BREAKING NEWS

Under 19 Worldcup 2024: ಬಾಂಗ್ಲಾದೇಶದ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ

ನಿನ್ನೆಯಿಂದ ( ಜನವರಿ 19 ) ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಆರಂಭವಾಗಿದ್ದು, ಇಂದು ( ಜನವರಿ 20 ) ನಡೆದ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಬ್ಲೂಮ್‌ಫಾಂಟಿನ್‌ನ ಮಾಂಗೌಂಗ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ 84 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 251 ರನ್‌ ಕಲೆಹಾಕಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 252 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಬಾಂಗ್ಲಾದೇಶ 45.5 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಭಾರತದ ಇನ್ನಿಂಗ್ಸ್:‌ ಆರಂಭಿಕನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ ಆದರ್ಶ್‌ ಸಿಂಗ್‌ 76 ರನ್‌, ಅರ್ಷಿನ್‌ ಕುಲ್ಕರ್ಣಿ 7, ಮುಷೀರ್‌ ಖಾನ್‌ 3, ನಾಯಕ ಉದಯ್‌ ಸಹರಣ್‌ 64, ಪ್ರಿಯಂಶು ಮೊಲಿಯಾ 23, ಅರವೆಲ್ಲಿ ಅವಿನಾಶ್‌ 23, ಮುರುಗನ್‌ ಅಭಿಷೇಕ್‌ 4, ರಾಜ್‌ ಲಿಂಬಾನಿ ಅಜೇಯ 2 ಹಾಗೂ ಸಚಿನ್‌ ದಾಸ್‌ ಅಜೇಯ 26 ರನ್‌ ಗಳಿಸಿದರು.

ಬಾಂಗ್ಲಾದೇಶದ ಪರ ಮರುಫ್‌ ಮೃಧಾ 5 ವಿಕೆಟ್‌, ಚೌಧುರಿ ಮೊಹಮ್ಮದ್‌ ರಿಜ್ವಾನ್‌ ಹಾಗೂ ಮಹ್ಫಜುರ್‌ ರಹಮಾನ್‌ ರಾಬ್ಬಿ ತಲಾ ಒಂದೊಂದು ವಿಕೆಟ್‌ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್‌: ಆಶಿಖುರ್‌ ರಹಮಾನ್‌ ಶಿಬ್ಲಿ 14, ಜಿಶನ್‌ ಅಲಮ್‌ 14, ಚೌಧುರಿ ಮೊಹಮ್ಮದ್‌ ರಿಜ್ವಾನ್‌ ಡಕ್‌ಔಟ್‌, ಅರಿಫುಲ್‌ ಇಸ್ಲಾಂ 41, ಅಹ್ರರ್‌ ಅಮಿನ್‌ 5, ಮೊಹಮ್ಮದ್‌ ಶಿಹಬ್‌ ಜೇಮ್ಸ್‌ 54, ನಾಯಕ ಮಹ್ಫಜುರ್‌ ರಹಮಾನ್‌ ರಾಬ್ಬಿ 4, ರೋಹನತ್‌ ದೌಲಾ ಬೋರ್ಸೊನ್‌ ಡಕ್‌ಔಟ್‌, ಮೊಹಮ್ಮದ್‌ ಇಕ್ಬಾಲ್‌ ಹೊಸೈನ್‌ ಎಮ್ಮಾನ್‌ ಡಕ್‌ಔಟ್‌, ಮರುಫ್‌ ಮೃಧಾ 1 ಹಾಗೂ ಶೈಕ್‌ ಪೇವೆಝ್‌ ಜಿಬೊನ್‌ ಅಜೇಯ 15 ರನ್‌ ಗಳಿಸಿದರು.

ಭಾರತದ ಪರ ಸೌಮಿ ಪಾಂಡೆ 4 ವಿಕೆಟ್‌, ಮುಶೀರ್‌ ಖಾನ್‌ 2 ವಿಕೆಟ್‌, ರಾಜ್‌ ಲಿಂಬಾನಿ, ಅರ್ಶಿನ್‌ ಕುಲ್ಕರ್ಣಿ ಹಾಗೂ ಪ್ರಿಯಂಶು ಮೊಲಿಯಾ ತಲಾ ಒಂದೊಂದು ವಿಕೆಟ್‌ ಪಡೆದರು.

andolana

Recent Posts

ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ ; ತಮಿಳುನಾಡಿಗೆ 9,000 ಕ್ಯುಸೆಕ್‌ ನೀರು ಹರಿಸಲು ಆದೇಶ

ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ…

1 hour ago

ಮಳೆ ಕೊರತೆ ನೀಗಿಸಲು ಕೃತಕ ಮಳೆ ಅಸ್ತ್ರ : ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್

ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜಲಾಶಯಗಳಲ್ಲಿ ನೀರು ಕುಸಿತ - ನಾಳೆಯೇ ಏಜೆನ್ಸಿ ಅಂತಿಮ ಬೆಂಗಳೂರು : ರಾಜ್ಯದ…

3 hours ago

ವರ್ಷಕ್ಕೆ ಮೂರು ಸಿಲಿಂಡರ್ ಉಚಿತ – ತಮಿಳುನಾಡು ಜನರಿಗೆ ವಿಜಯ್‌ ಸರ್ಕಾರದ ಬಂಪರ್‌ ಆಫರ್‌!

ಚೆನ್ನೈ: ತಮಿಳುನಾಡಿನ ಜನರಿಗೆ ವಿಜಯ್‌ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದ್ದು, ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ವಿಚಾರದಲ್ಲಿ ಮಹತ್ವದ…

8 hours ago

ತಮಿಳುನಾಡಿಗೆ ಕಾವೇರಿ ನೀರು: ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ…

8 hours ago

ಕಲಾಪಗಳೇ ನಡೆಯದ ಅಧಿವೇಶನ

ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು…

10 hours ago

ಅಧಿಕಾರಿಗಳಿಗೆ ಚೆಲ್ಲಾಟ; ಅಲೆಮಾರಿಗಳ ಅಲೆದಾಟ

ರಮೇಶ್ ಹೆಚ್.ಕೆ. ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ ಸುದೀರ್ಘವಾದ ಒಳ ಮೀಸಲಾತಿ ಹೋರಾಟದ ಬಳಿಕ ಸದ್ಯ…

10 hours ago