ಅಂಕಣಗಳು

ಉತ್ತಮವೆನ್ನಬಹುದಾದ ಮಳೆಗಾಲ; ರೈತರಿಗೆ ಸಿಹಿ ಸುದ್ದಿ

ಪ್ರೊ.ಆರ್.ಎಂ.ಚಿಂತಾಮಣಿ

ದೇಶಾದ್ಯಂತ ಸುಡುವ ಬೇಸಿಗೆಯ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಆಗಾಗ ಬೀಸುವ ಬಿಸಿಗಾಳಿಯ ಹೊಡೆತ ಬೇರೆ, ಕೆಲವು ಕಡೆ ಉಷ್ಣಾಂಶ ೪೫ ಡಿಗ್ರಿ ಸೆಲ್ಸಿಯಸ್ ಮೀರಿ ಹೋಗಿರುವ ವರದಿಗಳಿವೆ. ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದರೂ ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೆ ಮತ್ತು ಬೇಸಿಗೆ ಬೆಳೆಗಳ ನೀರಾವರಿಗೆ ತೊಂದರೆಯಾಗುವುದಿಲ್ಲವೆಂಬ ಅಧಿಕೃತ ಪ್ರಕಟಣೆಗಳಿಂದ ಆತಂಕ ಕಡಿಮೆಯಾಗಿದೆ.

ಇಂಥ ಕಠಿಣ ನೈಸರ್ಗಿಕ ಪರಿಸ್ಥಿತಿಯಲ್ಲಿ ಬರಲಿರುವ ಮಳೆಗಾಲ ಹೇಗಿರುತ್ತದೋ ಎಂದು ರೈತಾಪಿ ಜನರು ಚಿಂತಿಸುತ್ತಿರುವಾಗಲೇ ನಮ್ಮ ಹವಾಮಾನ ಇಲಾಖೆ ಬರುವ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆ ಬೀಳಲಿದೆ ಎಂದು ಕಳೆದ ವಾರ ಪ್ರಕಟಿಸಿದ್ದು ರೈತರಲ್ಲಿ ಸಂತಸ ತಂದಿದೆ. ಅವರು ಈಗಲೇ ಮೈಕೊಡವಿಕೊಂಡು ಎದ್ದು ಮುಂದಿನ ಮುಂಗಾರು ಹಂಗಾಮಿನ ಬೆಳೆಗಳ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಎಲ್ಲ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪೂರಕ ಚಟುವಟಿಕೆಗಳೂ ಚುರುಕುಗೊಳ್ಳಬೇಕಾಗುತ್ತದೆ.

