ಮೈಸೂರಿನಲ್ಲಿ ನಡೆಯಬೇಕಿದ್ದ ಯುವಸಂಭ್ರಮ ರದ್ದು

ಮೈಸೂರು: ನಗರದಲ್ಲಿ ಇದೇ ಮಾ.20ರಂದು ನಡೆಯಬೇಕಿದ್ದ ಯುವಸಂಭ್ರಮ ರದ್ದಾಗಿದೆ.

ಈ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ನಟ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, ಮೈಸೂರಿನಲ್ಲಿ ಯುವಸಂಭ್ರಮ ಕಾರ್ಯಕ್ರಮ ನಡೆಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ರಾಜ್ಯದ ಅನೇಕ ಕಡೆಗಳಿಂದ ʻನಮ್ಮೂರಿನಲ್ಲಿ ಯಾಕೆ ಕಾರ್ಯಕ್ರಮ ಮಾಡುವುದಿಲ್ಲʼ ಎಂದು ಅಭಿಮಾನಿಗಳಿಂದ ಮೆಸೇಜ್‌ ಬರಲು ಶುರುವಾದರು. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡ ಒಂದು ಪಟ್ಟಿ ರೂಪಿಸುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಾ.21ರಿಂದ 23ರವರೆಗೆ ನಿಗದಿತ ಊರುಗಳಿಗೆ ಹೋಗಿ ಕಾರ್ಯಕ್ರಮ ಮಾಡುತ್ತೇವೆ. ಯಾವ ಊರು, ಎಲ್ಲಿ ಎಂಬುದನ್ನು ನಮ್ಮ ತಂಡ ಹೇಳುತ್ತದೆ. ಅಲ್ಲಿಗೆ ನಾವೇ ಬಂದು ನಿಮ್ಮನ್ನು ಭೇಟಿಯಾಗುತ್ತೇವೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

× Chat with us