ಬೆಂಗಳೂರು: ಯಡಿಯೂರಪ್ಪನವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕ ಹಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ.
ಬಡವರ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಕು ಅಂತಿದ್ದಾರೆ. ಅಕ್ಕಿ ಇಟ್ಟುಕೊಂಡು ಕೊಡುತ್ತಿಲ್ಲ. ಖಾಸಗಿಯವರಿಗೆ ಕೊಡುತ್ತಿದ್ದಾರೆ. ನಾವು ಪುಕ್ಕಟ್ಟೆ ಕೇಳುತ್ತಿಲ್ಲ ಹಣ ಕೊಡುತ್ತೇವೆ ಅಂದರೂ ಕೊಡುತ್ತಿಲ್ಲ. ಯಾವ ಉದ್ದೇಶದಿಂದ ಕೊಡುತ್ತಿಲ್ಲ. ಇವರನ್ನ ಬಡವರ ವಿರೋಧಿ ಅಂತ ಕರೆಯಬೇಕಾ ಅಥಾವ ಬಡವರ ಪರ ಅಂತ ಕರೆಯಬೇಕಾ. ಜನರು ಯೋಜನೆ ಮಾಡಬೇಕು ಎಂದರು.
ಜುಲೈ 1 ರಿಂದ ವಿದ್ಯುತ್ ಕೊಡುತ್ತಿದ್ದೇವೆ. ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೆವು, ಆದರೆ ಅಕ್ಕಿ ಸಿಗುತ್ತಿಲ್ಲ. ತೆಲಂಗಾಣ ದವರು ಭತ್ತ ಕೊಡುತ್ತೇವೆ, ಛತ್ತೀಸಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಪಂಜಾಬ್ ನವರು ನವೆಂಬರ್ ನಿಂದ ಕೊಡುತ್ತೇವೆ ಅಂತಾರೆ. ಹೀಗಾಗಿ NCCF ಕೇಂದ್ರಿಯ ಭಂಡಾರ, ನಫೆಡ್ ನಿಂದ ಕೊಟೆಷನ್ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣವನ್ನ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.
ಓಪನ್ ಮಾರ್ಕೆಟ್ ನಿಂದ ಖರೀದಿ ಮಾಡಬೇಕಾದರೆ, ಟೆಂಡರ್ ಕರೆಯಬೇಕಾಗುತ್ತೆ ಅದಕ್ಕೆ ಸಮಯ ಆಗುತ್ತದೆ. ರಾಗಿ, ಜೋಳ ಎರಡೆರಡು ಕೆ.ಜಿ. ಕೊಡಬಹುದು, ಆದರೆ ಇನ್ನು 3 ಕೆ.ಜಿ. ಅಕ್ಕಿ ಕೊಡಬೇಕಲ್ಲ, ಅದೇ ಸಮಸ್ಯೆ ಎಂದರು. ಹಾಲಿನ ದರ ಏರಿಕೆ ವಿಚಾರ ಸಂಬಂಧಿಸಿ ಚರ್ಚೆ ಮಾಡಿ ಪರಿಶೀಲನೆ ನಡೆಸುತ್ತೇವೆ ಎಂದು ಸಿಎಂ ಹೇಳಿದರು.
ನಿನ್ನೆಯಿಂದ ಮಳೆ ಬರುತ್ತಿದೆ, ವ್ಯಾಪಕವಾಗಿ ಬರುತ್ತಿಲ್ಲ ಅಷ್ಟೇ. ಒಂದು ವೇಳೆ ಸಮಸ್ಯೆಯಾದರೆ, ಎಲ್ಲ ಸಮಸ್ಯೆಯನ್ನ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ. ಮಳೆ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದೇವೆ. ಬಿತ್ತನೆ ಕೆಲವಕಡೆ ಶುರುವಾಗಿದೆ ಕೆಲವುಕಡೆಯಾಗಿಲ್ಲ.ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಡಿಸಿ ಗಳಿಗೆ ಸೂಚಿಸಿದ್ದೇನೆ. ಎರಡು ಬಾರಿ ಡಿಸಿಗಳ ಸಭೆ ನಡೆಸಿದ್ದೇನೆ. ಮಳೆ ಯಾವಾಗಲೆ ಬಂದರೂ ಬಿತ್ತನೆಗೆ ಕ್ರಮ ಕೈಗೊಂಡಿದ್ದೇವೆ. ಬಿತ್ತನೆ ಬೀಜ, ಗೊಬ್ಬರ ಸಿದ್ದವಾಗಿಟ್ಟುಕೊಳ್ಳುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದೇನೆ ಎಂದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…