ಅಂಕಣಗಳು

ಜನಮಾನಸದಲ್ಲಿ ಬದುಕಿರುವ ಸಂವೇದನಾಶೀಲ ರಾಜಕಾರಣಿ

ಇಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹುಟ್ಟುಹಬ್ಬ 

ಜಾಹೀರಾತು ನಿರ್ವಹಣಾ ಶಾಸ್ತ್ರದಲ್ಲಿ ಒಂದು ಮಾತಿದೆ “the name itself sells  ಅಂತಾ. ಇದು ವಿ. ಶ್ರೀನಿವಾಸ ಪ್ರಸಾದ್‌ರವರ ವಿಚಾರದಲ್ಲಿ ಹೆಚ್ಚು ಸೂಕ್ತವಾಗಿದೆ. ಏಕೆಂದರೆ, ಅವರ ಹೆಸರೇ ಒಂದು ಸಂವೇದನೆಯಿಂದ ಕೂಡಿದೆ. ನೇರ ನಡೆ-ನುಡಿ, ಸರಳತೆ, ಉತ್ತಮ ಚಾರಿತ್ರ್ಯ ಎಡಪಂಥೀಯ ವಿಚಾರಧಾರೆ, ಬೌದ್ಧಿಕ ವಲಯದೊಂದಿಗೆ ಆಪ್ತತೆ, ಬುದ್ಧ-ಬಸವ, ಅಂಬೇಡ್ಕರ್‌ರವರ ಚಿಂತನೆಗಳನ್ನು ಅಳವಡಿಸುವಿಕೆ ಜೊತೆಗೆ ಸ್ವಯಂ ಬುದ್ಧರ ಉಪಾಸಕರಾಗಿ ಮೇಳೈಸಿಕೊಂಡು ಅದರಂತೆ ಬದುಕಿದ ಬಹುಶಃ ಏಕೈಕ ವೃತ್ತಿಪರ ರಾಜಕಾರಣಿ ((professional politician). ೧೯೪೭ರ ಆಗಸ್ಟ್ ೬ ರಂದು ಎಂ.ವೆಂಕಟಯ್ಯ ಮತ್ತು ಡಿ.ವಿ.ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ ಪ್ರಸಾದ್ ಅವರು ೫೦ ವರ್ಷಗಳು ಸುದೀರ್ಘ ರಾಜಕಾರಣದಲ್ಲಿದ್ದವರು. ೨೦೨೪ರ ಏ.೨೯ರಂದು ನಿಧನ ಹೊಂದಿದ ವಿ.ಶ್ರೀನಿವಾಸ ಪ್ರಸಾದ್ ಈಗ ನೆನಪು ಮಾತ್ರವಾದರೂ, ಸಾವಿನ ನಂತರವೂ ಜನಮಾನಸದಲ್ಲಿ ಬದುಕಿರುವ ಸಂವೇದನಾಶೀಲ ರಾಜಕಾರಣಿಯೂ ಆಗಿದ್ದಾರೆ.

ಶ್ರೀನಿವಾಸಪ್ರಸಾದ್ ರಾಜಕಾರಣಿಯಾಗಬೇಕೆಂದು ಬಯಸಿದ್ದವರಲ್ಲ. ಶಾರದಾವಿಲಾಸ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಅಭ್ಯಸಿಸುತ್ತಿರುವಾಗ ಹಲವಾರು ಮಂದಿ ಆರ್‌ಎಸ್‌ಎಸ್‌ನ ಕಾರ್ಯಕರ್ತರಲ್ಲಿ ಇವರೂ ಕೂಡ ಒಬ್ಬರು. ೧೯೭೩ ರಲ್ಲಿ ಆಗ ಕರ್ನಾಟಕದ ತುಂಬಾ ‘ಬೂಸಾ ಚಳವಳಿ’ ಆರಂಭವಾಗಿತ್ತು. ಆಗ ಡಿ.ದೇವರಾಜ ಅರಸು ಅವರ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದ ಬಿ.ಬಸವಲಿಂಗಪ್ಪ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಕನ್ನಡ ಸಾಹಿತ್ಯ ಬಹುತೇಕ ಬೂಸಾ’ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಅವರನ್ನು ಮಂತ್ರಿ ಪದವಿಯಿಂದ ವಜಾ ಮಾಡಬೇಕೆಂಬ ಕೂಗು ರಾಜ್ಯದಾದ್ಯಂತ ಕನ್ನಡ ಪರ ಸಂಘಟನೆಗಳಿಂದ ಅಭಿಯಾನ, ಚಳವಳಿ ಆರಂಭವಾಗಿತ್ತು.

