• ಪ್ರೊ.ಎ.ಟಿ.ಸದೆಬೋಸ್
ಇಂದು ಕ್ರಿಸ್ತನ ಹುಟ್ಟು ಹಬ್ಬ. ಜಗತ್ತಿನ ಅತ್ಯಂತ ದೊಡ್ಡ ಹಬ್ಬ. ಇನ್ನು ಸರಿಯಾಗಿ ಒಂದು ವಾರಕ್ಕೆ ಹೊಸ ವರ್ಷ ಬರಲಿದೆ. ಕ್ರಿಸ್ತ ಜನಿಸಿದಾಗ ನಕ್ಷತ್ರವೊಂದು ನಮಗೆ ದಾರಿ ತೋರಿದರೆ, ಇಂದು ಕ್ರೈಸ್ತರ ಮನೆ ಮನೆಗಳಲ್ಲಿ ನಕ್ಷತ್ರವನ್ನು ಬೆಳಗುತ್ತಾ ಕ್ರಿಸ್ತನ ಜನನದ ನೆನಪನ್ನು ತರಲು ಗೋದಲಿಯ ಸೃಷ್ಟಿ ಸಾಂತಕ್ಲಾಸನ ಆಗಮನ ಇವೆಲ್ಲ ನಡೆಯುತ್ತದೆ. ಕ್ರಿಸ್‌ಮಸ್ ವೃಕ್ಷವನ್ನೂ ನಿಲ್ಲಿಸುತ್ತಾರೆ.
ರೋಮನ್ ದೊರೆ ಸೀಸ ಅಗಸ್ಟಸ್ ಕಾಲದಲ್ಲಿ ಎಲ್ಲ ಕಡೆ ಜನಗಣತಿಯನ್ನು ನಡೆಸಿದರು. ಬೆಥ್ಲೆಹೆಮ್‌ನ ವಾಸಕ್ಕೆ ಮನೆ ಇಲ್ಲದ ಬಡಕುಟುಂಬವೊಂದರಲ್ಲಿ ಯೇಸು ಗೋದಲಿ ಯಲ್ಲಿ ಜನಿಸಿದರು. ರಾತ್ರಿಯ ವೇಳೆ ಕುರಿ ಕಾಯುತ್ತಿದ್ದ ಕುರುಬರಿಗೆ ದೇವದೂತರು ಸಂದೇಶ ನೀಡಿ, ‘ಮಹೋನ್ನ ತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನುಜರಿಗೆ ಶಾಂತಿ ಎಂದು ಸಾರಿದರು. ಇದೇ ಮೊದಲ ಕ್ಯಾರಲ್ ಎಂದು ಗುರುತಿಸಲಾಗುತ್ತದೆ. ಅಂದಿನ ಸಾಮಾಜಿಕ
ಶ್ರೇಣಿಯ ಕೆಳಗಿನ ಮೆಟ್ಟಿಲಲ್ಲಿದ್ದ ಕುರುಬರಿಗೆ ದೇವ ದೂತರು ಈ ಸಂದೇಶ ನೀಡಿದರೂ. ಶಕ್ತಿಶಾಲಿ ಅರಸರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.
ಕ್ರಿಸ್‌ಮಸ್ ಆಚರಣೆಯು ಡಿಸೆಂಬರ್ ತಿಂಗಳ ಆರಂಭದಲ್ಲಿ ಕ್ಯಾರಲ್ ಗೀತೆಗಳ ಇಂಪಾದ ಗಾಯನದಿಂದ ಆರಂಭವಾಗುತ್ತದೆ. ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಆರಂಭವನ್ನು ಸೂಚಿಸುವಂತೆ, ಕಾರ್ಮೆಲ್ ಕ್ಯಾಥೋಲಿಕ್ ಸಂಸ್ಥೆಯು ಕ್ಯಾರಲ್ ಗೀತೆಗಳ ಬೃಹತ್ ಗಾಯನ ಕಾರ್ಯ ಕ್ರಮವನ್ನು ಡಿಸೆಂಬರ್ ತಿಂಗಳ ಎರಡನೇ ಭಾನುವಾರ ಆಯೋಜಿಸಿತ್ತು. ಸಂಗೀತಕ್ಕೆ ಎಲ್ಲರನ್ನೂ ಬೆಸೆಯುವ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸುವಂತೆ ಕಾರ್ಮೆಲ್ ಕ್ಯಾರಲ್ ಗೀತೆಗಳ ಗಾಯನವು ಸಾಂಸ್ಕೃತಿಕ ನಗರಿಯ ಒಂದು ಅವಿಭಾಜ್ಯ ಘಟಕ ಎಂಬಂತೆ ಆಗಿದೆ.
