ನಾ.ದಿವಾಕರ
ತಂತ್ರಜ್ಞಾನದ ಆವಿಷ್ಕಾರಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಡಿಜಿಟಲ್ ವಂಚಕ ಜಾಲಗಳು
ಕೋವಿಡ್ ೧೯ ವಿಶ್ವದಾದ್ಯಂತ ಜನರ ಬದುಕನ್ನು ಮೂರಾಬಟ್ಟೆ ಮಾಡಿದ ಸಂದರ್ಭದಲ್ಲೇ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳ ಫಲವಾಗಿ ಜಾಗತಿಕ ಆರ್ಥಿಕತೆಯಲ್ಲಿ ನೆಲೆ ಕಂಡುಕೊಂಡ ಡಿಜಿಟಲ್ ಹಣಕಾಸು ವಹಿವಾಟುಗಳು ಈಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಳ್ಳುವ ರೀತಿಯಲ್ಲಿ ಸರ್ವ ವ್ಯಾಪಿಯಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಾರ್ವತ್ರೀಕರಿಸುವಲ್ಲಿ ಭಾರತದ ಕೊಡುಗೆ ಮಹತ್ತರವಾಗಿದ್ದು, ನಮ್ಮ ದೇಶದ ಯುಪಿಐ ಮಾದರಿ ವಿಶ್ವಮನ್ನಣೆ ಗಳಿಸಿದೆ. ಇದಕ್ಕೆ ಪೂರಕವಾಗಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಡಿಜಿಟಲ್ ಸೌಲಭ್ಯಗಳನ್ನು ಎಲ್ಲ ವ್ಯವಹಾರಗಳಿಗೂ ವಿಸ್ತರಿಸಲಾಗಿದ್ದು, ಸಾರ್ವಜನಿಕರು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಕುಳಿತಲ್ಲೇ ನಿರ್ವಹಿಸುವ ಅನುಕೂಲಗಳನ್ನು ಕಲ್ಪಿಸಿದೆ.
ಅಂತರ್ಜಾಲ ಬ್ಯಾಂಕಿಂಗ್, ಗೂಗಲ್ ಪೇ, ಫೋನ್ ಪೇ ಮೊದಲಾದ ಸೌಲಭ್ಯಗಳೊಂದಿಗೆ ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ತಮ್ಮದೇ ಆಪ್‌ಗಳನ್ನು ಸಿದ್ಧಪಡಿಸಿ ಎಲ್ಲ ವಹಿವಾಟುಗಳನ್ನೂ ಮನೆಯಿಂದಲೇ ಮೊಬೈಲ್ ಫೋನ್ ಮೂಲಕವೇ ನಡೆಸಲು ಅನುಕೂಲ ಮಾಡಿಕೊಟ್ಟಿವೆ. ಆದರೆ ತಾವು ಬಳಸುತ್ತಿರುವ ತಂತ್ರಜ್ಞಾನದ ಆಪ್‌ಗಳು ಮತ್ತು ಡಿಜಿಟಲ್ ಪಾವತಿಯ ಮಾದರಿಗಳು ಯಾವ ರೀತಿಯ ಅಪಾಯಗಳನ್ನು ತಂದೊಡ್ಡಬಹುದು? ಮತ್ತು ಅವುಗಳಿಂದ ಪಾರಾಗುವ ಬಗೆ ಹೇಗೆ? ಅವುಗಳನ್ನು ತಡೆಗಟ್ಟುವ ರಕ್ಷಣಾ ವ್ಯವಸ್ಥೆಗಳೇನು? ಎಂಬ ಅರಿವು ಸಾಮಾನ್ಯ ಜನರಲ್ಲಿ ಇಲ್ಲದಿರುವುದು, ಹಲವಾರು ರೀತಿಯ ಡಿಜಿಟಲ್ ಅಥವಾ ಆನ್ ಲೈನ್ ವಂಚನೆಗಳಿಗೆ ಕಾರಣವಾಗಿದೆ. ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿರುವ ಹಾಗೆಲ್ಲಾ ಡಿಜಿಟಲ್ ಸಾಕ್ಷರತೆಯೂ ಬೆಳೆಯಬೇಕಾದದ್ದು ವರ್ತಮಾನದ ತುರ್ತು.
