ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಕ್ಕೆ ಮನನೊಂದು ಅಭಿಮಾನಿ ಅತ್ಮಹತ್ಯೆ!

ಗುಂಡ್ಲುಪೇಟೆ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಮನನೊಂದು ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬೊಮ್ಮಲಪುರದಲ್ಲಿ ನಡೆದಿದೆ.

ಗ್ರಾಮದ ರವಿ ( 35) ಸೋಮವಾರ ಸಂಜೆ ತಮ್ಮ ಅಂಗಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಸ್‌ವೈ ಅಪ್ಪಟ ಅಭಿಮಾನಿಯಾಗಿದ್ದ ರವಿಯನ್ನು ಗ್ರಾಮದಲ್ಲಿ “ರಾಜಾಹುಲಿ” ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದರು. ನಿನ್ನೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಬೇಸರಗೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸಾಲದಿಂದ ಬೇಸತ್ತು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ಅನುಮಾನ

ರವಿ ಸಾಲ ಮಾಡಿದ್ದ ಒತ್ತಡ ಹೆಚ್ಚಾಗಿತ್ತು. 35 ವರ್ಷ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಈ ಬೇಸರವೂ ರವಿಯನ್ನು ಕಾಡುತಿತ್ತು ಎನ್ನಲಾಗಿದ್ದು, ಸಾಲದ ಒತ್ತಡದಿಂದ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅದೇ ಗ್ರಾಮದ ಅವರ ಸ್ನೇಹಿತರು, ವಿಸ್ವಾಸಿಗರು ಹೇಳುತ್ತಿದ್ದಾರೆ.

× Chat with us