ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಸೆಣಸಾಡಿದ ಕರ್ನಾಟಕ 52 ರನ್‌ಗಳ ಗೆಲುವನ್ನು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಕರ್ನಾಟಕ ಈ ಗೆಲುವಿನೊಂದಿಗೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿ ಎದುರಾಳಿ ಉತ್ತರಾಖಂಡ ತಂಡಕ್ಕೆ ಗೆಲ್ಲಲು 285 ರನ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ಉತ್ತರಾಖಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು.
ಕರ್ನಾಟಕ ಇನ್ನಿಂಗ್ಸ್: ಕರ್ನಾಟಕದ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್ ಸಮರ್ಥ್ 11 ರನ್ ಕಲೆ ಹಾಕಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಮಯಾಂಕ್ ಅಗರ್ವಾಲ್ ಶೂನ್ಯ ಸುತ್ತಿದರು. ಹೀಗೆ ಆರಂಭದಲ್ಲಿಯೇ ಆಘಾತ ಅನುಭವಿಸಿದ ಕರ್ನಾಟಕ ತಂಡಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ನಿಕಿನ್ ಜೋಸ್ ಆಸರೆಯಾದರು. ದೇವದತ್ ಪಡಿಕ್ಕಲ್ 122 ಎಸೆತಗಳಲ್ಲಿ 117 ರನ್ ಬಾರಿಸಿದರೆ, ನಿಕಿನ್ ಜೋಸ್ 82 ಎಸೆತಗಳಲ್ಲಿ 72 ರನ್ ಬಾರಿಸಿದರು. ಇನ್ನುಳಿದಂತೆ ಮನೀಶ್ ಪಾಂಡೆ 40 ಎಸೆತಗಳಲ್ಲಿ 56 ರನ್, ಕೃಷ್ಣಪ್ಪ ಗೌತಮ್ 4, ಶರತ್ ಬಿಆರ್ 6 ಹಾಗೂ ಜಗದೀಶ ಸುಚಿತ್ ಅಜೇಯ 7 ರನ್ ಬಾರಿಸಿದರು.
ಉತ್ತರಾಖಂಡದ ಪರ ಅಗ್ರಿಮ್ ತಿವಾರಿ 3 ವಿಕೆಟ್ ಪಡೆದರೆ, ರಜನ್ ಕುಮಾರ್ 2 ವಿಕೆಟ್ ಹಾಗೂ ದೀಪಕ್ ಧಪೋಲಾ 1 ವಿಕೆಟ್ ಪಡೆದರು.
ಉತ್ತರಾಖಂಡ ಇನ್ನಿಂಗ್ಸ್: ತಂಡದ ಪರ ಯುವರಾಜ್ ಚೌಧರಿ 13, ಅವ್ನೀಸ್ ಸುಧಾ ಶೂನ್ಯ, ನಾಯಕ ಜೀವನ್‌ಜೋತ್ ಸಿಂಗ್ 46, ದಿಕ್ಷಾಂಶು ನೇಗಿ 21, ಸ್ವಪ್ನಿಲ್ ಸಿಂಗ್ 13, ಆದಿತ್ಯ ತಾರೆ 17, ಕುನಾಲ್ ಚಾಂಡೆಲಾ 98, ಹಿಮಾನ್ಷು ಬಿಷ್ತ್ 1, ಅಗ್ರಿಮ್ ತಿವಾರಿ ಶೂನ್ಯ, ರಾಜನ್ ಕುಮಾರ್ ಅಜೇಯ 1 ಹಾಗೂ ದೀಪಕ್ ಧಪೊಲಾ ಅಜೇಯ 1 ರನ್ ಕಲೆ ಹಾಕಿದರು.
ಕರ್ನಾಟಕದ ಪರ 10 ಓವರ್ ಮಾಡಿ ಕೇವಲ 30 ರನ್ ನೀಡಿ 2 ಮೇಡನ್ ಓವರ್ ಜತೆಗೆ 4 ವಿಕೆಟ್ ಪಡೆದ ವಾಸುಕಿ ಕೌಶಿಕ್ ಉತ್ತರಾಖಂಡ ತಂಡದ ಪ್ರಮುಖ ಆಟಗಾರರ ವಿಕೆಟ್ ಪಡೆದರು. ಇನ್ನುಳಿದಂತೆ ವಿದ್ವತ್ ಕಾವೇರಪ್ಪ 2 ವಿಕೆಟ್, ವಿಜಯ್ ಕುಮಾರ್ ವೈಶಾಖ್, ಕೃಷ್ಣಪ್ಪ ಗೌತಮ್ ಹಾಗೂ ಜಗದೀಶ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್ ಆದ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…