2050ರ ವೇಳೆಗೆ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಶ್ರವಣ ಸಮಸ್ಯೆ: ಡಬ್ಲ್ಯೂಎಚ್‌ಒ ಎಚ್ಚರಿಕೆ

ಜಿನೆವಾ: 2050ರ ವೇಳೆಗೆ ವಿಶ್ವದ ಪ್ರತಿ ನಾಲ್ಕು ಮಂದಿಯಲ್ಲಿ ಒಬ್ಬರಿಗೆ ಶ್ರವಣ ಸಮಸ್ಯೆಗಳಿಂದ ಬಳಲುತ್ತಾರೆ. ಶ್ರವಣ ಸಮಸ್ಯೆಗೆ ಚಿಕಿತ್ಸೆ ಹಾಗೂ ಮುಂಜಾಗ್ರತೆ ಕ್ರಮವಾಗಿ ಹೆಚ್ಚಿನ ಹೂಡಿಕೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

ಶ್ರವಣ ಸಮಸ್ಯೆ ಕುರಿತು ಜಾಗತಿಕ ವರದಿಯು ʻಸೋಂಕುಗಳು, ರೋಗಗಳು, ಹುಟ್ಟುವಾಗಿನ ದೋಷ, ಶಬ್ದಮಾಲಿನ್ಯ, ಜೀವನಶೈಲಿ ಬದಲಾವಣೆಯಿಂದಾಗಿ ಶ್ರವಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆʼ ಎಂದು ಹೇಳಿದೆ.

ಈ ಸಮಸ್ಯೆ ನಿವಾರಣೆಗಾಗಿ ಪ್ರತಿ ವರ್ಷ ಟ್ರಿಲಿಯನ್‌ ಡಾಲರ್‌ ಹಣವನ್ನು ಮೀಸಲಿಡಲಾಗುತ್ತಿದೆ. ಆದರೆ, ಶ್ರವಣ ಸಮಸ್ಯೆ ಪರಿಹರಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಪ್ರಸ್ತುತ ನಾಲ್ವರಲ್ಲಿ ಒಬ್ಬರಿಗೆ ಶ್ರವಣ ಸಮಸ್ಯೆ ಇದೆ. ಇದು ಮುಂದಿನ ಮೂರು ದಶಕಗಳಲ್ಲಿ 1.5ರಿಂದ 2.5 ಬಿಲಿಯನ್‌ ಜನಸಂಖ್ಯೆಗೆ ಶ್ರವಣ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 2019ರಲ್ಲಿ 1.6 ಮಿಲಿಯನ್‌ ಮಂದಿಗೆ ಈ ಸಮಸ್ಯೆ ಇತ್ತು.

× Chat with us