ಕಾಂಗ್ರೆಸ್‌ ಮಾಡಿದ ಪಾಪದ ಸಾಲ ತೀರಿಸಲು ಬೆಲೆ ಏರಿಕೆ: ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್‌ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ. ಹೀಗಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

ರಾಜ್ಯ ವಿಧಾನಮಂಡಲದ 2ನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಚಿನ್ನವನ್ನು ಒತ್ತೆಯಾಗಿ ಇಟ್ಟವರು ಯಾರು? ಸಾಲ ಪಡೆಯುವುದಕ್ಕೆ ವಿದೇಶಗಳಿಗೆ ಹೋಗುತ್ತಿದ್ದರು. ಈಗ ಹೋರಾಟ ಮಾಡುತ್ತಿರುವವರು, ಹಿಂದೆ ಈ ಕೆಲಸ ಮಾಡಿದ್ದರು ಟೀಕಿಸಿದರು.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ.ರವಿ, ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ನವರು ದಿನಾ ಎತ್ತಿನ ಗಾಡಿಯಲ್ಲಿ ಬರ್ತಾರಾ? ಒಂದು ದಿನ ಶೋ ಕೊಡಲು ಮಾತ್ರ ಬರುತ್ತಾರಾ? ಬೆಲೆ ಏರಿಕೆ ನಮ್ಮ ದೇಶದಲ್ಲಿ ಮಾತ್ರ ಆಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದು ಸಮಜಾಯಿಷಿ ಕೊಟ್ಟರು.

ಸಂಕಷ್ಟದ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದು ತಾತ್ಕಾಲಿಕ ಅಷ್ಟೆ. ಬೆಲೆ ಏರಿಕೆ ನಿಗದಿತ ಸಮಯಕ್ಕೆ ಮಾತ್ರ ಆಗಿರುತ್ತದೆ ಎಂದು ಹೇಳಿದರು.

× Chat with us