ಕ್ಯಾರಲ್ ಗೀತೆಗಳ ಸ್ಪರ್ಧೆಯು ನರ್ಸರಿ ಮಕ್ಕಳಿಂದ ವೃತ್ತಿ ನಿರತ ಗಾಯಕರವರೆಗೂ ಸುಮಾರು 12 ವರ್ಗಗಳಲ್ಲಿ ನಡೆಯುತ್ತದೆ. ಈ ಸ್ಪರ್ಧೆಯು ವಿವಿಧ ವರ್ಗಗಳ ಜನರನ್ನು ಒಂದು ವೇದಿಕೆಗೆ ತರುವುದೇ ವಿಶೇಷವಾಗಿದೆ.
ಈ ವರ್ಷ ನಡೆದ 31ನೇ ಕ್ರಿಸ್‌ಮಸ್ ಕ್ಯಾರಲ್ ಗಾಯನದಲ್ಲಿ 103 ತಂಡಗಳು ಹಾಗೂ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಗಾಯಕರು ಒಂದೇ ದಿನ ವೇದಿಕೆಯನ್ನೇರಿದರು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ದಿನಏಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿನ ಸಂಕೀರ್ಣವಾದ ಒತ್ತಡದ ಸ್ಪರ್ಧಾಯುಗದಲ್ಲಿ, ಕೈ ಕೈ ಹಿಡಿದು ಒಂದೇ ಸ್ವರವಾಗಿ, ಗೀತೆಯಾಗಿ ಹಾಡುವಾಗ ಅಲ್ಲಿ ಜಾತಿ, ಮತ, ಧರ್ಮ, ಭಾವ ಮೀರಿದ ಸೌಹಾರ್ದ ವಾತಾವರಣವು ಏರ್ಪಡುತ್ತದೆ ಎಂಬುದು ಅಲ್ಲಿ ಸತ್ಯವಾಗಿತ್ತು.
ಕ್ರಿಸ್‌ಮಸ್ ಕ್ಯಾರಲ್ ಗೀತೆಗಳ ಸ್ಪರ್ಧೆಯನ್ನು ಸಂಘವು ತುಂಬಾ ವ್ಯವಸ್ಥಿತವಾಗಿ ಏರ್ಪಡಿಸಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಸ್ಪರ್ಧಿಗಳು ನವೆಂಬರ್‌ನಿಂದಲೇ ತಯಾರಿ ನಡೆಸಿದ್ದರು. ಅಂದವಾದ ವೇಷ ಭೂಷಣಗಳು, ಸಾಂತಕ್ಲಾಸ್, ಮಾತೇ ಮೇರಿ, ಸಂತ ಜೋಸೆಫ್ ಹಾಗೂ ಬಾಲ ಯೇಸುವಿನ ಅನುಕರಣೆಗಳನ್ನು ಮಾಡುತ್ತಾ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೈಸೂರು ನಗರ ಮತ್ತು ಆಸುಪಾಸಿನ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಯನಶೀಲ ಸಹೋದರರು, ಭಗಿನಿಯರು ವಿವಿಧ ಕ್ರೈಸ್ತ ಪಂಗಡಗಳು ಭಾಗವಹಿಸಿದ್ದವು.
1992ರಲ್ಲಿ ಮೊತ್ತ ಮೊದಲ ಬಾರಿಗೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕಾರ್ಮೆಲ್ ಕ್ಯಾರಲ್ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂದು ಮೂವತ್ತು ತಂಡಗಳಿಂದ ಆರಂಭವಾದ ಈ ಕಾರ್ಯಕ್ರಮವು ಇಂದು ದಿನವಿಡೀ ಬಿಡುವಿಲ್ಲದಂತೆ ನಡೆಯುತ್ತದೆ. ಕ್ರಿಸ್‌ಮಸ್ ಆಚರಣೆಯನ್ನು ಮೈಸೂರಿಗೆ ಸಾರುವ ಈ ಸ್ಪರ್ಧೆಗಳಲ್ಲಿ ಕ್ರೈಸ್ತರ ವಿವಿಧ ಪಂಗಡಗಳಾದ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಪೆಂಟಕೊಸ್ಟ್ ಇತ್ಯಾದಿ ಎಲ್ಲರೂ ಸಂತೋಷ, ಸಡಗರದಿಂದ ಪಾಲ್ಗೊಳ್ಳುತ್ತಾರೆ.
ಕನ್ನಡ, ಇಂಗ್ಲಿಷ್ ಅಲ್ಲದೆ ಭಾರತೀಯ ಎಲ್ಲ ಭಾಷೆಗಳಲ್ಲಿಯೂ ಹಾಡಬಹುದು. ಕೊನೆಗೆ ಬಹುಮಾನಿತರು, ಪಾಲ್ಗೊಂಡವರು ಸಿಹಿಯನ್ನು ಹಂಚಿ ಹೊಸ ವರ್ಷವನ್ನು ಎದುರುಗೊಳ್ಳಲು ಮುನ್ನಡೆಯುತ್ತಾರೆ.
sadeboset@gmail.com
ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…
ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…
ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…
ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್…
ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…
ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…