ಹವಾಮಾನ ಇಲಾಖೆ ಅಂದಾಜುಗಳು: ೨೦೨೦೫ರ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ದೀರ್ಘಾವಧಿ ಸರಾಸರಿ ಲೆಕ್ಕಾಚಾರದಂತೆ ೮೭ ಸೆಂ.ಮೀ. ವಾಡಿಕೆಯ ಮಳೆ ಪ್ರಮಾಣವನ್ನು ಕಂಡುಹಿಡಿಯಲಾಗಿದೆ. ಪ್ರತಿವರ್ಷ ಈ ವಾಡಿಕೆಯ ಮಳೆ ಪ್ರಮಾಣವನ್ನು ಹಿಂದಿನ ೫೦ ವರ್ಷಗಳಲ್ಲಿ ಈ ಅವಧಿಯಲ್ಲಿ ಬಿದ್ದ ಮಳೆಯ ಚಲಿಸುವ ಸರಾಸರಿಯನ್ನು ಆಯಾ ವರ್ಷದ ವಾಡಿಕೆಯ ಮಳೆ ಅಥವಾ ದೀರ್ಘಾವಧಿ ಸರಾಸರಿ ಮಳೆ ಎಂದು ಕರೆಯಲಾಗುವುದು;  ಈ ವಾಡಿಕೆಯ ಮಳೆಯೊಡನೆ ಪ್ರತ್ಯಕ್ಷ ಬಿದ್ದ ಅಥವಾ ಬೀಳುವ ಮಳೆಯೊಡನೆ ಹೋಲಿಕೆ ಮಾಡಲಾಗುವುದು. ಈ ೮೯ ಸೆಂ.ಮೀ.ನಷ್ಟು ಅಥವಾ ಶೇ.೪ ಹೆಚ್ಚು ಅಥವಾ ಶೇ.೪ರಷ್ಟು ಕಡಿಮೆ ಮಳೆ ಬಿದ್ದರೂ ವಾಡಿಕೆಯ ಅಥವಾ ಸಾಮಾನ್ಯ ಮಳೆ ಎನ್ನಲಾಗುವುದು. (ಶೇ.೧೦೪ ಮತ್ತು ಶೇ.೯೬ರ ಮಿತಿ). ಶೇ.೧೦೪-  ಶೇ.೧೧೦ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಮತ್ತು ಶೇ.೯೦-ಶೇ. ೯೬ ರವರೆಗೆ ವಾಡಿಕೆಗಿಂತ ಕಡಿಮೆ ಮಳೆ ಎನ್ನಲಾಗುವುದು. ಶೇ.೧೧೦ಕ್ಕಿಂತ ಹೆಚ್ಚಾದರೆ ಅತಿವೃಷ್ಟಿ ಮತ್ತು ಶೇ.೯೦ಕ್ಕಿಂತ ಕಡಿಮೆಯಾದರೆ ಅನಾವೃಷ್ಟಿ ಅಥವಾ ಬರಗಾಲ.  ಅತಿವೃಷ್ಟಿ ಇದ್ದಾಗಲೂ ಕೆಲವು ಪ್ರದೇಶಗಳಲ್ಲಿ ಅನಾವೃಷ್ಟಿ ಇರಬಹುದು. ಎಲ್ಲ ಕಡೆಗೂ ಒಂದೇ ಮಟ್ಟದಲ್ಲಿ ಮಳೆ ಬೀಳದೆ ಇರುವುದರಿಂದ ಈ ಸರಾಸರಿಗಳು ಒಟ್ಟಾರೆ ಪರಿಸ್ಥಿತಿಯ ಸೂಚಿಗಳಷೆ . ಆದರೂ  ಇವುಗಳು ನೀತಿ ನಿರೂಪಕರಿಗೆ ಮಾರ್ಗಸೂಚಿಗಳಾಗಿರುತ್ತವೆ.

ಈಗ ಇಲಾಖೆ ಅಂದಾಜುಗಳಿಗೆ  ಬಂದರೆ ಹಿಂದಿನ ಅಂಕಿ- ಸಂಖ್ಯೆಗಳನ್ನು ಪರಿಶೀಲಿಸಿ ಮತ್ತು ಇಂದಿನ ಹವಾಮಾನದಲ್ಲಿಯ ಆರ್ದ್ರತೆಯನ್ನು ಗಮನಿಸಿ ಇಲಾಖೆಯು ಈ ವರ್ಷ ಮಾನ್ಸೂನ್ ಅವಧಿಯಲ್ಲಿ ಎಲ್.ಸಿ.ಎ.ದ (೮೭ ಸೆಂ. ಮೀ) ಶೇ.೧೦೫ರಷ್ಟು ಮಳೆ ಬೀಳಲಿದೆ ಎಂದು ಅಂದಾಜಿಸಿದೆ. ಇದು ಸತತ ಎರಡನೇ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ೨೦೨೪ರ ಏಪ್ರಿಲ್‌ನಲ್ಲಿ ಆ ವರ್ಷ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಶೇ.೧೦೬ರಷ್ಟು ಮಳೆಯ ಅಂದಾಜು ಇತ್ತು. ನಿರೀಕ್ಷೆಗಿಂತ ಹೆಚ್ಚು ಶೇ.೧೦೮ರಷ್ಟು ಮಳೆ ಬಿದ್ದಿದ್ದು ದಾಖಲಾಗಿದೆ. ಈ ವರ್ಷವೂ ಅಂದಾಜಿಗಿಂತ ಮಾನ್ಸೂನ್‌ನ ನಾಲ್ಕು ತಿಂಗಳಲ್ಲಿ(ಜೂನ್ – ಸೆಪ್ಟೆಂಬರ್) ಹೆಚ್ಚು ಮಳೆ ಬೀಳುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದೂ ಇಲಾಖೆ ವಿಶ್ವಾಸದಿಂದ ಹೇಳಿಕೊಂಡಿದೆ.

