ಐಸಿಸಿ ಸಿಇಒ ಸ್ಥಾನಕ್ಕೆ ಮನು ಸಾಹ್ನಿ ರಾಜೀನಾಮೆ

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಿಇಒ ಮನು ಸಾಹ್ನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈಗ ಅವರ ಸ್ಥಾನದಲ್ಲಿ ಜೆಫ್‌ ಅಲಾರ್ಡಿಸ್‌ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ.

ಕಳೆದ ವರ್ಷ ಹೊಸ ಅಧ್ಯಕ್ಷರ ಪಟ್ಟಕ್ಕಾಗಿ ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದ ಸಾಹ್ನಿ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಸಹೋದ್ಯೋಗಿಗಳ ಜೊತೆ ದುರ್ನಡತೆಯಿಂದ ವರ್ತಿಸಿದ ಕಾರಣ ಇದರ ಬಗ್ಗೆ ಪರಿಶೀಲನೆ ನಡೆಸಿ ಇವರನ್ನು ಕಳೆದ ಮಾರ್ಚ್​ನಲ್ಲಿ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು.

2019ರಲ್ಲಿ ಐಸಿಸಿ ವಿಶ್ವಕಪ್ ನಂತರ 2022ರವರೆಗೆ ಅಧಿಕಾರಾವಧಿಯಲ್ಲಿ ಡೇವ್ ರಿಚರ್ಡ್‌ಸನ್‌ ಸ್ಥಾನಕ್ಕೆ ಸಾಹ್ನಿ ಬಂದಿದ್ದರು.

× Chat with us