ಮಂಡ್ಯ: ಜನಾಶೀರ್ವಾದ ಯಾತ್ರೆ ಕೈಗೊಂಡ ಶೋಭಾ ಕರಂದ್ಲಾಜೆ

ಮದ್ದೂರು: ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯಗೆ ಸೋಮವಾರ ಆಗಮಿಸಿದರು.

ಮಂಡ್ಯದ ಗಡಿಭಾಗ ನಿಡಘಟ್ಟ ಬಳಿ ಸಚಿವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಶೋಭಾ ಅವರು ರುದ್ರಾಕ್ಷಿಪುರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಸಚಿವ ನಾರಾಯಣಗೌಡ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

× Chat with us