ಇಲಾಖೆಯ ವರದಿಯಂತೆ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಜಮ್ಮು,  ಲಡಾಖ್, ತಮಿಳುನಾಡು, ಬಿಹಾರ ಮತ್ತು ಪೂರ್ವೋತ್ತರ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ. ಉಳಿದ ರಾಜ್ಯಗಳಲ್ಲಿ ಮತ್ತು ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ ಎಂದು ಇದರರ್ಥವಲ್ಲ. ಎಲ್ಲಿಯೋ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದು ಸರಾಸರಿಯಲ್ಲಿ ಸೇರಿಕೊಂಡು ಕೆಲವು ಪ್ರದೇಶಗಳಲ್ಲಿ ತೀರಾ ಕಡಿಮೆ ಮಳೆ ಬಿದ್ದುದನ್ನು ಗೌಣ ಎನ್ನುವಂತೆ ಮಾಡಬಹುದು. ಇದಕ್ಕೆ ನೈಸರ್ಗಿಕ ಭಿನ್ನತೆಗಳೂ ಕಾರಣವಿರಬಹುದು.  ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ‘ಸ್ಕೈಮೆಟ್’ ಸಹಿತ ಒಂದು ವಾರ ಮುಂಚೆಯೇ ಈ ವರ್ಷದ ಮಾನ್ಸೂನ್ ಮಳೆಗಾಲದ ಅಂದಾಜುಗಳನ್ನು ಪ್ರಕಟಿಸಿತ್ತು. ಅದರ ಅಂದಾಜುಗಳೂ ಇಲಾಖೆ ಅಂದಾಜುಗಳಿಗೆ ಸಮೀಪದಲ್ಲಿಯೇ ಇರುತ್ತವೆ. ಸ್ಕೈಮೆಟ್ ಪ್ರಕಾರ ಎಲ್.ಪಿ.ಎ. ೮೬೮.೬ ಮಿಲಿಮೀಟರ್ ಇದೆ. (ಇಲಾಖೆ ಇದನ್ನೇ ಇನ್ನಷ್ಟು ಸಂಕ್ಷಿಪ್ತಗೊಳಿಸಿ ೮೭ ಸೆಂ. ಮೀ. ಎಂದು ಹೇಳಿದೆ.) ಈ ಸಂಸ್ಥೆಯ ಪ್ರಕಾರ ಎಲ್.ಪಿ.ಎ. ದ ಶೇ. ೧೦೩ ರಷ್ಟು ಮಳೆ ಬೀಳಲಿದೆ. (ಇಲಾಖೆಯ ಪ್ರಕಾರ ಶೇ.೧೦೫ರಷ್ಟು ಮಳೆ ಬೀಳಲಿದೆ. ಈ ಸಂಸ್ಥೆಯ ಅಧ್ಯಯನದ ಪ್ರಕಾರ ಶಾಂತಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿ ಮುಂತಾದೆಡೆಗಳಲ್ಲಿ ಉದ್ಭವಿಸುವ ಹವಾಮಾನ ವೈಪರೀತ್ಯಗಳಾದ ಎಲ್‌ನೈನೊ , ಲಾ ನೀನಾ ‘ಸದರ್ನ್ ಆಸ್ಸಿಲೇಶನ್ ಮತ್ತು ಇಂಡಿಯನ್ ಓಸಿಯನ್ ಡೈಪೋಲ’ ಮುಂತಾದವುಗಳು ೨೦೨೫ರಲ್ಲಿ ನಿಷ್ಕ್ರೀಯ ವಾಗಿರುತ್ತವೆ.  ಆದ್ದರಿಂದ ಭಾರತದ ಮಾನ್ಸೂನ್ ಮಳೆಗಾಲದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲಾರವು ಎಂಬುದು ಸ್ಕೈಮೆಟ್ ಅಭಿಪ್ರಾಯ.

