ವೈರಾಣು ಜ್ವರ : 42 ಮಕ್ಕಳೂ ಸೇರಿ 50 ಮಂದಿ ಸಾವು

ಆಗ್ರಾ : ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಒಂದು ವಾರದಲ್ಲಿ ನಿಗೂಢ ಜ್ವರದಿಂದ 42 ಮಕ್ಕಳು ಸೇರಿದಂತೆ 50ಮಂದಿ ಬಲಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಯ ಪ್ರಗತಿ ಮತ್ತು ಡೆಂಗ್ಯೂ ತಡೆಗಟ್ಟುವ ಕ್ರಮಗಳನ್ನು ಪರಿಶೀಲಿಸಿದರು.

ಅನೇಕ ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವಾರದಲ್ಲಿ ಫಿರೋಜಾಬಾದ್ನಲ್ಲಿ ಕನಿಷ್ಠ 50ಸಾವುಗಳು ಸಂಭವಿಸಿವೆ. ಪ್ರಾಥಮಿಕ ಕಾರಣ ಡೆಂಗ್ಯೂ ಎಂದು ತಿಳಿದುಬಂದಿದೆ. ಆದರೂ ಇತರ ಕಾರಣಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಆಗ್ರಾ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ಹೇಳಿದ್ದಾರೆ.

ಆದಾಗ್ಯೂ, ಈ ಸಾವುಗಳಿಗೆ ಸ್ಕ್ರಬ್ ಟೈಸ್ ಕಾರಣವೆಂದು ಹೇಳಲಾಗುತ್ತದೆ, ಇದು ಡೆಂಗ್ಯೂನಂತೆ ಹರಡುವ ರೋಗವಾಗಿದೆ, ಆದರೆ ಇದು ವೈರಸ್‌ನಿಂದಲ್ಲ, ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಡೆಂಗ್ಯೂ ಪ್ರಕರಣಗಳು ಸುಮಾರು ಎಂಟು ಅಥವಾ ಒಂಬತ್ತು ಕಾಲೋನಿಗಳಲ್ಲಿ ವರದಿಯಾಗಿವೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಹರಡದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

× Chat with us