ಕಲಬುರಗಿ : ಕಾಂಗ್ರೆಸ್ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಇಟ್ಟುಕೊಂಡಿಲ್ಲ. ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ. ಚಂದ್ರಯಾನದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗದವರು. ಅಧಿಕಾರ ಬಂದಾಗ ಕೆಲವೇ ಸಮುದಾಯ ಅಧಿಕಾರ ಅನುಭವಿಸುತ್ತಿದೆ. ಎಲ್ಲಾ ವರ್ಗದವರಿಗೂ ಅಧಿಕಾರ ಸಿಗುವಂತಾಗಲಿ ಎಂದು ವಿಧಾನ್ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಬಂದ ಮೇಲೆ ಘೋಷಣೆಗಳಿಗೆ ಏನು ಕಡಿಮೆ ಇಲ್ಲ. ರಾಷ್ಟ್ರದಲ್ಲಿನ ವೈವಿದ್ಯತೆಯನ್ನು ಹಾಳು ಮಾಡುತ್ತಿದ್ದಾರೆ. ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ. ಮುಂದೆ ಒನ್ ನೇಷನ್ ಒನ್ ಲೀಡರ್ ಅಂದರೂ ಅನ್ನಬಹುದು. ದೇಶದಲ್ಲಿ ಚುನಾವಣೆಯನ್ನು ಇಡಿ ಬಳಸದೆ ನಡೆಸಬೇಕಿದೆ ಎಂದರು.
ಇನ್ನು ತಮಗೆ ಅವರಿಗೆ ಮಂತ್ರಿಸ್ಥಾನ ಸಿಗದೆ ಇರುವ ವಿಚಾರವಾಗಿ ಮಾತನಾಡಿದ ಅವರು ನಾನು ಪಕ್ಕಾ ಕಾಂಗ್ರೆಸ್ನವನು. ನನ್ನ ಹೋರಾಟ ನನ್ನ ಮಂತ್ರಿ ಮಾಡಿಲ್ಲ ಅಂತ ಅಲ್ಲ. ಸಣ್ಣ ಸಮುದಾಯಗಳಿಗೆ ಅವಕಾಶ ಸಿಗಬೇಕು ಅನ್ನೋದು ನಮ್ಮ ಹೋರಾಟ. ಅದಕ್ಕಾಗಿ ನಾನು ಬೀದಿಗಳಿದು ಹೋರಾಟಕ್ಕೂ ಕೂಡಾ ಸಿದ್ದನಿದ್ದೇನೆ. ಇಂದಿರಾಗಾಂಧಿ ಅವರನ್ನು ನೋಡಿ ಇಂದಿನವರು ಕಲಿಬೇಕು. ಜವಾನನಿಂದ ದಿವಾನವರಗೆ ಒಂದೇ ಜಾತಿಯವರನ್ನು ಹಾಕಿಕೊಳ್ಳಲು ಆಗಲ್ಲ. ಎಲ್ಲ ವರ್ಗದವರಿಗೂ ಅವಕಾಶ ನೀಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವರಾಜ್ ರಾಯರೆಡ್ಡಿ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು ರಾಯರೆಡ್ಡಿ, ಸಿದ್ದರಾಮಯ್ಯನವರ ಖಾಸಗಿ ಸ್ನೇಹಿತರು. ಹೀಗಾಗಿ ಅವರ ಪತ್ರದ ಬಗ್ಗೆ ಅವರಿಗೇ ಕೇಳಬೇಕು. ಬಿ.ಎಲ್ ಸಂತೋಷ. ಆಪರೇಷನ್ ಕಮಲದಲ್ಲಿ ಡಾಕ್ಟರೇಟ್ ತಗೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…