ಆ ಸಮಯದಲ್ಲಿ ಬಿ.ಬಸವಲಿಂಗಪ್ಪನವರ ಪರವಾಗಿ ಚಳವಳಿಯನ್ನು ಮೈಸೂರಿನಿಂದ ವಿಶೇಷವಾಗಿ ಅಶೋಕಪುರಂನಿಂದ ಆರಂಭಿಸಿದವರೇ ಶ್ರೀನಿವಾಸ ಪ್ರಸಾದ್. ಈ ಚಳವಳಿಯಲ್ಲಿ ಬಸವಲಿಂಗಪ್ಪನವರ ಪರ ಶ್ರೀನಿವಾಸ ಪ್ರಸಾದ್‌ರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಹಿರಿಯರು, ಹೆಂಗಸರು ಅಶೋಕಪುರಂನಿಂದ ಪ್ರತಿಭಟನೆ ಆರಂಭಿಸಿದರು. ಅಂದಿನ ಮೈಸೂರು ಜಿಲ್ಲೆ ಎಸ್ಪಿಯಾಗಿದ್ದ ದಿನಕರ್ ಇದೇ ಶ್ರೀನಿವಾಸ ಪ್ರಸಾದ್‌ರವರನ್ನು ಲಾಠಿಯಿಂದ ಥಳಿಸಿ, ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಕರೆದೊಯ್ದು ಲಾಕಪ್‌ನಲ್ಲಿಟ್ಟಿದ್ದರು. ಅಂದು ಶ್ರೀನಿವಾಸ ಪ್ರಸಾದ್ ಅಶೋಕಪುರಂ ಜನತೆಗೆ ಉದಯೋನ್ಮುಖ ನಾಯಕರಾಗಿ ಗೋಚರಿಸಿದರು.

೧೯೭೪ರ ಉಪ ಚುನಾವಣೆಯಿಂದ ಕಾಂಗ್ರೆಸ್‌ಗೆ ಪಾಠ: ಅದೇ ಸಂದರ್ಭದಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ಎಂಬವರು ನಿಧನರಾಗಿ ಈ ಕ್ಷೇತ್ರಕ್ಕೆ ೧೯೭೪, ಸೆಪ್ಟೆಂಬರ್ ೧೭ರಂದು ಉಪಚುನಾವಣೆ ಘೋಷಣೆಯಾಯಿತು. ಬಿ. ಬಸವಲಿಂಗಪ್ಪನವರನ್ನು ಸಂಪುಟದಿಂದ ಕೈ ಬಿಟ್ಟ ದೇವರಾಜ ಅರಸು ಮತ್ತು ಕಾಂಗ್ರೆಸ್‌ಗೆ ಪಾಠ ಕಲಿಸಲು ಸೂಕ್ತ ಸಮಯವೆಂದು ಭಾವಿಸಿದ ಅಶೋಕಪುರಂನ ಜನತೆ ಇದೇ ಶ್ರೀನಿವಾಸಪ್ರಸಾದ್‌ರವರನ್ನು ‘ಎಐಡಿಎಂಕೆ’ ಪಕ್ಷದಿಂದ ‘ಒಂಟೆ’ ಗುರುತಿನಡಿಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ಪರ್ಧೆಗಿಳಿಸಿದರು. ಆಗ ಪ್ರಸಾದ್ ಅವರಿಗೆ ೨೮ ರ ಹರಯ. ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್‌ಗೆ ಶಾಕ್ ಕಾದಿತ್ತು. ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿದ್ದರು. ಮತ್ತು ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತಳಲ್ಪಟ್ಟಿತ್ತು.

ಒಟ್ಟು ಐದು ದಶಕಗಳ ಸುದೀರ್ಘ ರಾಜಕಾರಣದ ಪಯಣದ ನಡುವೆ ಪ್ರಸಾದ್ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ೧೯೮೦, ೧೯೮೪ ,೧೯೮೯, ೧೯೯೧ರಲ್ಲಿ ಗೆಲುವು ಸಾಽಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾಗ ತಮ್ಮ ಪ್ರೀತಿ ಪಾತ್ರರಾದ ಇವರನ್ನು ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ೧೯೯೬ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತರೂ ಕೂಡ ತನಗೆ ಟಿಕೆಟ್ ನೀಡದೆ ವಂಚಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದು ಇವರ ಜನಪ್ರಿಯತೆಗೆ ಈ ಚುನಾವಣೆ ಸಾಕ್ಷಿ ಆಯಿತು.

೧೯೯೯ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಸ್ಥಿತ್ಯಂತರದ ಕಾರಣಗಳಿಂದಾಗಿ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದರ ಮೂಲಕ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದು ಇವರ ಹೆಗ್ಗಳಿಕೆ. ತದನಂತರ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಿ ೨೦೦೮ ಮತ್ತು ೨೦೧೩ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದರ ಮೂಲಕ ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾದರು. ತಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕಾರಣಕ್ಕೆ ಆಕ್ರೋಶಗೊಂಡು ಯಾರೂ ಊಹಿಸಿದ ರೀತಿಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದದ್ದು ಮಾತ್ರ ಅವರ ರಾಜಕೀಯ ಜೀವನದ ಮತ್ತೊಂದು ಮಜಲು ಹಾಗೂ ನಂಜನಗೂಡು ವಿಧಾನಸಭೆ ಕ್ಷೇತ್ರಕ್ಕೆ ನಡೆದ  ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸೋತರು.

ಆದರೆ ೨೦೧೯ ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿಯೂ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆಂಬುದನ್ನು ಸಾಬೀತುಗೊಳಿಸಿದರು.

ವೈಚಾರಿಕತೆಯ ಪ್ರಖರ ವ್ಯಕ್ತಿತ್ವ:  ಪ್ರಸಾದ್ ವೃತ್ತಿಪರ ರಾಜಕಾರಣದ ಮೆರುಗೆಂದರೆ ಅವರ ಪ್ರಖರ ವೈಚಾರಿಕೆ ಮತ್ತು ಚಿಕಿತ್ಸಕ ಮನೋಭಾವ. ಅಂಬೇಡ್ಕರ್, ಬುದ್ಧ, ಬಸವಣ್ಣನವರ ಅನುಯಾಯಿಯಾದ ಇವರು ಸಮಾಜದ ಮೌಢ್ಯಗಳನ್ನು ವಿರೋಧಿಸುತ್ತಾ, ಬೆಳೆದರು ಮತ್ತು ಜನರಿಗೆ ಅದನ್ನೇ ಹೇಳುತ್ತಾ ಬಂದರು. ತಮ್ಮ ಜೀವಿತಾವಧಿಯಲ್ಲಿಯೇ ‘ಬುದ್ಧನೆಡೆಗೆ ಮರಳಿ ಮನೆಗೆ’ ಎಂಬ ಸಮಾವೇಶ ಆಯೋಜಿಸುವುದರ ಜೊತೆಗೆ, ಸ್ವಯಂ ತಾವೇ ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂತಲೂ ಹಾಗೂ ಜಾತಿ ಕಾಲಂನಲ್ಲಿ ‘ಪರಿಶಿಷ್ಟ ಜಾತಿ (ಆದಿಕರ್ನಾಟಕ)’ ಎಂದೂ ಬರೆಸಿ ದಾಖಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಏಕೈಕ ದಲಿತ ರಾಜಕಾರಣಿ.

