ಬೆಂಗಳೂರು : Google Pay,Paytm, phonepay ಹೀಗೆ UPI ಮೂಲಕ ವ್ಯವಹಾರ ನಡೆಸುವವರಿಗೆ ಇದು ಆಘಾತಕಾರಿ ಸುದ್ದಿ. ಹೌದು, ಏಪ್ರಿಲ್ 1, 2023 ರಿಂದ UPI ವಹಿವಾಟು ದುಬಾರಿಯಾಗಲಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಪಾವತಿಗೆ ಸಂಬಂಧಿಸಿದ ಸುತ್ತೋಲೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿದೆ. ಇದರ ಪ್ರಕಾರ, ಏಪ್ರಿಲ್ 1 ರಿಂದ ಯುಪಿಐ ಮೂಲಕ ನಡೆಸುವ ವಹಿವಾಟುಗಳ ಮೇಲೆ ‘ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕವನ್ನು ವಿಧಿಸಲು ಶಿಫಾರಸು ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ.
1.1 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಸಲಹೆ :
NPCI ಹೊರಡಿಸಿದ ಸುತ್ತೋಲೆಯಲ್ಲಿ, ಏಪ್ರಿಲ್ 1 ರಿಂದ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ 1.1 ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವಂತೆ ಸೂಚಿಸಲಾಗಿದೆ. ಈ ಶುಲ್ಕವನ್ನು ವ್ಯಾಪಾರ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಪಾವತಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತದೆ. ವ್ಯಾಲೆಟ್ ಅಥವಾ ಕಾರ್ಡ್ ಮೂಲಕ ಮಾಡಿದ ವಹಿವಾಟು PPI ನಲ್ಲಿ ಬರುತ್ತದೆ.
ಡಿಜಿಟಲ್ ಮೋಡ್ ಮೂಲಕ ಮಾಡುವ ಪೇಮೆಂಟ್ ಆಗಲಿವೆ ದುಬಾರಿ :
NPCI ಯ ಸುತ್ತೋಲೆಯ ಪ್ರಕಾರ ಏಪ್ರಿಲ್ 1 ರಿಂದ Google Pay, Phone Pay ಮತ್ತು Paytm ನಂತಹ ಡಿಜಿಟಲ್ ಮೋಡ್‌ಗಳ ಮೂಲಕ ಮಾಡಿದ ಪಾವತಿಗಳು ದುಬಾರಿಯಾಗುತ್ತವೆ. 2,000 ರೂ.ಗಿಂತ ಹೆಚ್ಚು ಹಣ ಪಾವತಿಸಿದರೆ, ಅದರ ಬದಲಿಗೆ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.
70 ಪ್ರತಿಶತದಷ್ಟು ಯುಪಿಐ ವಹಿವಾಟುಗಳು 2,000 ರೂಪಾಯಿಗಿಂತ ಹೆಚ್ಚಾಗಿರುತ್ತದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಏಪ್ರಿಲ್ 1 ರಿಂದ ನಿಯಮವನ್ನು ಜಾರಿಗೊಳಿಸಲಾಗುವುದು. ನಂತರ ಅದನ್ನು ಸೆಪ್ಟೆಂಬರ್ 30, 2023 ರ ಮೊದಲು ಪರಿಶೀಲಿಸಲಾಗುವುದು ಎಂದು ಎನ್‌ಪಿಸಿಐ ಸುತ್ತೋಲೆಯಲ್ಲಿ ಹೇಳಲಾಗಿದೆ.
ಹೊಸದಿಲ್ಲಿ : ಒಲಿಂಪಿಕ್ ಕನಸನ್ನು ಬೆನ್ನಟ್ಟಲು 18 ತಿಂಗಳ ವಿರಾಮದ ನಂತರ ಮತ್ತೆ ವಾಪಸ್ಸಾಗುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಘೋಷಿಸಿದ್ದಾರೆ.…
ಬೆಳಗಾವಿ : ಡಿನ್ನರ್ ಮೀಟಿಂಗ್ ಗಳ ಮೂಲಕ ತಾವು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ…
ಬೆಳಗಾವಿ : ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು…
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…