ಐಪಿಎಲ್‌ಗೂ ಕೊರೊನಾ ಕರಿನೆರಳು: ವಾಂಖೆಡೆ ಕ್ರೀಡಾಂಗಣದ 8 ಸಿಬ್ಬಂದಿಗೆ ಕೊರೊನಾ

ಹೊಸದಿಲ್ಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ-20 (ಐಪಿಎಲ್)‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ 8 ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ.

ಐಪಿಎಲ್‌ನ 14ನೇ ಆವೃತ್ತಿಯ ಹತ್ತು ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಎಲ್ಲಾ ಪಂದ್ಯಗಳು ಏಪ್ರಿಲ್ 10 ರಿಂದ 25 ರವರೆಗೆ ನಡೆಯಲಿವೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಬಿಸಿಸಿಐನ ಕಾಳಜಿಯೂ ಹೆಚ್ಚಾಗುತ್ತದೆ.

ʻಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಐಪಿಎಲ್‌ ಆಯೋಜಕರು ತಿಳಿಸಿದ್ದಾರೆ.

× Chat with us