ಕಾವಾ ಅಕಾಡೆಮಿಯ ಮಾಜಿ ಡೀನ್‌ ವಿ.ಎ. ದೇಶಪಾಂಡೆ ಇನ್ನಿಲ್ಲ

ಮೈಸೂರು: ಖ್ಯಾತ ಶಿಲ್ಪಿ ಹಾಗೂ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ ಡೀನ್‌ ಆಗಿದ್ದ ವಿ.ಎ. ದೇಶಪಾಂಡೆ (66) ಅವರು ಶನಿವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ದೇಶಪಾಂಡೆ ಅವರು ಕಾವಾ ಅಕಾಡೆಮಿಯಲ್ಲಿ ಅತಿ ಹೆಚ್ಚು ಕಾಲ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಡೀನ್‌ ಆಗಿದ್ದ ಸಮಯದಲ್ಲೇ ಕಾವಾ ಕಾಲೇಜು ಸಿದ್ಧಾರ್ಥ ನಗರಕ್ಕೆ ಸ್ಥಳಾಂತರವಾಯಿತು.

1983ರಲ್ಲಿ ಮೈಸೂರಿಗೆ ಬಂದ ಅವರು ಹೊಸದಾಗಿ ಆರಂಭವಾಗಿದ್ದ ಕಾವಾ ಕಾಲೇಜಿನಲ್ಲಿ ಸೇವೆ ಆರಂಭಿಸಿದರು. ಶಿಲ್ಪ ಕಲಾ ವಿಭಾಗದ ಅಧ್ಯಾಪಕರಾಗಿ ಸೇವೆ ಆರಂಭಿಸಿ ಅದೇ ವಿಭಾಗದಲ್ಲಿ ರೀಡರ್‌ ಆದರು. ನಂತರ ಡೀನ್‌ ಆದರು.

1955ರಲ್ಲಿ ಬಾದಾಮಿಯಲ್ಲಿ ಜನಿಸಿದ ದೇಶಪಾಂಡೆ ಅವರು ಧಾರವಾಡ ಕಲಾ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ದೇಶಪಾಂಡೆ ಅವರು ಕಲಾವಿದೆಯೂ ಆತ ತಮ್ಮ ಪತ್ನಿ ಪ್ರಮೋದಿನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.