ಕೆಆರ್‌ಎಸ್‌ ಅಣೆಕಟ್ಟೆ: ಮೆಟ್ಟಿಲಿನ ಗೋಡೆ ಕಲ್ಲುಗಳು ಕುಸಿತ!

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ವಿವಾದ ತಲೆದೋರಿರುವ ಬೆನ್ನಲ್ಲೇ ಇದೀಗ ಕೆಆರ್‌ಎಸ್ ಡ್ಯಾಂ ಮೆಟ್ಟಿಲಿನ ಗೋಡೆಯ ಕಲ್ಲುಗಳು ಕುಸಿದಿವೆ.

ಕೆಆರ್‌ಎಸ್‌ನ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆ ಕಡೆಗೆ ತೆರಳಲು ನಿರ್ಮಿಸಿದ್ದ 80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿದಿವೆ.

ಮೆಟ್ಟಿಲುಗಳನ್ನು ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಏಕಾಏಕಿ ಕುಸಿದಿದ್ದು, ಕಾವೇರಿ ನೀರಾವರಿ ನಿಗಮದ ಎಸ್.ಇ.ವಿಜಯ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಕಲ್ಲು ಕುಸಿದಿರುವ ಬಗ್ಗೆ ಆತಂಕ ಬೇಡ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

× Chat with us