video… ನಾಗರಹೊಳೆಯಲ್ಲಿ ಎದೆ ಝಲ್‌ ಎನಿಸುವ ಹುಲಿಗಳ ಕಾದಾಟ!

ಎಚ್.ಡಿ.ಕೋಟೆ: ನೆಲೆಗಾಗಿ ಎರಡು ಹುಲಿಗಳು ಕಾದಾಟ ನಡೆಸಿರುವ ಅಪರೂಪದ ದೃಶ್ಯವೊಂದು ಇಂದು (ಸೋಮವಾರ) ನಾಗರಹೊಳೆಯ ಸಫಾರಿಯ ವೇಳೆ‌ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಎರಡು ಹುಲಿಗಳು ಕಾದಾಟಕ್ಕೆ ಇಳಿದಿರುವ ದೃಶ್ಯವೊಂದು ಪ್ರವಾಸಿಗರ ಎದೆ ಝಲ್ ಎನಿಸುವಂತೆ ಮಾಡಿದೆ.

ನೆಲೆಯ ವಿಚಾರವಾಗಿ ಸಾಕಷ್ಟು ಬಾರಿ ಇಂತಹ ಕಾದಾಟಗಳು ಹುಲಿಗಳಲ್ಲಿ ನಡೆದಿರುವುದು ಸಾಮಾನ್ಯ. ಈ ವೇಳೆ ಸಾಕಷ್ಟು ಹುಲಿಗಳು ಗಾಯಗೊಂಡಿರುವುದು ಅಥವ ಸಾವನ್ನಪಿರುವ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಆದರೆ ಅಪರೂಪಕ್ಕೆ ಇಂತಹ ಕಾದಾಟವೊಂದು ನಾಗರಹೊಳೆಯಲ್ಲಿ ಕ್ಯಾಮೆರಾಗೆ ಸೆರೆಯಾಗಿರುವುದು ವಿಶೇಷವಾಗಿದೆ.

× Chat with us