BREAKING NEWS

ವಿಶ್ವ ಸಿಂಹ ದಿನ: ಏಷ್ಯಾದ ಸಿಂಹಗಳಿಗೆ ಭಾರತವೇ ಮುಖ್ಯ ತಾಣ

ಮೈಸೂರು : ಇಂದು ವಿಶ್ವ ಸಿಂಹ ದಿನ. ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಿಂಹವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಲಾಗಿದೆ. ಭಾರತದಲ್ಲಿ ಕಂಡುಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಏಷ್ಯಾಟಿಕ್ ಸಿಂಹ ಕೂಡಾ ಒಂದಾಗಿದೆ.

ಭಾರತದಲ್ಲಿ ಗುಜರಾತ್‌ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಸಿಂಹಗಳಿಲ್ಲ. 2020ರ ಗಣತಿಯ ಪ್ರಕಾರ ಗಿರ್ ಕಾಡುಗಳಲ್ಲಿ ಸುಮಾರು 674 ಸಿಂಹಗಳಿವೆ. ಅವುಗಳನ್ನು ಏಷ್ಯಾಟಿಕ್ ಸಿಂಹಗಳು ಎಂದು ಕರೆಯಲಾಗುತ್ತದೆ. ಈ ಸಿಂಹಗಳ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಇವುಗಳ ಎತ್ತರ ಸುಮಾರು 110 ಸೆಂ.ಮೀ. ಇರುತ್ತದೆ.

ಸಿಂಹಗಳನ್ನು ವನ್ಯಜೀವಿ ಸಂರಕ್ಷಣೆ ಕಾಯಿದೆ-1972 ಶೆಡ್ಯೂಲ್ 1 ರಲ್ಲಿ ಸೇರಿಸಲಾಗಿದೆ. ಐಯುಸಿಎನ್ (International Union for Conservation of Nature)ಸಿಂಹಗಳನ್ನು ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದು, ಸಿಂಹಗಳನ್ನು ಅಳುವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಏಷಿಯಾಟಿಕ್ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ವಯಸ್ಕ ಗಂಡು ಸಿಂಹದ ತೂಕ 160 ರಿಂದ 190 ಕೆ.ಜಿ. ಇದ್ದರೆ ಹೆಣ್ಣು ಸಿಂಹದ ತೂಕ 110 ರಿಂದ 120 ಕೆ.ಜಿ. ಇರುತ್ತದೆ.

ಸಿಂಹಗಳ ರಕ್ಷಣೆ, ಕಾಡಿನ ಉಳಿವಿಗಾಗಿ ಜಾಗೃತಿ ಮೂಡಿಸುವ ಸಲುವಾಗಿ 2013ರಿಂದ ಪ್ರತಿವರ್ಷ ಆಗಸ್ಟ್ 10ರಂದು ವಿಶ್ವ ಸಿಂಹಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಸಿಂಹ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಎಂಬ ದಂಪತಿಗಳು ಆಚರಣೆಗೆ ತಂದರು.

ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಸಿಂಹಗಳು ಕ್ರಮೇಣ ವಿನಾಶದಂಚಿಗೆ ತಲುಪಿದ್ದವು. ಹೀಗಾಗಿ, ಸಿಂಹಗಳ ಸಂತತಿಯ ರಕ್ಷಣೆ ಅತೀ ದೊಡ್ಡ ಜವಾಬ್ದಾರಿ ಕೂಡಾ ಆಗಿತ್ತು. ಪ್ರಸ್ತುತ, ಸಂಶೋಧಕರ ಪ್ರಕಾರ ಭೂಮಿಯ ಮೇಲೆ ಕಳೆದ ನಾಲ್ಕು ದಶಕಗಳಲ್ಲಿ, ಸಿಂಹದ ಸಂಖ್ಯೆಯು 50 ಪ್ರತಿಶತದಷ್ಟು ಕುಸಿದಿದೆ ಎಂದು ಹೇಳಿದ್ದಾರೆ.

ಸಿಂಹಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು

• ಸಿಂಹಗಳ ಘರ್ಜನೆ ಸುಮಾರು 45 ಕಿಲೋಮೀಟರ್ ವರೆಗೆ ಕೇಳಬಲ್ಲದು.
• ಸಾಮಾನ್ಯವಾಗಿ ಸಿಂಹಗಳು ರಾತ್ರಿ ಹೊತ್ತಿನಲ್ಲಿ ಬೇಟೆಯಾಡುತ್ತವೆ. ಅವುಗಳ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
• ಹೆಣ್ಣು ಸಿಂಹಗಳು ಗಂಡು ಸಿಂಹಗಳಿಗಿಂತ ಚಿಕ್ಕದಾಗಿರುತ್ತವೆ.
• ಹೆಣ್ಣು ಸಿಂಹಗಳು ಗಂಡು ಸಿಂಹಗಳಿಗಿಂತ ಬೇಗ ಬೇಟೆಯಾಡುತ್ತವೆ.
• ಸಿಂಹಗಳು ಸಾಮನ್ಯವಾಗಿ ದಟ್ಟವಾದ ಕಾಡುಗಳಿಗಿಂತ , ಕುರುಚಲು ಕಾಡು, ಬಂಡೆಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
• ಮರುಭೂಮಿಯಲ್ಲೂ ಸಹ ಸಿಂಹಗಳು ಬದಕುವ ಸಾಮರ್ಥ್ಯವನ್ನು ಹೊಂದಿವೆ.
• ಸಿಂಹಗಳು ಒಂದೇ ಬಾರಿಗೆ ಸುಮಾರು 40 ಕೆ.ಜಿ.ಯಷ್ಟು ಮಾಂಸವನ್ನು ತಿನ್ನುವ ಸಾಮರ್ಥ್ಯವನ್ನು ಹೊಂದಿವೆ.
• ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ.
• ಗಂಡು ಸಿಂಹಗಳು 225 ಕೆ.ಜಿ ಗಿಂತ ಹೆಚ್ಚು ತೂಗುತ್ತವೆ. ಮತ್ತು ಎಂಟು ಅಡಿ ಉದ್ದದವರೆಗೆ ಬೆಳೆಯುತ್ತವೆ.
• ಗಂಡು ಸಿಂಹಗಳ ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ಕೂದಲುಗಳನ್ನು ಹೊಂದಿರುತ್ತವೆ.
• ಹೆಚ್ಚು ಸಿಂಹಗಳು ಚಿಕ್ಕದಾಗಿರುತ್ತವೆ. ವೇಗವಾಗಿ ಭೇಟೆಯಾಡುತ್ತವೆ. ಜೊತೆಗಾತಿಯರ ಜೊತೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತವೆ.
• ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಹಾಗೂ ಮೃಗಾಲಯದಲ್ಲಿ 25 ವರ್ಷ ಬದಕುತ್ತವೆ.
• ವರದಿಗಳ ಪ್ರಕಾರ ಶತಮಾನದ ಹಿಂದೆ ಆಫ್ರಿಕಾ ಖಂಡದಲ್ಲಿ ಸುಮಾರು 2,00,000 ಕ್ಕೂ ಹೆಚ್ಚು ಸಿಂಹಗಳು ವಾಸಿಸುತ್ತಿದ್ದವು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಸಿಂಹಗಳ ಸಂಖ್ಯೆ ಅಂದಾಜು 30,000 ದಿಂದ ಸುಮಾರು 25,000 ಕ್ಕೆ ಇಳಿದಿದೆ.

andolanait

Recent Posts

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

3 mins ago

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

34 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

1 hour ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

2 hours ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

2 hours ago

ಶುಚಿತ್ವ, ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡ ಜಯದೇವ :ಸಿ.ಎಂ ಪ್ರಶಂಸೆ

ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…

2 hours ago