ಡಿಜಿಟಲ್ ಬಂಧನ- ಹೊಸ ವಂಚನೆಯ ಮಾದರಿ: ಇತ್ತೀಚೆಗೆ ವರದಿಯಾಗುತ್ತಿರುವ ಡಿಜಿಟಲ್ ಬಂಧನ ಎಂಬ ಹೊಸ ವಂಚನೆಯ ವಿಧಾನ ನೂರಾರು ಜನರನ್ನು ಕಂಗೆಡಿಸಿದೆ. ಕರ್ನಾಟಕದಲ್ಲೇ ಈ ವರ್ಷ ನಡೆದಿರುವ ೬೪೧ ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಜನರು ೧೦೯.೪೧ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದರ ಪೈಕಿ ಕೇವಲ ೯.೪೫ ಕೋಟಿ ರೂ.ಗಳನ್ನು ಮರುವಸೂಲಿ ಮಾಡಲಾಗಿದ್ದು, ಇನ್ನೂ ೧೦೦ ಕೋಟಿ ರೂ.ಗಳನ್ನು ಶೋಧಿಸಬೇಕಿದ. ೪೮೦ ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿದ್ದು, ಮೈಸೂರಿನಲ್ಲಿ ೨೪ ಮತ್ತು ಮಂಗಳೂರಿನಲ್ಲಿ ೨೧ ಪ್ರಕರಣಗಳು ವರದಿಯಾಗಿವೆ. ಈವರೆಗೂ ೨೭ ಜನರನ್ನು ಬಂಧಿಸಲಾಗಿದೆ.
೨೦೨೪ರಲ್ಲಿ ಇಲ್ಲಿಯವರೆಗೆ ದೇಶದಾದ್ಯಂತ ವಿವಿಧ ರೀತಿಯ ಸೈಬರ್ ವಂಚನೆಗಳಿಗೆ ಸಿಲುಕಿ ಜನರು ೧೯,೮೮೮.೪೨ ಕೋಟಿ ರೂ.ಗಳನ್ನು ಕಳೆದು ಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧಿನದಲ್ಲಿರುವ ಸರ್ಕಾರಿ ಸಂಸ್ಥೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಈ ವಂಚಕ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ಈ ಸಂಸ್ಥೆಯ ವರದಿಯ ಅನುಸಾರ ದೇಶದಲ್ಲಿ ಸಂಭವಿಸಿರುವ ೯೨,೩೨೩ ಡಿಜಿಟಲ್ ಬಂಧನದ ಪ್ರಕರಣಗಳಲ್ಲಿ ಸಾಮಾನ್ಯ ಜನರು ೨೧೪೦.೯೯ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದಲ್ಲೇ ದೇಶಾದ್ಯಂತ ೪೨ ಸಾವಿರ, ಕರ್ನಾಟಕದಲ್ಲಿ ೧೧ ಸಾವಿರ ವಂಚನೆ ಪ್ರಕರಣಗಳು ಸಂಭವಿಸಿವೆ. ಡಿಜಿಟಲ್ ಅರಿವಿನ ಕೊರತೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಲು ಉಂಟಾಗುವ ಮುಜುಗರದ ಕಾರಣ ಅನೇಕರು ವರದಿ ಮಾಡದಿರುವ ಪ್ರಸಂಗಗಳೂ ಇವೆ ಎಂದು ಐಸಿಸಿಸಿಸಿ ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಡಿಜಿಟಲ್ ಬಂಧನ ಹಗರಣಗಳು ಕೊರಿಯರ್ ವಂಚನೆಗಳ ರೂಪದಲ್ಲಿ ೨೦೨೩ರಲ್ಲಿ ಪ್ರಾರಂಭವಾದವು. ಉದ್ದೇಶಿತ ವ್ಯಕ್ತಿಗೆ ಕರೆ ಮಾಡಿ fedex ನಂತಹ ಕೊರಿಯರ್ ಸೇವೆಯ ಕಾರ್ಯನಿರ್ವಾಹಕನಂತೆ ನಟಿಸುವ ವಂಚಕರು ಅವರ ಹೆಸರಿನಲ್ಲಿರುವ ಪ್ಯಾಕೇಜ್ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿ ಅವರನ್ನು ನಕಲಿ ಕಸ್ಟಮ್ಸ್ ಅಥವಾ ಸೈಬರ್ ಸೆಲ್ ಅಽಕಾರಿಗೆ ಸಂಪರ್ಕಿಸುತ್ತಾರೆ. ವ್ಯಕ್ತಿಯ ಗುರುತು ಪತ್ತೆಹಚ್ಚಿದ ನಂತರ ಹಿಂತಿರುಗಿಸಲಾಗುವುದು ಎಂದು ನಂಬಿಸಿ ನಿರ್ದಿಷ್ಟ ಮೊತ್ತವನ್ನು ಆರ್‌ಬಿಐ ನಿಗದಿಪಡಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೋರಲಾಗುತ್ತದೆ. ಬಂಧನದಿಂದ ಪಾರಾಗಲು ಇದು ಅವಶ್ಯ ಎಂದು ನಂಬಿಸಲಾಗುತ್ತದೆ. ಹೀಗೆ ಕೊರಿಯರ್‌ಗಳ ಮೂಲಕ ಆರಂಭವಾದ ವಂಚಕ ಜಾಲ ಈಗ ಡಿಜಿಟಲ್ ಬಂಧನದ ರೂಪ ಪಡೆದುಕೊಂಡಿದೆ. ಆರ್‌ಬಿಐ ಅಥವಾ ಟೆಲಿಕಾಂ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಫೋನ್ ಕರೆಗಳನ್ನು ಮಾಡುವುದೇ ಅಲ್ಲದೆ ಬಂಧನಕ್ಕೊಳಗಾಗುವ, ಜೈಲುಪಾಲಾಗುವ ಬೆದರಿಕೆಯನ್ನೊಡ್ಡಿ ಉದ್ದೇಶಿತ ವ್ಯಕ್ತಿಗಳಿಂದ ಹಣ ವಸೂಲಿ ಮಾಡುವುದು ಈ ಮಾದರಿಯ ಒಂದು ವಿಧಾನ.
ಉದ್ದೇಶಿತ ವ್ಯಕ್ತಿಗಳ ಖಾಸಗಿ ವ್ಯವಹಾರಗಳು ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಗಮನಿಸುತ್ತಲೇ ಕೆಲವರನ್ನು ಆಯ್ಕೆ ಮಾಡುವ ವಂಚಕರು ಸಾಮಾನ್ಯವಾಗಿ ಆನ್‌ಲೈನ್ ಖರೀದಿಯ ಸಂದರ್ಭದಲ್ಲಿ ಸೃಷ್ಟಿಯಾಗುವ ದತ್ತಾಂಶಗಳನ್ನು ಡಾರ್ಕ್‌ವೆಬ್ ಎಂಬ ತಂತ್ರಜ್ಞಾನದ ವೇದಿಕೆಯ ಮೂಲಕ ಪಡೆದುಕೊಳ್ಳುತ್ತಾರೆ.
ಉದ್ದೇಶಿತ ವ್ಯಕ್ತಿಗಳಲ್ಲಿ ನಂಬಿಕೆ ಹುಟ್ಟಿಸಲು ಅವರ ಹಿಂದಿನ ಕೆಲವು ವಹಿವಾಟುಗಳ ವಿವರಗಳನ್ನೂ ಒದಗಿಸುತ್ತಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಉದ್ದೇಶಿತ ವ್ಯಕ್ತಿಗೆ ವಿಡಿಯೋ ಕರೆ ಮಾಡುವ ಸಲುವಾಗಿ skype ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ, ವಿಡಿಯೋ ಕರೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲಾಖೆಯ ಲಾಂಛನಗಳನ್ನು ಹೊಂದಿರುವ ಪತ್ರಗಳನ್ನು, ಗುರುತಿನ ಚಿಹ್ನೆಗಳನ್ನು ತೋರಿಸಿ ಕಾನೂನುಬದ್ಧವಾಗಿರುವಂತೆ ನಟಿಸುವುದು ವಂಚಕರ ಒಂದು ಮಾದರಿ. ಕೆಲವೊಮ್ಮೆ ಉನ್ನತ ಅಽಕಾರಿಗಳನ್ನು ಅನುಕರಿಸುವ ಮೂಲಕ ಉದ್ದೇಶಿತ ವ್ಯಕ್ತಿಗಳಲ್ಲಿ ನಂಬಿಕೆ ಹುಟ್ಟಿಸುತ್ತಾರೆ.
ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತೀಯ ಯುವಕರು ಐಟಿ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ಉದ್ಯೋಗದ ಆಕಾಂಕ್ಷೆಗಳಿಂದ ಈ ಆಮಿಷಕ್ಕೆ ಒಳಗಾಗುತ್ತಾರೆ. ಈ ವರ್ಷದ ಆರಂಭದಲ್ಲಿ, ೫,೦೦೦ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಸ್ವದೇಶಕ್ಕೆ ಮರಳಿದ ಜನರ ಮೇಲೆ ಸೈಬರ್ ವಂಚನೆಗಳನ್ನು ನಡೆಸಲು ಒತ್ತಾಯಿಸಲಾಯಿತು ಎಂದು ವರದಿ ಮಾಡಲಾಗಿದೆ. ಆದಾಗ್ಯೂ, ಈ ವರ್ಷದ ಮೇ ಮತ್ತು ಜೂನ್ ನಡುವೆ ಸುಮಾರು ೧,೩೦೦ ಭಾರತೀಯರನ್ನು ಇಂತಹ ಹಗರಣ ಸಂಯುಕ್ತಗಳಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಈ ಹಗರಣಗಳನ್ನು ಮುಚ್ಚಲು ಮಾರ್ಗಗಳು: ಡಿಜಿಟಲ್ ಬಂಧನ ಹಗರಣಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಜನರಿಗೆ ಸಹಾಯ ಮಾಡುವ ಪ್ರಮುಖ ಅಂಶವೆಂದರೆ ಜನ ಜಾಗೃತಿ ಒಂದೇ. ಅಕ್ಟೋಬರ್ ೨೭ರಂದು ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನ ಸಂಚಿಕೆಯಲ್ಲಿ, ಪ್ರಧಾನಿ ಮೋದಿಯವರು ಡಿಜಿಟಲ್ ಬಂಧನಗಳ ಬಗ್ಗೆ ಗಮನ ಸೆಳೆದರು, ಹಗರಣದ ವಿರುದ್ಧ ಜನರನ್ನು ಎಚ್ಚರಿಸಿದರು. ‘ಡಿಜಿಟಲ್ ಬಂಧನ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಕಾನೂನಿನಡಿಯಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಅಂತಹ ತನಿಖೆಗಾಗಿ ಯಾವುದೇ ಸರ್ಕಾರಿ ಸಂಸ್ಥೆ ನಿಮ್ಮನ್ನು ಫೋನ್ ಅಥವಾ ವಿಡಿಯೋ ಕರೆ ಮೂಲಕ ಸಂಪರ್ಕಿಸುವುದಿಲ್ಲ’ ಎಂದು ಅವರು ಹೇಳಿದ್ದರು. ಆನ್‌ಲೈನ್ ಮಾಹಿತಿಯ ಅತಿಯಾದ ಸ್ಛೋಟ ಮತ್ತು ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆಯು ನಮ್ಮ ಅರಿವಿನ ಚಿಂತನೆಯ ಮೇಲೆ ಪರಿಣಾಮ ಬೀರಿದೆ, ಇದು ಜನರು ಸುಲಭವಾಗಿ ಭಯಭೀತರಾಗಲು ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಜಿಟಲ್ ವಂಚನೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಸರ್ಕಾರವು ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ‘ನಾವು ಸೈಬರ್ ಅಪರಾಽಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಘಟನೆಗಳನ್ನು ತ್ವರಿತವಾಗಿ ವರದಿ ಮಾಡಲು ಸಂತ್ರಸ್ತರನ್ನು ಪ್ರೋತ್ಸಾಹಿಸುತ್ತೇವೆ. ತಕ್ಷಣದ ವರದಿ ಮಾಡುವುದು ಬಹಳ ಮುಖ್ಯ’ ಎಂದು ಐಸಿಸಿಸಿಸಿ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.
