ಮನೆ, ಮಠ ಬಿಟ್ಟು ಬಿಜೆಪಿ ಸೇರುವವರ‍್ಯಾರೂ ಉದ್ಧಾರ ಆಗಲ್ಲ: ಬಿಜೆಪಿ ಕಾರ್ಯಕರ್ತನ ಅಳಲು

ಮೈಸೂರು: ಬಿಜೆಪಿಯಲ್ಲಿ ಉದ್ಧಾರ ಆಗುತ್ತೇವೆ ಎಂದು ಮನೆ, ಮಠ ಬಿಟ್ಟು ಯಾರೂ ಬರಬೇಡಿ. ಹಾಗೆ ಬಂದವರು ಯಾರೂ ಉದ್ಧಾರ ಆಗುವುದಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ವೃಷಬೇಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾತನಾಡಿ, ನಾನು ಕೂಡ 30 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಲಿಲ್ಲ, ಒಂದು ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಿಲ್ಲ. ಪ್ರಭಾವಿಗಳು ತಮಗೆ ಬೇಕಾದವರಿಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಹಾಳಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

30 ವರ್ಷದಿಂದ ಪಕ್ಷಕ್ಕಾಗಿ ದುಡಿದು ಸಾಕಾಗಿದೆ. ನನ್ನ ನಂತರ ಬಂದವರೆಲ್ಲ ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ. ಬಂಗಲೆ ಕಟ್ಟಿ, ಕಾರಿನಲ್ಲಿ ಓಡಾಡುತ್ತಿದ್ದಾರೆ. ನಾನು ನಿಯತ್ತಾಗಿ ಹೀಗೆ ಉಳಿದುಕೊಂಡಿದ್ದೇನೆ. ಇದನ್ನು ನಾಯಕರಿಗೆ ಹೇಳಿದರೆ ನಮ್ಮನ್ನು ಈಚೆಗೆ ತಳ್ಳುತ್ತಾರೆ. ಈ ಪಕ್ಷದಲ್ಲಿ ಸಣ್ಣಪುಟ್ಟ ಕಾರ್ಯಕರ್ತರು ಯಾರೂ ಬದುಕಲು ಸಾಧ್ಯವಿಲ್ಲ. ದುಡ್ಡಿದ್ದವರಿಗೆ ಅವಕಾಶ ಇಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

× Chat with us