ವಿಶ್ವದ ಪ್ರಥಮ ಎಲೆಕ್ಟ್ರಿಕ್ ಜೆಟ್ ಸೂಟ್ ಅನಾವರಣ: ಎಲ್ಲಿ, ಏನಿದರ ವಿಶೇಷತೆ?

ಲಂಡನ್: ಜೆಟ್ ಸೂಟ್ ಧರಿಸಿ ಮಾನವ ವೇಗವಾಗಿ ಹಾರಬಹುದು. ಇದನ್ನು ಅನ್ವೇಷಣೆ ಮಾಡಿದ ಬ್ರಿಟನ್‌ನ ಐರನ್ ಮ್ಯಾನ್ ಈಗ ವಿಶ್ವದ ಪ್ರಥಮ ಎಲೆಕ್ಟ್ರಿಕ್ ಜೆಟ್ ಸೂಟ್ ಅನಾವರಣಗೊಳಿಸಿದ್ದಾರೆ.

ಏನಿದರ ವಿಶೇಷತೆ?

ಐರನ್ ಮ್ಯಾನ್ನಂತೆ ಹಾರುವುದನ್ನು ಸಾಧ್ಯವಾಗಿಸಿದ ಜೆಟ್ ಸೂಟ್ ಅನ್ವೇಷಕ ಈಗ ಮತ್ತಷ್ಟು ಎತ್ತರಕ್ಕೆ ಸಾಧನೆ ಮಾಡಿದ್ದಾರೆ. ವಿದ್ಯುತ್ ಚಾಲಿತ ಹೊಸ ಜೆಟ್ ಸೂಟ್‌ನನ್ನು ಅನಾವರಣಗೊಳಿಸಿದ್ದಾರೆ. ಇದು ವಿಶ್ವದ ಪ್ರಪ್ರಥಮ ಎಲೆಕ್ಟ್ರಿಕ್
ಜೆಟ್ ಸೂಟ್. ಜೆಟ್ ಸೂಟ್‌ನಲ್ಲಿ ಸಾಧ್ಯತೆಯ ಆಚೆಗೂ ಅನ್ವೇಷಣೆ ಮಾಡಬೇಕೆಂಬ ತಮ್ಮ ಬಯಕೆ ಸಾಕಾರಗೊಂಡಿದೆ. ಇಂಧನ ಜೆಟ್‌ನಿಂದ ವಿದ್ಯುತ್ ಚಾಲಿತ ಸೂಟ್‌ಗೆ ಇದು ಪರಿವರ್ತಿತವಾಗಿದೆ ಎನ್ನುತ್ತಾರೆ ಇಂಗ್ಲೆಂಡ್ ಮೂಲದ ಗ್ರಾವಿಟಿ ಇಂಡಸ್ಟ್ರೀಸ್ ಸಂಸ್ಥಾಪಕ ರಿಚರ್ಡ್ ಬ್ರೌನಿಂಗ್.

ಗ್ರಾವಿಟಿ ಇಂಡಸ್ಟ್ರೀಸ್ ೨೦೧೭ರ ಮಾರ್ಚ್‌ನಲ್ಲಿ ಸ್ಥಾಪನೆಯಾಯಿತು. ಇದರ ಸಂಸ್ಥಾಪಕ ಮತ್ತು ಮುಖ್ಯ ಪರೀಕ್ಷಾ ಪೈಲೆಟ್ ಬ್ರೌನಿಂಗ್ ವಿಶ್ವದ ವಿವಿಧ ದೇಶಗಳಲ್ಲಿ ತನ್ನ ಜೆಟ್ ಸೂಟ್ ಹಾರಾಟವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.

ಇಂಧನ ಚಾಲಿನ ಜೆಟ್ ಸೂಟ್ ಗಂಟೆಗೆ ೧೨೮ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ೧೨,೦೦೦ ಅಡಿಗಳಷ್ಟು ಎತ್ತರವನ್ನು ತಲುಪುವ ತಾಂತ್ರಿಕ ಸಾಮರ್ಥ್ಯವನ್ನು ಇದು ಹೊಂದಿದ್ದರೂ, ಸುರಕ್ಷತೆ ದೃಷ್ಟಿಯಿಂದ ಕೆಳಮಟ್ಟದಲ್ಲಿ ಹಾರಾಟ ಸೂಕ್ತ.

× Chat with us