಲಿದ್ದರೆ ಮಾಹಿತಿ ಕಲೆ ಹಾಕುವುದು ಸುಲಭವಾಗುತ್ತಿತ್ತು. ಈಗಲೂ ಪಡೆಯಬಹುದು. ಆದರೆ, ತುಸು ತಡವಾಗುತ್ತದಷ್ಟೇ’ ಎನ್ನುತ್ತಾರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ಥಸಾರಥಿ ಅವರು.
ಅವಿದ್ಯಾವಂತೆ ಮಹಿಳೆಯೊಬ್ಬಳ ತಂದೆ ರೈಲ್ವೆ ಇಲಾಖೆಯಲ್ಲಿ ನಿವೃತ್ತಿ ಹೊಂದುವ ಮುನ್ನವೇ ತೀರಿಹೋಗಿದ್ದರು. ಆಕೆ ಗಂಡ ಮತ್ತು ತಾಯಿಯನ್ನೂ ಕಳೆದುಕೊಂಡಿದ್ದಳು. ಪಿಂಚಣಿಗಾಗಿ ಇಲಾಖೆಗಳಿಗೆ ಅಲೆಯುತ್ತಿರುವಾಗ, ಅನೇಕರು ಅವಮಾನಿಸಿದ್ದರು. ಹತ್ತು ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದ ಆಕೆ, ಸೋರುತ್ತಿರುವ ಮನೆಯಲ್ಲೇ ಬದುಕು ಕಟ್ಟಿಕೊಂಡಿದ್ದಳು. ಹೇಗೊ ವಿಳಾಸ ತಿಳಿದು, ಸಂಸ್ಥೆಗೆ ಬಂದಿದ್ದಳು. ಸಂಸ್ಥೆಯ ಅಧಿಕಾರಿಗಳೆಲ್ಲ ಸೇರಿ ಮಹಿಳೆಯ ಸಮಸ್ಯೆಯನ್ನು ಅರಿತರು. ಸಂಸ್ಥೆಯ ಸದಸ್ಯರು ಸೇರಿ ಆಕೆಯ ಸಮಸ್ಯೆ ಬಗೆಹರಿಸಲು ಎರಡು ತಿಂಗಳು ಬೇಕಾದವು. 19 ಲಕ್ಷ ರೂ.ಗಳಷ್ಟು ಬಾಕಿ ಹಣ ಕೊಡಿಸಿದರು. 15 ಸಾವಿರ ರೂ. ಗಳಷ್ಟು ಪಿಂಚಣಿಯ ಹಣ ಪ್ರತಿ ತಿಂಗಳು ಬರುವಂತೆ ನೋಡಿಕೊಂಡಿದ್ದಷ್ಟೇ ಅಲ್ಲ. ಹಣವನ್ನು ಜೋಪಾನವಾಗಿ ಖರ್ಚು ಮಾಡಬೇಕೆಂಬ ಎಚ್ಚರಿಕೆಯನ್ನೂ, ಕೆಲಸ ಮಾಡುತ್ತಿರು ಎಂದು ತಿಳಿವಳಿಕೆಯನ್ನು
ಹೇಳಿದರು.
ಪೈವೇಟ್ ಕಾನ್ವೆಂಟ್‌ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯದೂ ಇದೇ ಕತೆ. ತಾಯಿ ಸತ್ತು ಅದಾಗಲೇ ಹನ್ನೆರಡು ವರ್ಷಗಳು ಕಳೆದಿತ್ತು. ತಂದೆಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಯ ಬಗ್ಗೆ ಏನೂ ತಿಳಿದಿರಲಿಲ್ಲ.
ವಿಶೇಷತೆ ಎಂದರೆ ಅವರ ತಂದೆ ಆಂಗ್ಲೋ ಇಂಡಿಯನ್ ಆಗಿದ್ದರೆ, ತಾಯಿ ಸ್ಥಳೀಯ ಮಹಿಳೆಯಾಗಿದ್ದರು. ತಂದೆಯ ಹೆಸರೊಂದೇ ಇಟ್ಟುಕೊಂಡು ಸಂಸ್ಥೆಯ ಸದಸ್ಯರೆಲ್ಲ ಮಾಹಿತಿ ಹುಡುಕಲು ಆರಂಭಿಸಿದ್ದರು. ರೈಲ್ವೆ ಅಧಿಕಾರಿಗಳು ಅಷ್ಟು ಕೋಟಿ ಜನರ ನಡುವೆ ಆಕೆಯ ತಂದೆಯ ಹೆಸರನ್ನು ಹೇಗೆ ಹುಡುಕುವುದು ಎಂದಾಗ, ಸಂಸ್ಥೆಯ ಸದಸ್ಯರು ಆಕೆಯ ತಂದೆ ಆಂಗ್ಲೋ ಇಂಡಿಯನ್ ಮತ್ತವರ ಹೆಸರಿನ ವಿಶೇಷತೆ ತಿಳಿಸಿಕೊಟ್ಟರು. ಹದಿನೈದು ದಿನಗಳ ಸಮಯ ಕೇಳಿದ್ದ ಅಧಿಕಾರಿಗಳು ಮಾರನೆಯ ದಿನದ ಹೊತ್ತಿಗಾಗಲೇ ಪೂರ್ಣ ವಿವರಗಳನ್ನು ಇವರಿಗೆ ಕಳುಹಿಸಿಯಾಗಿತ್ತು. ಸಿಗಬೇಕಾದ 13 ಲಕ್ಷ ರೂ. ಬಾಕಿ ಹಣದೊಂದಿಗೆ ಆ ಮಹಿಳೆ 23 ಸಾವಿರ ರೂಪಾಯಿಗಳ ಪಿಂಚಣಿ ಪಡೆಯುತ್ತಾ, ಆರಾಮವಾಗಿದ್ದಾರೆ.
“ನಿಮಗೆ ಪಾಸ್‌ಬುಕ್‌ನಲ್ಲಿ ಹಣ ಬರುವ ತನಕ ಸಹಾಯ ಮಾಡುತ್ತೇವೆ. ಇದಕ್ಕೆ ಬದಲಿಯಾಗಿ ಹಣ ಕೊಡುವುದು ಇಲ್ಲಾ, ಸಿಹಿ ನೀಡಿ ಸಂಭ್ರಮಿಸುವಂತಿಲ್ಲ ಎಂಬ ಷರತ್ತನ್ನು ಮೊದಲಿಗೇ ತಿಳಿಸಿಬಿಡುತ್ತಾರೆ. ಕೆಲವರು ತಮ್ಮ ಬದುಕಿಗೆ ಆರ್ಥಿಕ ನೆರವು ಸಿಕ್ಕ ಖುಷಿಯಲ್ಲಿ ಹಣವನ್ನು ತೆಗೆದುಕೊಳ್ಳ ಲೇಬೇಕು ಎಂದು ಒತ್ತಾಯಿಸಿದಾಗ, ಸಂಸ್ಥೆಯ ಹೆಸರಿನಲ್ಲಿ ರಶೀದಿಯನ್ನು ನೀಡಿಯೇ ಹಣ ಪಡೆಯುತ್ತಾರೆ. ಈ ತತ್ವಕ್ಕೆ ಬದ್ಧರಾಗಿ ನಿವೃತ್ತ ರೈಲ್ವೆ ಅಧಿಕಾರಿಗಳೆಲ್ಲ ಕೈ ಜೋಡಿಸುತ್ತಿದ್ದಾರೆ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಸಾಲುಗಳನ್ನು ಜೀವನ ಪಾಠವಾಗಿಸಿಕೊಂಡವರ ಕಥೆಯಿದು.
ಮೈಸೂರು : ಸಾಂಸ್ಕೃತಿಕ ನಗರಿಯ ಅರಮನೆಗೆ ಡಿ.20ರಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳ…
ಬೆಳಗಾವಿ : ಎರಡುವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ…
ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು…
ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…
ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…