ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ!

ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಳಿಗೆರೆಯಲ್ಲಿ ನಡೆದಿದೆ.

ಸುತ್ತೂರು ಸಮೀಪದ ಬಿಳಿಗೆರೆ ನಿವಾಸಿ ಸೌಮ್ಯಾ (26) ನೇಣಿಗೆ ಶರಣಾದ ಗೃಹಿಣಿ.

ಈಕೆಯನ್ನು ಬಿಳಿಗೆರೆಯ ನಿವಾಸಿ ಗೌತಮ್ ಎಂಬಾತನಿಗೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಗೌತಮ್ ಕಾರು ಸರ್ವೀಸ್ ಸ್ಟೇಶನ್ ಇಟ್ಟುಕೊಂಡಿದ್ದ. ವಿವಾಹ ಸಂದರ್ಭದಲ್ಲಿ ಸೌಮ್ಯ ಪೋಷಕರು ನಾಲ್ಕು ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು. ಆದರೂ ಮನೆಯವರಿಗೆ ಇದರಿಂದ ತೃಪ್ತಿಯಾಗಿರಲಿಲ್ಲ. ಮತ್ತೆ ಮತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಪತಿ ಮನೆಯವರ ಕಿರುಕುಳದಿಂದ ಮನನೊಂದ ಸೌಮ್ಯ ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನಲಾಗಿದೆ.

ಸೌಮ್ಯ ಸಾವಿನ ನಂತರ ಆಕೆಯ ಪತಿ, ಅತ್ತೆ ಹಾಗೂ ಮಾವ ನಾಪತ್ತೆಯಾಗಿದ್ದಾರೆ. ಬಿಳಿಗೆರೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಗೌತಮ್ ಮತ್ತು ಆತನ ತಂದೆ-ತಾಯಿಯ ಶೋಧಕಾರ್ಯ ನಡೆಸಿದ್ದಾರೆ.

× Chat with us