ಮಳೆಯ ಪ್ರಾದೇಶಿಕ ವಿವರಗಳು ಹೆಚ್ಚಬೇಕು ನಮ್ಮ ದೇಶದಲ್ಲಿ ೩೬ ಪ್ರಮುಖ ಮಳೆ ಮಾಪನ ಕೇಂದ್ರಗಳಿವೆ. ದೊಡ್ಡ ಸಂಖ್ಯೆಯಲ್ಲಿ ಉಪ ಕೇಂದ್ರಗಳಿವೆ.  ಇಲಾಖೆಯಲ್ಲಿ ಸಾಕಷ್ಟು ಜನ ಪರಿಣಿತರಿದ್ದಾರೆ. ಅನುಭವಿಗಳಿದ್ದಾರೆ. ದೇಶವು ನೈಸರ್ಗಿಕವಾಗಿ ವೈವಿಧ್ಯಮಯವಾಗಿದೆ. ೭೦೦ಕ್ಕೂ ಹೆಚ್ಚು ಜಿಲ್ಲೆಗಳಿವೆ. ಪ್ರತಿ ಜಿಲ್ಲೆಯಲ್ಲಿಯೂ ನೈಸರ್ಗಿಕ ವೈವಿಧ್ಯಗಳಿವೆ. ಆದ್ದರಿಂದ ಜಿಲ್ಲಾವಾರು ಮಳೆಯ ಬಗ್ಗೆ ಅಂದಾಜಿಸುವರು ಕಷ್ಟವಾಗಬಹುದು.

ಪಶ್ಚಿಮದ ಕರಾವಳಿ ಪೂರ್ವದ  ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟಗಳು,  ಪೂರ್ವ ಘಟ್ಟಗಳು, ವಿಂದ್ಯಾದ್ರಿ ಪ್ರದೇಶ, ಬಯಲು ಸೀಮೆ, ಹಿಮಾಲಯದ ತಪ್ಪಲು ಪ್ರದೇಶ, ರಾಜಸ್ಥಾನದ ಮರಳುಗಾಡು, ಕಚ ದ ರಣ, ಉತ ರದಲ್ಲಿಯ ಬಯಲು ಭೂಮಿ… ಹೀಗೆ ಒಂದೇ ರೀತಿಯ ನೈಸರ್ಗಿಕ ಲಕ್ಷಣಗಳಿರುವ ಪ್ರದೇಶಗಳಲ್ಲಿ ಬೀಳಬಹುದಾದ ಮಳೆಯ ಅಂದಾಜುಗಳನ್ನಾದರೂ ಇಲಾಖೆಯಿಂದ ಮುಂಚಿತವಾಗಿ ಪ್ರಕಟಿಸಿದರೆ ರೈತರು ಮತ್ತು ಇತರ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವವರು ತಮ್ಮ ಕಾರ್ಯಗಳನ್ನು ಸುಸ್ಥಿರವಾಗಿ ನಡೆಸಬಹುದು. ಕೇಂದ್ರ ಮತ್ತು ರಾಜ್ಯ  ಸರ್ಕಾರಗಳು ಈ ಅಂದಾಜುಗಳನ್ನಾಧರಿಸಿ ನೀತಿಗಳನ್ನು ರೂಪಿಸುವುದು ಸಾಧ್ಯವಾಗಬಹುದು. ಮುಖ್ಯವಾಗಿ ಹವಾಮಾನ ಮತ್ತು ಇತ್ತೀಚೆಗೆ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳ ಅಧ್ಯಯನಕ್ಕೆ ಒತ್ತು ಕೊಡಬೇಕು.

” ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ‘ಸ್ಕೈಮೆಟ್’  ಸಹಿತ ಒಂದು ವಾರ ಮುಂಚೆಯೇ ಈ ವರ್ಷದ ಮಾನ್ಸೂನ್ ಮಳೆಗಾಲದ ಅಂದಾಜುಗಳನ್ನು ಪ್ರಕಟಿಸಿತ್ತು. ಅದರ ಅಂದಾಜುಗಳೂ ಇಲಾಖೆ ಅಂದಾಜುಗಳಿಗೆ ಸಮೀಪದಲ್ಲಿಯೇ ಇರುತ್ತವೆ.  ಸ್ಕೈಮೆಟ್ ಪ್ರಕಾರ ಎಲ್.ಪಿ.ಎ. ೮೬೮.೬ ಮಿಲಿಮೀಟರ್ ಇದೆ. (ಇಲಾಖೆ ಇದನ್ನೇ ಇನ್ನಷ್ಟು ಸಂಕ್ಷಿಪ್ತಗೊಳಿಸಿ ೮೭ ಸೆಂ.ಮೀ. ಎಂದು ಹೇಳಿದೆ.)  ಈ ಸಂಸ್ಥೆಯ ಪ್ರಕಾರ ಎಲ್.ಪಿ.ಎ.ದ ಶೇ.೧೦೩ರಷ್ಟು ಮಳೆ ಬೀಳಲಿದೆ.”

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

7 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

7 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

7 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

7 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

8 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

9 hours ago