ಸೈಬರ್ ವಂಚನೆ ಪ್ರಕರಣಗಳಿಗೆ ಸಹಾಯಕ್ಕಾಗಿ ೧೯೩೦ ಸಹಾಯವಾಣಿಯನ್ನು ಬಳಸಲು ಸಾರ್ವಜನಿಕರನ್ನು ಎಚ್ಚರಿಸಲಾಗಿದೆ. ಅಂತರ್ಜಾಲ ಮತ್ತು ಸೈಬರ್ ಸ್ಪೇಸ್ ಡಿಜಿಟಲ್ ವಂಚನೆಗಳಿಂದ ತುಂಬಿದೆ. ಆನ್‌ಲೈನ್ ಡೇಟಿಂಗ್ ಸ್ಕಾ ಮ್‌ಗಳಿಂದ ಹಿಡಿದು ಹಣಕಾಸು ವಂಚನೆಗಳವರೆಗೆ ಕ್ರಿಪ್ಟೋಕರೆನ್ಸಿ ಹಗರಣಗಳವರೆಗೆ, ಇತ್ತೀಚೆಗೆ ಹಲವು ಪ್ರಕರಣಗಳು ವರದಿಯಾಗಿವೆ. ಸಾಮಾನ್ಯ ಜನರಲ್ಲೂ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಕೈಪಿಡಿಗಳನ್ನು ಮುದ್ರಿಸಿ, ವಿದ್ಯುನ್ಮಾನ ಸಂವಹನ ಮಾಧ್ಯಮಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದರಿಂದ ಸೈಬರ್ ಅಪರಾಧಗಳು ಮತ್ತು ಡಿಜಿಟಲ್ ಬಂಧನದಂತಹ ಪ್ರಕರಣಗಳನ್ನು ತಡೆಗಟ್ಟಬಹುದು.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಈ ವಂಚಕ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ಈ ಸಂಸ್ಥೆಯ ವರದಿಯ ಅನುಸಾರ ದೇಶದಲ್ಲಿ ಸಂಭವಿಸಿರುವ ೯೨,೩೨೩ ಡಿಜಿಟಲ್ ಬಂಧನದ ಪ್ರಕರಣಗಳಲ್ಲಿ ಸಾಮಾನ್ಯ ಜನರು ೨೧೪೦.೯೯ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷದಲ್ಲೇ ದೇಶಾದ್ಯಂತ ೪೨ ಸಾವಿರ, ಕರ್ನಾಟಕದಲ್ಲಿ ೧೧ ಸಾವಿರ ವಂಚನೆ ಪ್ರಕರಣಗಳು ಸಂಭವಿಸಿವೆ. ಡಿಜಿಟಲ್ ಅರಿವಿನ ಕೊರತೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಲು ಉಂಟಾಗುವ ಮುಜುಗರದ ಕಾರಣ ಅನೇಕರು ವರದಿ ಮಾಡದಿರುವ ಪ್ರಸಂಗಗಳೂ ಇವೆ ಎಂದು ಐಸಿಸಿಸಿಸಿ ವರದಿಯಲ್ಲಿ ಹೇಳಲಾಗಿದೆ.
ಯಾವುದಾದರೂ ಕವನ ವಾಚಿಸಿ, ಏನಾದರೂ ಆಹಾರ ತಿನ್ನಿ ಎಂದವಳು ಹೇಳಿದಳು ಕವಿರಾಯರಿಗೆ ಕಿವಿಮಾತು! ಸಮ್ಮೇಳನದಿಂದ ಬರುವಾಗ ಆ..ಹಾರ, ಶಾಲು, ಸ್ಮರಣಿಕೆಗಳ…
ಡಿ.೧೨ರಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ, ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠವು ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ…
ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ನನ್ನು ಪೊಲೀಸ್ ವಶಕ್ಕೆ ಪಡೆಯುವಂತೆ ಮುಂಬೈ ನ್ಯಾಯಾಲಯ ಆದೇಶ ನೀಡಿತ್ತು. ಆದರೆ…
ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು ಸಂವಿಧಾನ ಕುರಿತ ಚರ್ಚೆಯನ್ನು ಪ್ರಧಾನಿಯೇ ರಾಜಕೀಯಗೊಳಿಸುವ ಪ್ರಯತ್ನ ಮಾಡಿದ್ದು ಸರಿಯಲ್ಲ ದೇಶದ ಸಂವಿಧಾನ ೭೫…
ಎಂ.ಬಿ.ರಂಗಸ್ವಾಮಿ ಮೂಗೂರು: ೩ ವರ್ಷಗಳಿಂದ ಸ್ಥಗಿತಗೊಂಡಿರುವ ತೆಪ್ಪೋತ್ಸವ ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಕೋಟ್ಯಂತರ ರೂ.…
ನೇಮಕಾತಿ ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್ ಹುದ್ದೆ ಹೆಸರು: ಕ್ಲರಿಕಲ್ ಕೇಡರ್ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್)…