ಟಿ-20 ವಿಶ್ವಕಪ್‌ ನಂತರ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆಗೆ ನಿರ್ಧಾರ

ಹೊಸದಿಲ್ಲಿ: ಟಿ-20 ವಿಶ್ವಕಪ್‌ ನಂತರ ಟಿ-20 ಮಾದರಿಯ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ರಾಜೀನಾಮೆ ನೀಡಲು ನಿರ್ಧಾರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೊಹ್ಲಿ, ಈ ಸಂಬಂಧ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ ಷಾ ಜೊತೆ ಮಾತನಾಡಿದ್ದೇನೆ. ರಾಜೀನಾಮೆ ನಂತರವೂ ಕ್ರಿಕೆಟ್‌ ತಂಡದ ಆಟಗಾರನಾಗಿ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇನೆ. ಅಲ್ಲದೇ, ನನ್ನ ಹಿತೈಷಿಗಳು ರವಿ ಅಣ್ಣ, ರೋಹಿತ್‌ ಶರ್ಮ ಅವರು ಸೇರಿದಂತೆ ನನ್ನ ಬೆಳವಣಿಗೆಗೆ ಸಹಕರಿಸಿದವರೊಂದಿಗೆ ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದೇನೆ.

8-9 ವರ್ಷಗಳ ಕಾಲ ದೇಶದ ಪರವಾಗಿ ಆಟವಾಡಿದ್ದೇನೆ. ಮೂರು ಮಾದರಿಯ ಕ್ರಿಕೆಟ್‌ (ಟೆಸ್ಟ್‌, ಏಕದಿನ, ಟಿ-20) ಆಟವನ್ನು ಆಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

× Chat with us