ಕಾಲೇಜು ಆರಂಭಕ್ಕೆ ಯುಜಿಸಿ ಹೊರಡಿಸಿರುವ ಮಾರ್ಗಸೂಚಿಗಳೇನು?

ಹೊಸದಿಲ್ಲಿ: ಕೊರೊನಾ ಭೀತಿಯ ನಡುವೆಯೂ ಆಯಾ ರಾಜ್ಯಗಳಲ್ಲಿ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕಾಲೇಜು ತೆರೆಯುವ ಸಂಬಂಧ, ಅನುಸರಿಸಬೇಕಾದಂತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ನಿಯಮ ಪಾಲನೆ ಕಡ್ಡಾಯ ಎಂದು ಹೇಳಿದೆ.

ಬಹು ಮುಖ್ಯವಾಗಿ ಕೊರೊನಾ ನಿಯಂತ್ರಣ ಕ್ರಮಗಳಾದಂತ ಸಾರ್ವಜನಿಕ ಅಂತರ ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು ಸೇರಿದಂತೆ ವಿವಿಧ ವರ್ಗದವರ ಆರೋಗ್ಯದ ಹಿತದೃಷ್ಠಿಯಿಂದ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.

ಯಾವುದೇ ಕ್ಯಾಂಪಸ್ ಅನ್ನು ತೆರೆಯುವ ಮೊದಲು, ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಬೇಕು. ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.

ಮುನ್ನೆಚ್ಚರಿಕೆ ಕ್ರಮಗಳು

* ಕಾಲೇಜಿನ ಬೋಧಕ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
* ಕ್ಯಾಂಪಸ್‌ನಲ್ಲಿ ಬೋಧಕರು ಮತ್ತು ಸಿಬ್ಬಂದಿಗಳು ಸೋಂಕು ನಿವಾರಕ ಕ್ರಮಗಳನ್ನು ಅನುಸರಿಸಬೇಕು.
* ಸೋಂಕು ಪತ್ತೆ ಹಚ್ಚುವ ಕ್ರಮವಹಿಸಿ, ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು.
* ಶೈಕ್ಷಣಿಕ ಕ್ಯಾಲೆಂಡರ್, ಬೋಧನೆ-ಕಲಿಕೆ ವಿಧಾನಗಳು, ಪರೀಕ್ಷೆಗಳು, ಮೌಲ್ಯಮಾಪನ ಇತ್ಯಾದಿಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಡಬೇಕು.
* ವಿವಿಧ ಸನ್ನಿವೇಶಗಳು ಮತ್ತು ಸಮಸ್ಯೆಗಳನ್ನು ನಿರ್ವಹಿಸಲು ಒಂದು ಕಾರ್ಯ ಸಮೂಹವನ್ನು ರಚಿಸಬೇಕು

ಪೋಷಕರು ಪಾಲಿಸಬೇಕಾದ ಕ್ರಮಗಳು

* ಪೋಷಕರು ತಮ್ಮ ಮಕ್ಕಳು ಆರೋಗ್ಯವಾಗಿರದಿದ್ದರೆ ಹೊರಗೆ ಹೋಗಲು ಬಿಡಬಾರದು.
* ʻಆರೋಗ್ಯ ಸೇತು ಆ್ಯಪ್ʼ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಪೋಷಕರು ಸಲಹೆ ನೀಡಬೇಕು.
* ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಪೋಷಕರು ಅವರಿಗೆ ಅರಿವು ಮೂಡಿಸಬೇಕು.
* ಪೋಷಕರು ಮಕ್ಕಳಿಗೆ ವ್ಯಾಯಾಮ, ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳನ್ನು ರೂಢಿಸಿಕೊಳ್ಳುತ್ತಾ, ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸಬೇಕು.

× Chat with us