ಪ್ರೀತಿಸಿ ವಿವಾಹ: ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

ಮೈಸೂರು: ಮದುವೆಯಾದ ೬ ತಿಂಗಳಿಗೆ ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹೊಸದೊಡ್ಡಿ ಗ್ರಾಮದ ನಿವೇದಿತಾ (೧೯) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ನಗರದ ದಟ್ಟಗಳ್ಳಿಯಲ್ಲಿ ವಾಸವಿದ್ದರು. ಈ ಸಂಬಂಧ ಪತಿ ಧನರಾಜ್ ಮತ್ತು ಮೃತರ ಮಾವ ಲಕ್ಕಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಅದೇ ಗ್ರಾಮದ ಧನರಾಜ್ ಎಂಬವರನ್ನು ಪ್ರೀತಿಸಿದ್ದರು. ಅಂತಿಮವಾಗಿ ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿ ಮದುವೆ ಮಾಡಿದ್ದರು. ಈ ವೇಳೆ ನಿವೇದಿತಾ ಮನೆಯವರು ವರದಕ್ಷಿಣೆಯಾಗಿ ೮೫ ಗ್ರಾಂ ಚಿನ್ನವನ್ನು ನೀಡಿದ್ದರು. ನಗರದಲ್ಲಿ ಜ್ಯೋತಿಷ ಹೇಳಿಕೊಂಡು ಇದ್ದ ಧನರಾಜ್ ಇತ್ತೀಚಿಗೆ ತವರಿನಿಂದ ಮತ್ತಷ್ಟು ಚಿನ್ನವನ್ನು ತರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ನಿವೇದಿತಾ ಭಾನುವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಅಕ್ಕ ಕುವೆಂಪುನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

× Chat with us