ಮೊದಲ ಬಾರಿಗೆ ತಲಕಾಡು ಪಂಚಲಿಂಗ ದರ್ಶನದಲ್ಲಿ ಪಾಲ್ಗೊಂಡ ಯದುವೀರ್‌ ದಂಪತಿ

ಮೈಸೂರು: ಮೈಸೂರು ರಾಜವಂಶಸ್ತ್ರ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಇದೇ ಮೊದಲ ಬಾರಿಗೆ ತಲಕಾಡಿನ ಐತಿಹಾಸಿ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಂಡರು.

ಬುಧವಾರ ತಲಕಾಡಿಗೆ ಭೇಟಿ ನೀಡಿದ ಯದುವೀರ್‌ ಹಾಗೂ ಪತ್ನಿ ತ್ರಿಷಿಕಾ ಅವರು ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ತಲಕಾಡಿಗೆ ಮುಂಜಾನೆಯೇ ಬಂದ ಯದುವೀರ್‌ ದಂಪತಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

7ವರ್ಷಗಳ ಬಳಿಕ ನಡೆಯುತ್ತಿರುವ ಪಂಚಲಿಂಗ ದರ್ಶನ ಮಹೋತ್ಸವ ಆರನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

× Chat with us