ಕೊಲೆ ಪ್ರಕರಣದಲ್ಲಿ ಕುಸ್ತಿಪಟು ಸುಶೀಲ್‌ ಕುಮಾರ್‌ ಅರೆಸ್ಟ್‌

ಹೊಸದಿಲ್ಲಿ: ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಒಲಿಂಪಿಯನ್‌ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರನ್ನು ಭಾನುವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಕ್ರೀಡಾಂಗಣವೊಂದರಲ್ಲಿ ಮೇ 4ರಂದು ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್‌ ರಾಣಾ ಕೊಲೆಯಾಗಿದ್ದರು. ಈ ಗಲಾಟೆಯಲ್ಲಿ ಸುಶೀಲ್‌ ಕುಮಾರ್‌ ಮತ್ತು ಇತರ ಕೆಲವರು ಭಾಗಿಯಾಗಿದ್ದರು ಎಂಬ ಗಂಭೀರ ಆರೋಪವಿತ್ತು.

ಕೊಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸುಶೀಲ್‌ ತಲೆಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು.

× Chat with us