ರಹಾನೆ ನೇತೃತ್ವದ ಟೀಮ್‌ ಇಂಡಿಯಾ ಪ್ರದರ್ಶನ ಖುಷಿ ತಂದಿದೆ: ಕೊಹ್ಲಿ ಟ್ವೀಟ್‌

ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮೊದಲನೇ ದಿನದ ಹಂಗಾಮಿ ನಾಯಕ ಅಂಜಿಕ್ಯಾ ರಹಾನೆ ನೇತೃತ್ವದ ಟೀಂ ಇಂಡಿಯಾವನ್ನು ತಂಡದ ಕಾಯಂ ನಾಯಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಬಾರ್ಡರ್-ಗಾವಸ್ಕರ್ ಸರಣಿಯ ೨ನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ವಾಡಿದ ಆಸ್ಟ್ರೇಲಿಯಾ ತಂಡದ ಮೇಲೆ ಪ್ರವಾಸಿ ತಂಡದ ಬೌಲರ್‌ಗಳು ಸವಾರಿ ನಡೆಸಿದ ಬಳಿಕ ವಿರಾಟ್ ಕೊಹ್ಲಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲನೇ ದಿನ ನಾವು ಮುನ್ನಡೆ ಸಾಧಿಸಿದ್ದೇವೆ. ಬೌಲರ್‌ಗಳಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ ಹಾಗೂ ಅತ್ಯುತ್ತಮವಾಗಿ ಮೊದಲನೇ ದಿನವನ್ನು ಮುಗಿಸಿದ್ದೇವೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ವಾಡಿದ್ದಾರೆ.

× Chat with us