ಲಕ್ಷಾಂತರ ರೂ. ಮೌಲ್ಯದ ಗಾಂಜಾ: ಅಬಕಾರಿ ಅಧಿಕಾರಿಗಳ ವಶಕ್ಕೆ

ಗದಗ : ಗದಗದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಅಬಕಾರಿ ಇಲಾಖೆ ಪೋಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಗದಗ ತಾಲ್ಲೂಕಿನ ಮದಗಾನುರು, ಬೆಳವಡ ಗ್ರಾಮದ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಾದ ಹುಚ್ಚಪ್ಪ, ಬಸಪ್ಪ ತಳ್ವಾರ್‌, ಆಯ್ಯನಗೌಡ, ರಾಮೇಗೌಡ, ಮತ್ತು ತಪ್ಪನಗೌಡ, ನಿಂಗನಗೌಡ, ಇನಾಮತಿ ರವರಿಗೆ ಸೇರಿದ ಕೃಷಿ ಹೊಲದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಂದಾಜು 245000 ಮೌಲ್ಯದ 25 ಕೆ.ಜಿ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು NDPS ಕಾಯ್ದೆ ಅಡಿಯಲ್ಲಿ ಗದಗ ಉಪ ವಿಭಾಗದ ಹಾಗೂ ಗದಗ ವಲಯದ ಅಧೀಕಾರಿಗಳು 3 ಪ್ರತ್ಯೇಕ ಪ್ರಕರಣಗಲನ್ನು ದಾಖಲಿಸಿಕೊಂಡಿದ್ದಾರೆ.

× Chat with us