ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಅರಣ್ಯ ಸಿಬ್ಬಂದಿಗೆ ಸಿಕ್ಕಿತು ರಕ್ಷಾ ಕವಚ!

ಚಾಮರಾಜನಗರ: ಹುಲಿ ಮತ್ತು ಚಿರತೆ ಕಾದಾಟ ಸಂದರ್ಭದಲ್ಲಿ ಹಾಗೂ ಚಿರತೆ ರಕ್ಷಣೆ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿಗೆ ರಕ್ಷಾಕವಚ (ಪ್ರೊಟೆಕ್ಟ್‌ ಗಿಯರ್‌) ಅನ್ನು ಬಿಆರ್‌ಟಿ ವಿತರಿಸಿದೆ.

ಈ ಹಿಂದೆ ರಕ್ಷಣಾ ಸಂದರ್ಭದಲ್ಲಿ ಕಾರ್ಯಾಚರಣೆಗಿಳಿದಿದ್ದ ಸಿಬ್ಬಂದಿ ಮೇಲೆ ಚಿರತೆಗಳು ದಾಳಿ ಮಾಡಿದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಇದರಿಂದ ಸಿಬ್ಬಂದಿ ಕೈ-ಕಾಲು, ಮುಖಕ್ಕೆ ಗಾಯಗಳಾಗಿದ್ದವು. ಈ ನಿಟ್ಟಿನಲ್ಲಿ ಸಿಬ್ಬಂದಿ ರಕ್ಷಣೆ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ವಿಶೇಷ ಹೆಲ್ಮೆಟ್‌ ಮತ್ತು ಕೈ-ಕಾಲುಗಳ ರಕ್ಷಣೆಗೆ ಪ್ಯಾಡ್‌ ಅನ್ನು ನೀಡಿದೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಅರಣ್ಯ ವಲಯದ ಸಿಬ್ಬಂದಿಗೆ ಮಾತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೂ ರಕ್ಷಾಕವಚ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

× Chat with us