ಪಕ್ಷಾಂತರಿಯಾದರೂ ತತ್ವಾಂತರಿಯಲ್ಲ:

‘ತಾನು ಪಕ್ಷಾಂತರಿಯದರೂ ತತ್ವಾಂತರಿಯಲ್ಲ’ ಮತ್ತು Politics is a series of compromises ಎಂಬ ಈ ಎರಡು ಘೋಷ ವಾಕ್ಯಗಳನ್ನು ಶ್ರೀನಿವಾಸ ಪ್ರಸಾದ್ ಪದೇ ಪದೇ ಹೇಳುತ್ತಿದ್ದರು. ಪ್ರಸಾದ್ ಆಗಿಂದಾಗ್ಗೆ ಪಕ್ಷಗಳನ್ನು ಬದಲಿಸಿದರೂ ಕೂಡ ತಮ್ಮ ಸ್ವಾಭಿಮಾನಕ್ಕೆ, ನಂಬಿದ ತತ್ವಗಳಿಗೆ ಧಕ್ಕೆಯಾದರೆ ಯಾವ ಮುಲಾಜೂ ಇಲ್ಲದೆ ತನ್ನ ಅಭಿಪ್ರಾಯವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು.

ಬೌದ್ಧಿಕ ವಲಯದ ಆಪ್ತತೆ:  ಪ್ರಸಾದ್ ಬೇರೆ ದಲಿತ ರಾಜಕಾರಣಿಗಳಂತೆ ಸುಮ್ಮನೆ ಕೂರಲಿಲ್ಲ. ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಅಧ್ಯಯನ ಮಾಡಿದರು. ಬುದ್ಧ, ಬಸವ, ಕುವೆಂಪು, ದಾಸರ ಸಾಹಿತ್ಯಗಳನ್ನು ಸಹಾ ಅಧ್ಯಯನ ಮಾಡುತ್ತಾ, ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದು ವಿಶೇಷ.

ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ಧವೇ ಬಂಡೇಳುತ್ತಿದ್ದ ಪ್ರಸಾದ್: ಪ್ರಸಾದ್ ಅವರು ಏಳು-ಬೀಳಿನ ರಾಜಕೀಯಗಳನ್ನು ಕಂಡಿದ್ದಾರೆ. ೧೯೯೬ ರ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಕಾಂಗ್ರೆಸ್‌ನಿಂದ ‘ಬಿ’ ಫಾರಂ ದೊರೆಯಲಿಲ್ಲ. ಬದನವಾಳು ದುರಂತದ ಪ್ರಕರಣದಲ್ಲಿ ಈ ಭಾಗದ ಬಲಾಢ್ಯ ರಾಜಕಾರಣಿ ಮತ್ತು ಹಿರಿಯರಾದ ಎಂ. ರಾಜಶೇಖರ ಮೂರ್ತಿಯವರೊಡನೆ ಮತ್ತು ಬೆಂಕಿ ಮಹದೇವುರವರೊಡನೆ ದಿನನಿತ್ಯದ ವಿರಸ, ಮತ್ತಿತರ ಕಾರಣಗಳಿಂದಾಗಿ ‘ಬಿ’ ಫಾರಂ ಕೈತಪ್ಪಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಪ್ರಸಾದ್ ಪಕ್ಷೇತರರಾಗಿ ಬಂಡಾಯವಾಗಿ ಸ್ಪಽಸಿ ೧,೬೦,೦೦೦ ಮತಗಳನ್ನು ಪಡೆದು ಕಾಂಗ್ರೆಸ್ ಅಽಕೃತ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದರು.

-ಸಿ.ಹರಕುಮಾರ್, ಹವ್ಯಾಸಿ ಬರಹಗಾರ

 

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

11 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

40 mins ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

1 hour ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

1 hour ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

2 hours ago