ಸಿದ್ದಗಂಗಾ ಶ್ರೀಗಳ ದಿನ ಇನ್ನೂ ʻದಾಸೋಹ ದಿನʼ: ಸಿಎಂ ಬಿಎಸ್‌ವೈ ಘೋಷಣೆ

ತುಮಕೂರು: ಅನ್ನದಾಸೋಹದೊಂದಿಗೆ ಅಕ್ಷರದಾಸೋಹದಲ್ಲಿ ಜನರ ಮನಸ್ಸು ಗೆದ್ದ ಸಿದ್ಧಗಂಗಾ ಶ್ರೀಗ ಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದರು.

ತುಮಕೂರಿನ ಸಿದ್ಧಗಂಗಾ ಶ್ರೀಗ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಸ್ಮರಣಾ ದಿನವನ್ನು ಸ್ಮರಣಾ ದಿನವನ್ನಾಗಿ ಮಾಡಲು ಘೋಷಿಸಿದರು.

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಪುತ್ಥಳಿ ಹಾಗೂ ಗ್ರಾಮದ ಅಭಿವೃದ್ಧಿಗೆ 25ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದರು.