ಉತ್ತರ ಪ್ರದೇಶ: ಉಮೇಶ್ ಪಾಲ್ ಮರ್ಡರ್ ಪ್ರಕರಣದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಯುಪಿ ಎಸ್‌ಟಿಎಫ್ ತಂಡ ಭರ್ಜರಿ ಯಶಸ್ಸು ಕಂಡಿದೆ. ಪ್ರಕರಣದ ಆರೋಪಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್ ಅವರನ್ನು ಎನ್‌ಕೌಂಟರ್ ಮಾಡಲಾಗಿದೆ.
ಝಾನ್ಸಿಯಲ್ಲಿ ಅತಿಕ್ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್ ನನ್ನು ಎನ್‌ಕೌಂಟರ್ ಮಾಡಲಾಗಿದೆ. ಎನ್‌ಕೌಂಟರ್‌ನಲ್ಲಿ ಅಸದ್ ಮತ್ತು ಶೂಟರ್ ಗುಲಾಮ್ ಸಾವನ್ನಪ್ಪಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಇಬ್ಬರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು.
ಅಸದ್-ಗುಲಾಮ್ ಇಬ್ಬರ ಪತ್ತೆಗೆ 5-5 ಲಕ್ಷ ಬಹುಮಾನ ಘೋಷಿಸಲಾಗಿತ್ತು :
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್ ಇಬ್ಬರೂ ಆರೋಪಿಗಳಾಗಿದ್ದರು. ಇಬ್ಬರ ಪತ್ತೆಗೆ 5 ಲಕ್ಷ ರೂಪಾಯಿ ಬಹುಮಾನ ಕೂಡಾ ಘೋಷಿಸಲಾಗಿತ್ತು. ಇದೀಗ ಯುಪಿ ಎಸ್‌ಟಿಎಫ್ ಡೆಪ್ಯುಟಿ ಎಸ್‌ಪಿ ನಾವೆಂದು ಮತ್ತು ಡೆಪ್ಯೂಟಿ ಎಸ್‌ಪಿ ವಿಮಲ್ ನೇತೃತ್ವದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರೂ ಹತರಾಗಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಿಂದ ವಿದೇಶಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…
ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…
ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…
ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…