ಟೆಲ್ ಅವೀವ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರ ಹಮಾಸ್ ನಡುವಿನ ಸಂಘರ್ಷ ಏಳನೇ ದಿನವೂ ಮುಂದುವರಿದಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಹಮಾಸ್ ಹೋರಾಟಗಾರರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದೆ.
ವೀಡಿಯೊದಲ್ಲಿ, ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ಸೈನಿಕರು ಕಾಂಪೌಂಡ್‌ಗೆ ಪ್ರವೇಶಿಸಿ ಹಮಾಸ್ ಭಯೋತ್ಪಾದಕರು ಒತ್ತೆಯಾಳಾಗಿದ್ದ ಜನರನ್ನು ರಕ್ಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಾಡಿ ಕ್ಯಾಮರಾ ದೃಶ್ಯಗಳನ್ನು ಹಂಚಿಕೊಂಡಿರುವ IDF, ‘ಇಸ್ರೇಲಿ ಸೇನೆಯು ಗಾಜಾ ಭದ್ರತಾ ಬೇಲಿ ಬಳಿ ಕಾರ್ಯಾಚರಣೆ ನಡೆಸಿತು. ಈ ಅವಧಿಯಲ್ಲಿ, ಭಯೋತ್ಪಾದಕರ ಒತ್ತೆಯಾಳಾಗಿದ್ದ 250 ಜನರನ್ನು ಸೇನೆಯು ಸುರಕ್ಷಿತವಾಗಿ ರಕ್ಷಿಸಿದ್ದು 60 ಹಮಾಸ್ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.
https://x.com/idfonline/status/1712513580132704360?s=20
ಅಲ್ಲದೆ ಕಾರ್ಯಾಚರಣೆ ವೇಳೆ 26 ಮಂದಿಯನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು ಇದರಲ್ಲಿ ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಅಬು ಅಲಿ ಕೂಡ ಸೇರಿದ್ದಾನೆ. ವಿಡಿಯೋದಲ್ಲಿ, ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಕಟ್ಟಡವನ್ನು ಪತ್ತೆಹಚ್ಚುವ ಮೊದಲು ಡಜನ್‌ಗಿಂತಲೂ ಹೆಚ್ಚು ಸೈನಿಕರು ಹಲವಾರು ಕಟ್ಟಡಗಳ ಒಳಗೆ ಹೋಗುವುದನ್ನು ಕಾಣಬಹುದು. ಹಮಾಸ್ ಗಡಿ ಪೋಸ್ಟ್‌ನಲ್ಲಿ ಸೈನಿಕರು ಹಿಂದಿನಿಂದ ಗುಂಡು ಹಾರಿಸುವುದು ಮತ್ತು ಗ್ರೆನೇಡ್‌ಗಳನ್ನು ಎಸೆಯುವುದು ಕಂಡುಬಂದಿದೆ.
ವೀಡಿಯೋದಲ್ಲಿ ಹಿರಿಯ ಅಧಿಕಾರಿಯೊಬ್ಬರು ಸೈನಿಕರಿಗೆ ಸೂಚನೆ ನೀಡುತ್ತಿರುವುದನ್ನು ಕೇಳಬಹುದು. ವೀಡಿಯೊದ ಒಂದು ಹಂತದಲ್ಲಿ, ಸೈನಿಕನೊಬ್ಬ ಗಾಯಗೊಂಡ ಭಯೋತ್ಪಾದಕನನ್ನು, ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ ಭಯೋತ್ಪಾದಕನನ್ನು ಬಂಕರ್‌ನಿಂದ ಹೊರಗೆ ತೆಗೆದುಕೊಂಡು ಗೋಡೆಯ ಕಡೆಗೆ ಹಿಡಿದಿರುವುದನ್ನು ಕಾಣಬಹುದು. ಸೈನಿಕರು ನಂತರ ಬಂಕರ್‌ನೊಳಗೆ ಹೋಗಿ ಒತ್ತೆಯಾಳುಗಳನ್ನು ಉಳಿಸಲು ಇಲ್ಲಿಗೆ ಬಂದಿರುವುದಾಗಿ ಭರವಸೆ ನೀಡಿದ್ದು ಅವರಿಗೆ ಏನಾದರೂ ‘ಪ್ರಥಮ ಚಿಕಿತ್ಸೆ’ ಅಗತ್ಯವಿದೆಯೇ ಎಂದು ಕೇಳುತ್ತಾರೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…