ಯುಎಸ್ ಟೆನಿಸ್: ಬ್ರಿಟನ್‌ನ 18ರ ಯುವ ತಾರೆ ಎಮ್ಮಾಗೆ ಮಹಿಳಾ ಸಿಂಗಲ್ಸ್ ಕಿರೀಟ

ನ್ಯೂಯಾರ್ಕ್: ಬ್ರಿಟನ್‌ನ 18 ವರ್ಷದ ಯುವ ತಾರೆ ಎಮ್ಮಾ ರಾಡುಕಾನು ಪ್ರತಿಷ್ಠಿತ ಯುಎಸ್ ಒಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೆನಿಸ್‌ನಲ್ಲಿ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್ ಮತ್ತು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಇವರದ್ದು.

ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಎಮ್ಮಾ ಕೆನಡಾದ ಲೇಲಾ ಫನಾಂಡೀಸ್ ವಿರುದ್ಧ 6-4, 6-3ರ ನೇರ ಅಂತರದಲ್ಲಿ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಟ್ಟರು. 19 ವರ್ಷದ ಲೇಲಾ ಮಾಜಿ ಚಾಂಪಿಯನ್ ಜಪಾನ್‌ನ ನವೋಮಿ ಒಸಾಕಾ ಸೇರಿದಂತೆ ಪ್ರಮುಖ ಆಟಗಾರರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. 150ನೇ ಕ್ರಮಾಂಕದ ಆಟಗಾರ್ತಿ ಅಮೆರಿಕ ಒಪನ್ ಟೆನಿಸ್ ಪಂದ್ಯದಲ್ಲಿ ಒಂದೇ ಒಂದು ಸೆಟ್ ಬಿಟ್ಟುಕೊಡದೇ ಗ್ರ್ಯಾನ್ ಸ್ಲಾಮ್ ಗೆಲ್ಲುವು ಮೂಲಕ ಅಚ್ಚರಿ ಮೂಡಿಸಿದರು. 53 ವರ್ಷಗಳ (1968) ಯುಎಸ್ ಒಪನ್ ಗೆದ್ದ ಬ್ರಿಟಿನ್‌ನ ಮೊದಲ ಆಟಗಾತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

× Chat with us