ನನ್ನ ಸಾವಿಗೆ ಅತ್ತೆಯೇ ಕಾರಣ… ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಸಾವು!

ತಿ.ನರಸೀಪುರ: ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಾಲ್ಲೂಕಿನ ಯಾಕನೂರು ಗ್ರಾಮದ ಕಾವ್ಯಾ (21) ಎಂಬ ಗೃಹಿಣಿ ಸಾವಿಗೀಡಾದವರು.

ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ಕಾವ್ಯ, ತನ್ನ ಸಾವಿಗೆ ಅತ್ತೆಯೇ ಕಾರಣವೆಂದು ಹೇಳಿದ್ದಾರೆ. ಸಾಯುವುದಕ್ಕೂ ಮೊದಲು ಹೇಳಿಕೆ ನೀಡಿರುವ ಕಾವ್ಯಾ, ನನ್ನ ಪತಿ ತಪ್ಪು ಮಾಡಿಲ್ಲ. ಅವರಿಗೆ ಏನೂ ಮಾಡಬೇಡಿ ಎಂದಿದ್ದಾರೆ. ಅವರನ್ನು ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

× Chat with us