ಆರ್ಡರ್‌ ಮಾಡಿದ್ದು ಬರ್ಗರ್‌, ಬಂದಿದ್ದು ಮನುಷ್ಯನ ಬೆರಳು!

ಸಾಂತಾ ಕ್ರೂಜ್ ಡಾ ಲಾ ಸಿಯೆರಾ: ದಕ್ಷಿಣ ಆಮೆರಿಕ ದೇಶ ಬೊಲಿವಿಯಾದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ರೆಸ್ಟೋರೆಂಟ್‌ನಿಂದ ಆಡರ್ ಮಾಡಿ ತರಿಸಿಕೊಂಡ ಬಗರ್‌ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ.

ಆ ಚಿತ್ರಗಳನ್ನು ಮಹಿಳೆ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಜತೆಗೆ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವರು ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾಳೆ.

ಬೊಲಿವಿಯಾದ ಸಾಂತಾ ಕ್ರೂಜ್ ಡಾ ಲಾ ಸಿಯೆರಾ ನಗರದ ಹಾಟ್‌ಬರ್ಗರ್ ಸ್ಟೋರ್‌ನ ಬರ್ಗರ್‌ನಲ್ಲಿ ಹ್ಯುಮನ್ ಫಿಂಗರ್ ಪತ್ತೆಯಾಗಿದೆ.

ಈ ಸಂಬಂಧ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವ ಜಾರ್ಜ್ ಸಿಲ್ವಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿ, ಕೆಲಸದಲ್ಲಿ ವ್ಯಕ್ತಿ ಆಕಸ್ಮಿಕವಾಗಿ ಯಂತ್ರದಿಂದ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಆತನ ಎರಡು ಬೆರಳು ತುಂಡಾಗಿವೆ. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಮಾಂಸವನ್ನು ರುಬ್ಬುವ ಯಂತ್ರವನ್ನು ನಿರ್ವಹಿಸುತ್ತಿದ್ದ ಕೆಲಸಗಾರ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ. ಕೆಲಸಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಇನ್ನೂ ಗುಣಮುಖನಾಗಿಲ್ಲ .

ಮಾಂಸ ರುಬ್ಬುವ ಕಾರ್ಖಾನೆ ಸುಮಾರು ೨೦ ರೆಸ್ಟೋರೆಂಟ್‌ಗಳಿಗೆ ಬರ್ಗರ್‌ಗಳನ್ನು ಪೂರೈಸುತ್ತಿದೆ ದುರಾದೃಷ್ಟವಶಾತ್ ಮನುಷ್ಯನ ಬೆರಳು ಮಹಿಳೆ ಆಡರ್ ಮಾಡಿದ ಬರ್ಗರ್ನಲ್ಲಿ ಸಿಕ್ಕಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ. ಈ ಕೃತ್ಯದ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಸಿಲ್ವಾ ಸ್ಪಷ್ಟಪಡಿಸಿದ್ದಾರೆ.

× Chat with us