ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಗಳಲ್ಲಿ ಹಿಡಿದ ಪೊಲೀಸರು!

ಗುಂಡ್ಲುಪೇಟೆ: ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಾಗಮ್ಮ ಎಂಬವರ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಮಾಡ್ರಹಳ್ಳಿ ಗ್ರಾಮದ ಪುನೀತ್(23), ಗುಂಡ್ಲುಪೇಟೆ ಪಟ್ಟಣದ ರೆಹನ್ ನಜೀರ್(19) ಬಂಧಿತರು.

ಬಂಧಿತರಿಂದ 40 ಗ್ರಾಂ ಚಿನ್ನದ ಎರಡು ಚೈನು, 15 ಗ್ರಾಂ ಚಿನ್ನದ ಒಂದು ಚೈನು, 6 ಗ್ರಾಂನ ಒಂದು ಜೊತೆ ಓಲೆ, 3 ಗ್ರಾಂನ ಒಂದು ಉಂಗುರ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ನಾಗಮ್ಮ ಅವರು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರ ಮನೆಯ ಮೇಲ್ಚಾವಣಿಯ ಹೆಂಚನ್ನು ತೆಗೆದು ಮನೆಯೊಳಗೆ ಇದ್ದ ಬೀರುವನ್ನು ಹೊಡೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

× Chat with us