ಅಕ್ಕನಿಗೆ ಪ್ರೀತಿ ತೋರಿಸಿ ನನ್ನನ್ನು ಕಡೆಗಣಿಸಿದರೆಂದು ಮನನೊಂದು ಯುವತಿ ಆತ್ಮಹತ್ಯೆ

ಮೈಸೂರು: ಸಣ್ಣ ಕಾರಣಕ್ಕೆ ಮನನೊಂದ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ನೇತಾಜಿನಗರದ ನಿವಾಸಿ ನಾರಾಯಣ್ ಎಂಬವರ ಪುತ್ರಿ ಭಾವನ (23) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಪಾಲಕರು ಅಕ್ಕನಿಗೆ ಒಡವೆ, ಬಟ್ಟೆ ಏನೇ ಕೊಡಿಸಬೇಕು ಎಂದರು ಆಕೆಯನ್ನು ಕೇಳಿ, ಅವಳನ್ನೂ ಕರೆದುಕೊಂಡು ಹೋಗಿ ಕೊಡಿಸುತ್ತಾರೆ. ಆದರೆ, ನನಗೆ ಏನು ಬೇಕು, ಯಾವ ತರದ ಒಡವೆ ಬೇಕು, ಬಟ್ಟೆಬೇಕು ಎಂಬುವುದನ್ನೇ ಕೇಳುವುದಿಲ್ಲ. ಅವರು ತಂದುಕೊಟ್ಟದನ್ನು ಹಾಕಿಕೊಳ್ಳಬೇಕು ಎಂಬ ಬೇಸರದಿಂದ ಶನಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ನಗರದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us