ಕೋವಿಡ್‌ನಿಂದ ಬೆಳಿಗ್ಗೆ ಪತಿ, ಹೃದಯಾಘಾತದಿಂದ ಸಂಜೆ ಪತ್ನಿ ಸಾವು

ವಿಜಯನಗರ: ಕೋವಿಡ್‌ನಿಂದ ಪತಿ ಸಾವಿಗೀಡಾದ ವಿಷಯ ಕೇಳಿ ಹೃದಯಾಘಾತದಿಂದ ಪತ್ನಿ ಮೃತಪಟ್ಟ ಘಟನೆ ಕೂಡ್ಲಿಗಿ ತಾಲ್ಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಮೇಶ್ವರಪ್ಪ (65), ವಾಮದೇವಮ್ಮ (60) ಮೃತ ದಂಪತಿ.

ಕೋವಿಡ್‌ನಿಂದ ಪರಮೇಶ್ವರಪ್ಪ ಅವರು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಿಧನರಾದ ಪತಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದಿದ್ದ ಪತ್ನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

× Chat with us