ಕಷ್ಟದ ಮನೆಗೆ ನೆರವಿನ ಹಸ್ತ

ಪಾಂಡವಪುರ: ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಗ್ರಾಮಸ್ಥರು ಗ್ರಾಮಾಭಿವೃದ್ಧಿ ಸೇವಾ ಸಮಿತಿಯೊಂದನ್ನು ಮಾಡಿಕೊಂಡು, ಗ್ರಾಮದಲ್ಲಿ ಯಾರೇ ಮರಣ ಹೊಂದಿದರೂ ಅವರ ಅಂತ್ಯಕ್ರಿಯೆಗೆ ೫ ಸಾವಿರ ರೂ. ನೀಡುವುದಾಗಿ ತೀರ್ಮಾನಿಸಿದ್ದಾರೆ.

ಅಂತೆೆಯೇ  ಇಂದು ಗ್ರಾಮದಲ್ಲಿ ಮೃತಪಟ್ಟ ಗ್ರಾಮದ ಸಣ್ಣಮ್ಮ ಅವರ ಕುಟುಂಬಕ್ಕೆ ೫ ಸಾವಿರದ ಒಂದು ರೂ.ಗಳನ್ನು ನೀಡುವ ಮೂಲಕ ಸಮಿತಿ ಮಾನವೀಯತೆ ಮರೆಯಿತು.

ಸಮಿತಿ ಅಧ್ಯಕ್ಷ ಕೆ.ಎಸ್.ಮಹಾದೇವಗೌಡ ಮಾತನಾಡಿ, ನಾವು ನೀಡುತ್ತಿರುವ ಹಣ ನಿಮಗೆ ಯಾವುದಕ್ಕೂ ಸಾಕಾಗುವುದಿಲ್ಲ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ದೃಷ್ಟಿಯಿಂದ ಸಮಿತಿಯಿಂದ ಅಳಿಲು ಸೇವೆ ಮಾಡಲಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರೂ ಇದರ ಉಪೋಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಗ್ರಾಮದ ಹಿರಿಯ ಮುಖಂಡರು ಇದರ ಮುಂದಾಳತ್ವ ವಹಿಸಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಲಕ್ಷ್ಮೇಗೌಡ, ಪುಟ್ಟಸಿದ್ದೇಗೌಡ, ಕುನ್ನಮರ ಚಂದ್ರೇಗೌಡ, ಶ್ರೀಕಂಠ, ದೇವರಾಜು, ಶಂಕರೇಗೌಡ, ಸ್ವಾಮೀಗೌಡ, ಬಿ.ಟಿ.ಶಿವಣ್ಣ, ಕೃಷ್ಣೇಗೌಡ, ಶಿವಣ್ಣೇಗೌಡ ಹಾಗೂ ಕಾರ್ಯದರ್ಶಿ ಮಹಾದೇವು ಹಾಜರಿದ್ದರು.

 

× Chat with us