ಹಾಸನ: ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಮೂಲಕ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಅರಸೀಕರೆಯಿಂದ ತುಮಕೂರುವರೆಗೆ ಪಾದಯಾತ್ರೆ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ. ಕೊಬರಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಮೀನಾಮೇಷ ಎಣಿಸುವ ಮೂಲಕ ತನ್ನ ರೈತವಿರೋಧಿ ನೀತಿಯ್ನು ಜಾಹೀರು ಮಾಡುತ್ತಿದೆ ಎಂದು ಗುಡುಗಿದರು.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಹಾಸನ, ತುಮಕೂರು ಸೇರಿ ಹನ್ನೆರಡು, ಹದಿಮೂರು ಜಿಲ್ಲೆಗಳಲ್ಲಿ ಬೆಳೆಯುವ ಕೊಬರಿ ಬೆಲೆ ಶೇ.50ರಷ್ಟು ಕುಸಿದಿದೆ. ಕಳೆದ ಒಂದು ವರ್ಷದಿಂದ ಏಳೂವರೆ, ಎಂಟೂವರೆ ಸಾವಿರ ದರವನ್ನು ಮಾರುಕಟ್ಟೆಯಲ್ಲಿ ಕಾಣುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ತೆಂಗು ಬೆಳೆಗಾರರು ಖರ್ಚು ವೆಚ್ಚ ಏನಿದೆ, ಅದಕ್ಕೆ ಸರಕಾರ ಮಧ್ಯಸ್ಥಿಕೆ ವಹಿಸಿ ಆರ್ಥಿಕ ನೆರವು ಕೊಡಲು ಒತ್ತಾಯ ಮಾಡಿದ್ದಾರೆ.
12,00 ರೂ. ಬೆಂಬಲ ಕೊಟ್ಟು ಈ ಸರಕಾರ ರೈತರನ್ನು ಭಿಕ್ಷಕುರಂತೆ ನಡೆಸಿಕೊಂಡಿದೆ. 5000 ಕೋಟಿ ಕೆಜಿಗೆ ಕೊಬರಿಗೆ 11,5700 ಕೋಟಿ ರೂ. ನೀಡಿ ಕೇಂದ್ರ ಖರೀದಿ ಮಾಡಿದೆ. ಕೇಂದ್ರಕ್ಕೆ 590 ಕೋಟಿ ರೂ. ಬೆಂಬಲ ಬೆಲೆ ಕೇಂದ್ರ ಸರಕಾರಕ್ಕೆ ಹೊರೆಯಾಗುತ್ತದೆಯೇ? ಇದರಲ್ಲಿ ರಾಜ್ಯ ಸರಕಾರದ ಬೆಂಬಲ ಬೆಲೆ 60 ಕೋಟಿ ರೂ. ಸೇರುತ್ತದೆ. ಇವನ್ನೆಲ್ಲಾ ಸರಕಾರಗಳು ಎಂದು ಕರೀಬೇಕಾ? ಮೂರೂವರೆ ಲಕ್ಷ ರೂ. ಬಜೆಟ್ ಮಂಡನೆ ಮಾಡುವ ಸರಕಾರ ರೈತರನ್ನು ಯಾವ ರೀತಿ ನೋಡುತ್ತಿದೆ. ಕಾಂಗ್ರೆಸ್ ಪಕ್ಷದ ಸಂಸದನ ಮನೆಯಲ್ಲಿ 300 ಕೋಟಿ ಕಪ್ಪುಹಣ ಸಿಕ್ಕಿದೆ, ಇದು ನಮ್ಮ ದೇಶ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.
ಸಚಿವ ಶಿವಾನಂದ ಪಾಟೀಲ್ ಅವರು ಎರಡು ಲಕ್ಷ ಟನ್ ಕೊಬರಿ ಉತ್ಪಾದನೆ ಇದೆ ಎಂದು ಹೇಳಿದ್ದಾರೆ. ಅಷ್ಟನ್ನು ಎರಡು ಸರಕಾರಗಳು ಖರೀದಿ ಮಾಡಿದರೆ 2,500 ಕೋಟಿ ರೂ. ಬರಬಹುದು. 1,500 ಕೋಟಿ ರೂ. ಸರಕಾರಕ್ಕೆ ವಾಪಸ್ ಬರುತ್ತದೆ. ಈ ಸರಕಾರದ ನೀತಿಯನ್ನು ನಾಡಿನ ಜನತೆ, ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಮ್ಮ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಕೊಬರಿ ಬೆಳೆಯುವ ರೈತರಲ್ಲಿ ಮನವಿ ಮಾಡುತ್ತೇನೆ. ಎರಡು ಸರಕಾರಗಳ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರುವರೆಗೆ ಪಾದಯಾತ್ರೆ ಮಾಡುತ್ತೇನೆ.
ನನಗೆ ಆರೋಗ್ಯ ಸಮಸ್ಯೆಯಿದೆ, ಅದಕ್ಕೆ ಹೆದರಿ ಕೂರಲ್ಲ. ಅಧಿವೇಶನ ಮುಗಿದ ಮೇಲೆ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದ ಅವರು; ಎನ್‌ಡಿಎ ಜತೆ ಮೈತ್ರಿ ಆಗಿದೆ ಎಂದು ಮೃದುಧೋರಣೆ ತೋರಲ್ಲ. ನಾನೇ ಸಿಎಂ ಆಗಿ ಅಧಿಕಾರದಲ್ಲಿ ಇದ್ದಿದ್ದರೆ ಕ್ವಿಂಟಾಲ್ ಕೊಬರಿಗೆ ಹದಿನೈದು ಸಾವಿರ ರೂ. ಘೋಷಣೆ ಮಾಡುತ್ತಿದ್ದೆ. ನನ್ನ ಮನಸ್ಸಿಗೆ ನೋವಿದೆ, ಈ ಜನಗಳಲ್ಲಿ ಯಾವಾಗ ತಿಳಿವಳಿಕೆ ಬರುತ್ತದೆ ಎಂದು ಎಂದು ಅವರು ನೋವು ವ್ಯಕ್ತಪಡಿಸಿದರು.
ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ…
ಚಾಮರಾಜನಗರ: ಕರ್ತವ್ಯ ಮುಗಿಸಿ ಮನೆಗೆ ಬದ ತಕ್ಷಣ ಹೃದಯಾಘಾತ ಸಂಭವಿಸಿ ಎಎಸ್ಐ ಮೃತಪಟ್ಟಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.…
ಹುಣಸೂರು: ಇಲ್ಲಿನ ಜ್ಯುವೆಲ್ಲರಿ ಶಾಪ್ನಲ್ಲಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದ್ದು, ದರೋಡೆಕೋರರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.…
ಬೀದರ್: 99 ಲಕ್ಷ ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಎಫ್ಐಆರ್…
ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…